ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜೂ. 6ರಂದು ಬೆಳಿಗ್ಗೆ ಗಂಟೆ 10 ಗಂಟೆಗೆ ವಿಜ್ಞಾನ ಕೇಂದ್ರದ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಜರಗಿತು.
ಪ್ರಾದೇಶಿಕ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ವೆಂಕಟೇಶ್ ಜಿ, ಹಾಗೂ ಮುಖ್ಯ ಅಥಿತಿಗಳಾಗಿ ದ.ಕ ಜಿಲ್ಲೆಯ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಅಧ್ಯಕ್ಷರಾದ ಸಿ. ಎ ಶಾಂತರಾಮ ಶೆಟ್ಟಿ, ಮಂಗಳೂರು ಸಿಟಿ, ರೋಟರಿ ಕ್ಲಬ್ ಅಧ್ಯಕ್ಷರಾದ ಕೆನ್ಯೂಟ್ ಜೀವನ್ ಪಿಂಟೋ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಪಿ.ಎ ಕಾಲೇಜು, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪಾಲಾಕ್ಷಪ್ಪ, “ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ” ಕುರಿತು ವಿಶೇಷ ಉಪನ್ಯಾಸ ನೀಡಿದರು. ನಂತರ ಹರ್ಬೇರಿಯಂ, ಬೊಟ್ಯಾನಿಕಲ್ ಮ್ಯೂಸಿಯಂ ಮತ್ತು ಸಸ್ಯಕಾಶಿಗೆ ಭೇಟಿ ನೀಡಿದರು.