News Karnataka Kannada
Saturday, April 27 2024
ಮಂಗಳೂರು

ಪ್ರೊ. ಯಶೋವರ್ಮರವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ

Yashovarma
Photo Credit :

ಬೆಳ್ತಂಗಡಿ: ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊಫೆಸರ್ ಯಶೋವರ್ಮರವರು ಅನಾರೋಗ್ಯದಿಂದ ದಿನಾಂಕ
22-5-2022 ರಂದು ಸಿಂಗಪುರದಲ್ಲಿ ವಿಧಿವಶರಾಗಿರುತ್ತಾರೆ.

1993 ನೇ ಇಸವಿಯಿಂದ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನ್ ಟ್ರಸ್ಟ್‍ನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ, ಪ್ರೊಫೆಸರ್ ಯಶೋವರ್ಮರವರು 2015 ರವರೆಗೆ ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ
ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ನಿಕಟವರ್ತಿಯಾಗಿದ್ದ ಅವರು ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಸಹೋದರರಾಗಿದ್ದರು. ಪ್ರೊಫೆಸರ್ ಯಶೋವರ್ಮರವರ ಪಾರ್ಥಿವ ಶರೀರವನ್ನು ಕರೆತರಲು ಕೇಂದ್ರ ಸರಕಾರದ ಸಹಕಾರದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಮಂಗಳವಾರ ಮುಂಜಾನೆ ಬೆಂಗಳೂರಿಗೆ ವಿಮಾನದಲ್ಲಿ ಬಂದಿಳಿಯಲಿದೆ. ತದನಂತರ
ಉಜಿರೆಗೆ ರಸ್ತೆ ಮೂಲಕ ಕರೆತರಲು ವ್ಯವಸ್ಥೆ ಮಾಡಲಾಗಿದೆ.

ಅಂತಿಮ ದರ್ಶನಕ್ಕೆ ವ್ಯವಸ್ಥೆ :
ಮಂಗಳವಾರ ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಪ್ರೊl ಯಶೋವರ್ಮರವರ ಪಾರ್ಥಿವ ಶರೀರ ಕರೆತರುವ ವಾಹನವು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮವನ್ನು ಪ್ರವೇಶಿಸಲಿದ್ದು, ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಿಂದ ಉಜಿರೆ ವೃತ್ತದವರೆಗೆ ಸರ್ವಾಲಂಕೃತ ವಾಹನದಲ್ಲಿ ನೂರಾರು ಅಭಿಮಾನಿಗಳ ವಾಹನ ಜಾಥಾದಲ್ಲಿ ಕರೆತರಲಾಗುವುದು.

ನಂತರ ಉಜಿರೆ ವೃತ್ತದಿಂದ ಎಸ್.ಡಿ.ಎಂ. ಕಾಲೇಜಿನವರೆಗೆ ಅಭಿಮಾನಿಗಳ ಪಾದಯಾತ್ರೆಯ ಮೆರವಣಿಗೆಯಲ್ಲಿ ಕರೆತಂದು ಅಂತಿಮ ದರ್ಶನಕ್ಕೆ ಉಜಿರೆ ಕಾಲೇಜಿನಲ್ಲಿ ಮಧ್ಯಾಹ್ನ 2.00 ರಿಂದ 5.30 ರವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರೊl ಯಶೋವರ್ಮರವರ ಅಂತಿಮ ದರ್ಶನ ವ್ಯವಸ್ಥೆಯ ಕುರಿತಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಸ್ಥಳ ಪರಿಶೀಲನೆ ನಡೆಸಿದರು. ಮೃತರ ಗೌರವಾರ್ಥ ಪ್ರೊ. ಯಶೋವರ್ಮರವರ ಅಂತಿಮ ದರ್ಶನ ಪಡೆಯಲು ಮಂಗಳವಾರ ಮುಂಜಾನೆ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉಜಿರೆ ಪೇಟೆಯ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಸ್ಥಗಿತಗೊಳಿಸುವುದಾಗಿ ವರ್ತಕ ಸಂಘದ ಅಧ್ಯಕ್ಷ ಅರವಿಂದ್ ಕಾರಂತರವರು ತಿಳಿಸಿದ್ದಾರೆ.

ಇದೇ ಸಂದರ್ಭ ಉಜಿರೆ ಪೇಟೆಯಲ್ಲಿ ಹರತಾಳ ಆಚರಿಸುವುದಾಗಿ ಉಜಿರೆ ಆಟೋರಿಕ್ಷಾ ಮಾಲಕ ಚಾಲಕ ಸಂಘ ಮತ್ತು ಗ್ಯಾರೇಜ್ ಮಾಲಕರ ಸಂಘವು ನಿರ್ಧರಿಸಿರುತ್ತದೆ. ಈ ಸಂಬಂಧ ಉಜಿರೆ ಕಾಲೇಜಿನಲ್ಲಿ ನಡೆದ ಸಮಾಲೋಚನಾ ಸಭೆಯ ನೇತ್ರತ್ವ ವಹಿಸಿ
ಮಾತನಾಡಿದ ಶಾಸಕರು ಉಜಿರೆ ಗ್ರಾಮವಲ್ಲದೆ ಇಡೀ ನಾಡಿನ ಶಿಕ್ಷಣ ವ್ಯವಸ್ಥೆಗೆ ಪ್ರೊ. ಯಶೋವರ್ಮರವರು ಅನನ್ಯ ಕಾಣಿಕೆಯನ್ನು ನೀಡಿದ್ದು, ಅವರ ಅಂತಿಮ ಯಾತ್ರೆಯು ಗೌರವಯುತವಾಗಿ ನಡೆಸುವಂತೆ ಸಹಕಾರ ನೀಡಬೇಕೆಂದು ಕೋರಿದರು.

ಸಭೆಯಲ್ಲಿ ಉಜಿರೆ ಗ್ರಾಮದ ಹಿರಿಯ ನಾಗರಿಕರು, ಎಸ್.ಡಿ.ಎಂ. ಕಾಲೇಜಿನ ಪ್ರಾಚಾರ್ಯ ಮತ್ತಿತರ ಅಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು, ಶರತ್‍ಕೃಷ್ಣ ಪಡ್ವೆಟ್ಣಾಯ, ಲಕ್ಷ್ಮೀ ಗ್ರೂಪ್ಸ್‌ನ ಮೋಹನ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಬೆಳ್ತಂಗಡಿ ಆರಕ್ಷಕ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು