ಬೆಳ್ತಂಗಡಿ ; ತಾಲೂಕಿನ ಪಟ್ರಮೆ ಗ್ರಾಮದ ಕಣ್ಮಣಿ ನಿವಾಸಿ ಲೀಲಾ ಕೆ. ಭಟ್ (71) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ರಾತ್ರಿ ತುಮಕೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ನಿಧನರಾದರು.
ಮೃತರು ಪತಿ, ನಿವೃತ್ತ ಮುಖ್ಯೋಪಾಧ್ಯಾಯ ಕಡಂಬಿಲ ಭೀಮ ಭಟ್, ಪುತ್ರಿಯರಾದ ಮಾಲತಿ, ಗಾಯತ್ರಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ ಹಾಗೂ ಬಂಧುಗಳನ್ನು ಅಗಲಿದ್ದಾರೆ.