News Karnataka Kannada
Monday, May 06 2024
ಮಂಗಳೂರು

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ

Macchina
Photo Credit :

ಬೆಳ್ತಂಗಡಿ: ಶಿಕ್ಷಣ ಎನ್ನುವುದು ಶ್ರೀಮಂತ ಸೊತ್ತಾಗದೆ, ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿದೆ ಎಂಬುದನ್ನು ಮರೆತು ನಮಗೆ ಇಚ್ಛೆ ಇದ್ದರೆ ಶಕ್ತಿ ಇದ್ದರೆ ನಾವು ಕೂಡ ಎಲ್ಲ ವರ್ಗದ ಮಕ್ಕಳೊಂದಿಗೆ ಸ್ಪರ್ಧೆ ಮಾಡಿ ವೈದ್ಯರು ಅಥವಾ ಎಂಜಿನಿಯರ್ ಅಗಲು ನಮ್ಮ ಸಮಾಜ, ಸರಕಾರ, ವ್ಯವಸ್ಥೆ ಕಲ್ಪಿಸಿಕೊಟ್ಟಿದೆ ಎಂದು ಅಥೈಸಿ ಶಿಕ್ಷಣದಲ್ಲಿ ತಲ್ಲೀನರಾದರೆ ಉತ್ತಮ ಅವಕಾಶ ಸಿಗುತ್ತದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್, ಸ್ಮಾರ್ಟ್ ಕ್ಲಾಸ್ ತರಗತಿಗೊಂದು ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯದಲ್ಲಿ 792 ಶಾಲೆಗಳಲ್ಲಿ 35,267 ಮಕ್ಕಳು ಎಸೆಸೆಲ್ಸಿ ಪರೀಕ್ಷೆ ಬರೆದಿದ್ದಾರೆ. 35248 ಮಕ್ಕಳು ಪ್ರಥಮ ಮತ್ತು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ ಅದರಲ್ಲಿ 9 ಮಕ್ಕಳು 265 ಅಂಕ ಪಡೆದಿದ್ದು, ಮಚ್ಚಿನ ಶಾಲೆಯ ರೋಷನ್ ಇರುವುದು ಹೆಮ್ಮೆಯ ವಿಚಾರ. ಒಟ್ಟಾರೆ ಈ ಶಾಲೆ ಕರ್ನಾಟಕ ರಾಜ್ಯದಲ್ಲಿ ಬಹುದೊಡ್ಡ ಗೌರವಕ್ಕೆ ಪಾತ್ರವಾಗಿದೆ.

ಮೊರಾರ್ಜಿ ಶಾಲೆಗೆ ಸಂಬಂಽಸಿ ೧೪ ಮಕ್ಕಳು ಐಐಟಿ ಮತ್ತು ಸಮಾನದಾಂತ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಬಡವರ ಮಕ್ಕಳು ಐಐಟಿ ಸಂಸ್ಥೆ ಸೇರುವುದೇ ದಾಖಲೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾವ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರೋ ಅದೇ ಸಂಸ್ಥೆಯಲ್ಲಿ ನಮ್ಮ ರಾಜ್ಯದ ಮಕ್ಕಳು ಶಿಕ್ಷಣ ಪಡೆದು ವಿದೇಶ ವ್ಯಾಸಂಗ ಮಾಡುತ್ತಿದ್ದಾರೆ ಎಂದರೆ ನಾವೆಲ್ಲ ಊಹೆ ಮಾಡುವುದಕ್ಕಿಂತ ಅಧಿಕ ಕೆಲಸ ನಮ್ಮ ಶಿಕ್ಷಣ ವ್ಯವಸ್ಥೆ ಮಾಡುತ್ತಿದ್ದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೊರಾರ್ಜಿ ದೇಸಾಯಿ ಶಾಲೆಯನ್ನು ಸಾಮಾನ್ಯ ವರ್ಗದ ಬಡ ಮಂದಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ರಾಜ್ಯದಲ್ಲಿ ವಸತಿಯುತ ಶಾಲೆಯನ್ನು ಸ್ಥಾಪನೆ ಮಾಡಿದೆ. ಈ ಬಾರಿ ಸಿಬಂದಿ ವರ್ಗದ ಕೊರತೆ ನಡುವೆಯೂ ಎಸೆಸೆಲ್ಸಿಯಲ್ಲಿ ಶೇ.೯೯.೨ ಫಲಿತಾಂಶ ಪಡೆದಿರುವುದಕ್ಕೆ ರಾಜ್ಯದ ಸಿಬಂದಿ ವರ್ಗವನ್ನು ಅಭಿನಂದಿಸುತ್ತೇನೆ ಎಂದರು.

೨೦೨೧-೨೨ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ರೋಶನ್ ಮತ್ತು ನಿರಂಜನ್ ಅವರಿಗೆ ಸಚಿವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಚ್ಚಿನ ಗ್ರಾ.ಪಂ. ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಸದಸ್ಯರಾದ ಚಂದ್ರಶೇಖರ್, ಮಚ್ಚಿನ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಮಾಜಿ ತಾ.ಪಂ. ಸದಸ್ಯ ವಸಂತಿ ಹಾಗೂ ಪ್ರಾಚಾರ್ಯರು, ಬೋಧಕ ಬೋಧಕೇತರ ವೃಂದ ಮತ್ತು ಪೋಷಕರು ಉಪಸ್ಥಿತರಿದ್ದರು.

ಶಿಕ್ಷರಿಗೆ ವೇತನ ಪರಿಷ್ಕರಣೆ, ಪ್ರಮೋಷನ್, ಮುಂಬಡ್ತಿ ಹಿಂಬಡ್ತಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನ ಪಡಲಾಗುತ್ತಿದೆ. ಕೊರೊನಾದಿಂದ ಸಿಬಂದಿಗೆ ಪೂರ್ಣಪ್ರಮಾಣದಲ್ಲಿ ವೇತನ ಪರಿಷ್ಕರಣೆ ಮಾಡಲಾಗಿಲ್ಲ. ಸದ್ಯದಲ್ಲೆ ಸಭೆ ಕರೆದು ಸಮಸ್ಯೆ ಬಗೆಹರಿಸಿ ವಾರ್ಡನ್ ನೇಮಕಾತಿ ಮಾಡಲು ಮುಂದಾಗಿದ್ದೇವೆ. ಈ ವರ್ಷದಿಂದ ೬ನೇ ತರಗತಿಯಿಂದ ಎಲ್ಲ ಹೆಣ್ಣು ಮಕ್ಕಳಿಗೆ ಕರಾಟೆ ತರಗತಿಯನ್ನು ವಿಸ್ತರಿಸಬೇಕು ಎಂಬ ಯೋಚನೆಯಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು