News Karnataka Kannada
Saturday, May 11 2024
ಮಂಗಳೂರು

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರೀಡಾಪಟು ಪೂವಮ್ಮ

Poovamma
Photo Credit :

ಮಂಗಳೂರು : ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ಹಾಗೂ ಒಲಂಪಿಯನ್, ಕರ್ನಾಟಕದ ಕ್ರೀಡಾಪಟು ಎಂ.ಆರ್.ಪೂವಮ್ಮ ಅವರು ಕೇರಳದ ಅಥ್ಲೀಟ್ ಜಿತಿನ್ ಜೊತೆ ಬುಧವಾರ ಮಂಗಳೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಮಂಗಳೂರಿಗೆ ಹೊರ ವಲಯದ ಅಡ್ಯಾರ್ ಗಾರ್ಡನ್‌ನ ವಿ. ಕೆ. ಶೆಟ್ಟಿ ಸಭಾಂಗಣದಲ್ಲಿ ಕೊಡವ ಸಾಂಪ್ರದಾಯಿಕ ಶೈಲಿಯಲ್ಲಿ ವಿವಾಹ ನೆರವೇರಿತು. ಪೂವಮ್ಮ ಅವರ ತಂದೆ ಮಚ್ಚೆಟ್ಟಿರ ಜಿ.ತಮ್ಮಯ್ಯ(ರಾಜು), ತಾಯಿ ಜಾನಕಿ (ಜಾಜಿ), ಜಿತಿನ್ ಅವರ ತಾಯಿ ಜಾನ್ಸಿ ಸೇರಿದಂತೆ ಕುಟುಂಬಸ್ಥರು, ಬಂಧುಮಿತ್ರರು, ಕ್ರೀಡಾಪಟುಗಳು ಹಾಗೂ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

ಕೊಡಗು ಮೂಲದ ೩೧ ವರ್ಷದ ಪೂವಮ್ಮ ಅವರು ೨೦೧೪ರಲ್ಲಿ ಇಂಚೋನ್ ಏಷ್ಯಾಡ್‌ನಲ್ಲಿ ೧ ಚಿನ್ನ, ೧ ಕಂಚು ಮತ್ತು ೨೦೧೮ರ ಜಕಾರ್ತ ಏಷ್ಯಾಡ್‌ನಲ್ಲಿ ೨ ಚಿನ್ನ ಪದಕ ಗೆದ್ದಿದ್ದರು. ಜ.೧ರಂದು ಪೂವಮ್ಮರ ಪತಿ ಜಿತಿನ್ ಅವರ ಊರು ಕೇರಳದ ತ್ರಿಶೂರಿನಲ್ಲಿ ಮತ್ತೊಂದು ಕಾರ್ಯಕ್ರಮ ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು