News Karnataka Kannada
Saturday, April 27 2024
ಮಂಗಳೂರು

ಪ್ರಾಚೀನ ಕಾವ್ಯವನ್ನು ಆಧುನಿಕ ಕಾಲಕ್ಕೆ ಕೊಡುವ ಪ್ರಯತ್ನದ ಫಲ‘ಚಾರುವಸಂತ’:ಹಂಪ ನಾಗರಾಜಯ್ಯ

Book .
Photo Credit :

ರಾಮಾಯಣ, ಮಹಾಭಾರತದಷ್ಟೇ ಪ್ರಾಚೀನವಾದ ಮತ್ತು ಶ್ರೇಷ್ಠ ಕೃತಿಯ ಮೂಲದಿಂದ ಮೂಡಿದ ಮಹಾಕಾವ್ಯ ಚಾರುವಸಂತ ಎಂದು ನಾಡೋಜ ಹಂಪ ನಾಗರಾಜಯ್ಯ ತಿಳಿಸಿದರು.

2022 ಏಪ್ರಿಲ್‌ 10 ಭಾನುವಾರದಂದು ಬೆಳಗ್ಗೆ 11.00 ಗಂಟೆಗೆ ಬೆಂಗಳೂರಿನ ವಿಮಾನಪುರದ ಕೈರಳೀ ನಿಲಯಂ ಸ್ಕೂಲಿನ ಆವರಣದಲ್ಲಿ ನಡೆದ ‘ಚಾರುವಸಂತ’ ಮಲಯಾಳಂ ಭಾಷೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`2003 ರಲ್ಲಿ ‘ಚಾರುವಸಂತ’ ಎಂಬ ಕಾವ್ಯ ಬರೆದೆ. ನನ್ನ ಮಾತೃಭಾಷೆ, ಕನ್ನಡದಲ್ಲಿ ಈ ಮಹಾಕಾವ್ಯ ಬರೆದೆ. ನಾನು ಪ್ರಧಾನವಾಗಿ ಸಂಶೋಧಕ, ಗಂಭೀರ ಸಾಹಿತ್ಯದಲ್ಲಿ ನನ್ನ ಅಧ್ಯಯನ, ಆಸಕ್ತಿ ಇದ್ದದ್ದು. ಆದರೆ ಒಮ್ಮೆಲೆ ಶ್ರೇಷ್ಠ ಕನ್ನಡ ಕಾವ್ಯವನ್ನ ಓದುತ್ತಾ ನನ್ನೊಳಗೆ ಒಬ್ಬ ಕವಿ ಮೂಡಿದ್ದ, ಇದ್ದಕ್ಕಿದ್ದಂತೆ ತಾಯಿ ಶಾರದೆ ನನ್ನ ಕನಸ್ಸಿನಲ್ಲಿ ಕಾಣಿಸಿಕೊಂಡು ಈ ಮಹಾಕಾವ್ಯ ರಚಿಸಲು ತಿಳಿಸಿದಳು. ಒಂದೇ ತಿಂಗಳಲ್ಲಿ ಈ ಕಾವ್ಯವನ್ನು ಬರೆದೆ’ ಎಂದರು.

ಜೊತೆಗೆ, ಚಾರುವಸಂತ ಬಹಳ ಪ್ರಾಚೀನ ಕತೆ, ಗುಣಾಡ್ಯನ ಬೃಹತ್ ಕತೆ ಸಂಸ್ಕೃತದಲ್ಲಿ ಕ್ರಿಸ್ತಪೂರ್ವ 2ನೇ ಶತಮಾನದಲ್ಲಿ ರಚನೆಯಾದರೆ ಮುಂದೆ ಹಲವು ಭಾಷೆಗಳಲ್ಲಿ ಈ ಕತೆ ಬೆಳೆಯುತ್ತಾ ಹೋಯಿತು. ಇದೇ ಕತೆಯನ್ನು ಮೂಲವಾಗಿರಿಸಿ ಚಾರುವಸಂತ ಮಹಾಕಾವ್ಯ ರಚನೆಯಾಗಿದೆ. ಪ್ರಾಚೀನ ಕೃತಿಗಳನ್ನು ಆಧುನಿಕ ಕಾಲಕ್ಕೆ ಕೊಡಬೇಕೆನ್ನುವ ಆಶಯದೊಂದಿಗೆ ರಚನೆಯಾದ ಕಾವ್ಯವಿದು. ಈ ಮಹಾಕಾವ್ಯ ಹದಿನೈದು ಭಾಷೆಗಳಿಗೆ ಅನುವಾದಗೊಂಡಿದೆ. ಈಗ ಮಲಯಾಳಂ ಲೇಖಕ, ಅನುವಾದಕ ಪಯ್ಯನೂರು ಕುಂಜಿರಾಮನ್ ಅವರು ಮಲೆಯಾಳಂಗೆ ಅನುವಾದಿಸಿರುವ ಕೃತಿ ಬಿಡುಗಡೆಯಾಗುತ್ತಿದೆ. ಇದು ಬಹಳ ಸಂಭ್ರಮದ ವಿಚಾರ. ಮಲಯಾಳಂಗೂ ನನಗೂ ಅವಿನಾಭಾವ ಸಂಬಂಧವಿದೆ, ಅಲ್ಲಿ ನನ್ನ ಅನೇಕ ಬಂಧುಗಳಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಜೊತೆಗೆ, ಮಹಾಕಾವ್ಯ ಚಾರುವಸಂತದ ಕುರಿತು ವಿವರಿಸಿದರು. ಇದೇ ವೇಳೆ, ಮಲಯಾಳಂ ಸಾಹಿತ್ಯ ಮತ್ತು ಸಾಹಿತಿಗಳೊಂದಿಗೆ ತಮ್ಮ ಒಡನಾಟವನ್ನು ನೆನೆದರು.
ಮಲಯಾಳಂ ಅನುವಾದಿತ ಚಾರುವಸಂತ ಕೃತಿ ಲೋಕಾರ್ಪಣಾ ಸಮಾರಂಭ:

ಕನ್ನಡದ ಬಹುಮುಖ್ಯ ಲೇಖಕರ ಕೃತಿಗಳನ್ನು ಮಲಯಾಳಂ ಗೆ ಅನುವಾದಿಸಿ ಪ್ರಕಟಿಸಿರುವ ಮಾತೃಭೂಮಿ ಸಂಸ್ಥೆ ಈ ಕೃತಿಯನ್ನು ಪ್ರಕಟಿಸಿದ್ದು, ಮಾತೃಭೂಮಿ ಸಂಸ್ಥೆಯ ನಿರ್ದೇಶಕ ಶ್ರೀ ವಿಜಯಪದ್ಮನ್ ಅವರ ಮಗಳು ಮೇಘ ವಿಜಯಪದ್ಮನ್ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಅವರು ಮಾತನಾಡಿ, ಭಾರತ ಸಾಹಿತ್ಯಲೋಕದ ಬಹುಮುಖ್ಯ ಕೃತಿಗಳಲ್ಲಿ ಚಾರುವಸಂತ ಮಹಾಕಾವ್ಯವೂ ಒಂದು. ಪ್ರಾಚೀನ ಕೃತಿಯ ಮೂಲದಿಂದ ಆಧುನಿಕ ಕಾಲ ಘಟಕ್ಕೆ ಹೊಂದುವಂತೆ ಕಾವ್ಯವನ್ನು ರಚಿಸಿರುವ ಹಂಪ ನಾಗರಾಜಯ್ಯ ಅವರು ಮೂಲಕೃತಿಗಿಂತಲೂ ಭಿನ್ನವಾಗಿ ಈ ಮಹಾಕಾವ್ಯವನ್ನು ರಚಿಸಿದ್ದಾರೆ ಎಂದರು. ಅಲ್ಲದೇ ಕನ್ನಡದ ಪ್ರಮುಖ ಲೇಖಕರಾದ ಯು.ಆರ್. ಅನಂತಮೂರ್ತಿ, ಕೃಷ್ಣ ಆಲನಹಳ್ಳಿ, ನಿರಂಜನ ಸೇರಿದಂತೆ ಹಲವು ಶ್ರೇಷ್ಠ ಲೇಖಕರ ಕೃತಿಯನ್ನು ಅನುವಾದಿಸಿ ಪ್ರಕಟಿಸಿರುವ ಮಾತೃಭೂಮಿ ಸಂಸ್ಥೆ ಚಾರುವಸಂತವನ್ನು ಪ್ರಕಟಿಸುತ್ತಿರುವುದು ಸಂತಸದ ವಿಚಾರ ಎಂದರು.

ಅನುವಾದಕ ಪಯ್ಯನೂರು ಕುಂಜಿರಾಮನ್, ಮೋಹನ ಕುಂಟಾರ್, ನಾಡೋಜ ಕಮಲಾ ಹಂಪನ, ನಾಡೋಜ ಹಂಪ.ನಾಗರಾಜ್ಯ, ಸುಧೀಶ್ ಪಿ.ಕೆ., ಸುಧಾಕರನ್ ರಾಮಂಥಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು