News Karnataka Kannada
Saturday, May 04 2024
ಮಂಗಳೂರು

ಡಿ.3ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ

Power Production
Photo Credit :

ಮಂಗಳೂರು : ನಗರದ ಕದ್ರಿ ಉಪಕೇಂದ್ರದಿಂದ ಹೊರಡುವ ಕರಂಗಾಲ್ಪಾಡಿ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಯ ಹಿನ್ನಲೆಯಲ್ಲಿ ಡಿ.3ರ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವ್ಯಾಸರಾವ್ ರೋಡ್, ಪಿಂಟೋಸ್ ಲೇನ್, ವಿನಯ ನರ್ಸಿಂಗ್ ಹೋಂ, ಶ್ರಿದೇವಿ ನರ್ಸಿಂಗ್ ಹೋಂ, ಕರಂಗಲ್ಪಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನಗರದ ಅಳಕೆ ಉಪಕೇಂದ್ರದಿಂದ ಹೊರಡುವ ಪ್ರಗತಿನಗರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಓಎಸ್ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಡಿ.3ರ ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಪಾಸ್‌ಪೋರ್ಟ್ ಕಚೇರಿ, ಕೋಡಿಯಾಲ್ಬೈಲ್, ಕೆನರಾ ಹೈಸ್ಕೂಲ್ ಹಿಂದುಗಡೆ, ಡೊಂಗರಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.

ನಗರದ ಕುಲಶೇಖರ ಉಪಕೇಂದ್ರದ ಶಕ್ತಿ ಪರಿವರ್ತಕ-1 ರಲ್ಲಿ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಡಿ.3ರ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಪಂಪ್‌ವೆಲ್, ಕಣ್ಣೂರು, ನೀರುಮಾರ್ಗ, ಪದವು, ಎಕ್ಕೂರು, ಶಕ್ತಿನಗರ, ಕೆನರಾ ವರ್ಕ್‌ಶಾಪ್, ಅಡ್ಯಾರ್, ಕುಡುಪು ಮತ್ತು ನಂತೂರು, ಮರೋಳಿ, ನಾಗುರಿ, ಗರೋಡಿ, ಕಪಿತಾನಿಯೋ, ಉಜ್ಜೋಡಿ, ಕುಲಶೇಖರ, ಸರಿಪಳ್ಳ, ದರ್ಬಾರ್ ಗುಡ್ಡೆ, ಜಲ್ಲಿಗುಡ್ಡೆ, ವೀರನಗರ, ಪಕಲಡ್ಕ, ಬಜಾಲ್, ಜೆಪ್ಪಿನಮೊಗರು, ಎಕ್ಕೂರುಗುಡ್ಡೆ, ಯೆಯ್ಯೆಡಿ, ಬಿಕರ್ನಕಟ್ಟೆ, ಇಂಡಸ್ಟ್ರಿಯಲ್ ಏರಿಯಾ, ಪಡೀಲ್ ಓವರ್ ಬ್ರಿಡ್ಜ್, ಅಡ್ಯಾರ್, ವಳಚ್ಚಿಲ್, ಅರ್ಕುಳ, ಮೇರ್ಲಪದವು, ನೀರುಮಾರ್ಗ, ಮಲ್ಲೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು