News Karnataka Kannada
Thursday, May 02 2024
ಮಂಗಳೂರು

ಜ.26 ರಂದು ನಾರಾಯಣಗುರುಗಳ ಭಾವಚಿತ್ರ ಮೆರವಣಿಗೆ : ಮಾಜಿ ಶಾಸಕ ಕೆ.ವಸಂತ ಬಂಗೇರ

Vasanth Bangera
Photo Credit :

ಬೆಳ್ತಂಗಡಿ : ಕೇರಳ ಸರಕಾರ ಕೇಂದ್ರ ಸರಕಾರ ಕಳಿಸಿಕೊಟ್ಟ ಶ್ರೀ ನಾರಾಯಣಗುರುಗಳ ಸ್ಥಬ್ದಚಿತ್ರದ ಬದಲಿಗೆ ಶ್ರೀ ಶಂಕರಾಚಾರ್ಯರ ಸ್ಥಬ್ದಚಿತ್ರವನ್ನು ಅಳವಡಿಸಿಕೊಟ್ಟರೆ ಪರಿಗಣಿಸುತ್ತೇವೆ ಎಂದು ಕೇಂದ್ರ ಸರಕಾರ ಹೇಳಿದ್ದನ್ನು ಖಂಡಿಸಲಾಗುವುದು ಇದು ಧರ್ಮವನ್ನು ಒಡೆಯುವ, ಹಿಂದುಳಿದ ವರ್ಗದವರನ್ನು ಕಡೆಗಣಿಸುವ ಹುನ್ನಾರ. ಮತ್ತು ಮಾನವರೆಲ್ಲರು ಸಮಾನರೆಂದು ಸಾರಿದ ನಾರಾಯಣಗುರುಗಳಿಗೆ ಮಾಡಿದ ಅವಮಾನವಾಗಿದ್ದು ಇದನ್ನು ಖಂಡಿಸಿ ಸಮಾನ ಮನಸ್ಕ ಸಂಘಟನಾ ಜಂಟಿ ವೇದಿಕೆ ಜ.೨೬ರಂದು ನಾರಾಯಣಗುರುಗಳ ಭಾವಚಿತ್ರ ಮೆರವಣಿಗೆ ನಡೆಸುವುದು ಮತ್ತು ಗುರುಗಳಿಗೆ ಗೌರವ ಸಲ್ಲಿಸುವ ಅಂಗವಾಗಿ ಕುತ್ಯಾರು ದೇವಸ್ಥಾನದಿಂದ ಗುರುನಾರಾಯಣ ಸಭಾಭವನದವರೆಗೆ ಸ್ವಾಭಿಮಾನಿ ನಡಿಗೆ ಕಾರ್ಯಕ್ರಮ ನಡೆಸಲಿದ್ದು ನಂತರ ತಾಲೂಕು ಕಛೇರಿಗೆ ತೆರಲಿ ಕೇಂದ್ರ ಸರಕಾರದ ತಪ್ಪು ಧೋರಣೆಯನ್ನು ಖಂಡಿಸಿ ಎಡ ಮತ್ತು ಜಾತ್ಯಾತೀತ ಪಕ್ಷಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು, ದಲಿತ, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಕಾಂಗ್ರೇಸ್ ಮುಖಂಡ, ಮಾಜಿ ಶಾಸಕ ಕೆ.ವಸಂತ ಬಂಗೇರ ಹೇಳಿದ್ದಾರೆ.

ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಂವಿದಾನದ ಮೂಲ ಆಶಯಕ್ಕೆ, ಭಾರತ ದೇಶದ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆ ಮಾಡಿ ಜ.೨೬ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಚಿತ್ರವಿರುವ ಸ್ಥಬ್ದ ಚಿತ್ರವನ್ನು ತಿರಸ್ಕರಿಸುವುದನ್ನು ದೇಶದ ಪ್ರಜೆಗಳಾದ ನಾವು ಒಕ್ಕೊರಳಿನಿಂದ ಖಂಡಿಸುತ್ತೇವೆ. ನಾರಾಯಣ ಗುರುಗಳು ಜಾತಿ ತಾರತಮ್ಯ, ಅಸಮಾನತೆಯ ವಿರುದ್ಧ ಚಳುವಳಿಯನ್ನು ನಡೆಸಿ ಯಶಸ್ವಿಯಾದ ಆಧುನಿಕ ಕಾಲದ ಮಹಾನ್‌ಸಂತ. ಮಹಿಳಾ ಸಮಾನತೆಗೆ ಅವರ ಕೊಡುಗೆ ಅನನ್ಯವಾದುದು. ಆಚರಣೆಗಳು ಬೇರೆಯಾದರೂ ಧರ್ಮಗಳ ಗುರಿ ಒಂದೇ ಎಂದು ಸಾರಿದವರು ನಾರಾಯಣ ಗುರುಗಳು. ಗುರುಗಳ ಮಹಾನ್ ಕಾರ್ಯವನ್ನು ಮನುಕುಲ ಸದಾ ಸ್ಮರಿಸುತ್ತಿದ್ದು ಈ ಮಹಾನ್ ಸಂತನಿಗೆ ತನ್ನ ಸೈದ್ಧಂತಿಕ ಕಾರಣಗಳಿಗಾಗಿ ಕೇಂದ್ರ ಬಿಜೆಪಿ ಸರಕಾರ ಅಗೌರವ ತೋರಿಸಿರುವುದು ಯಾವ ಕಾಲಕ್ಕೂ ಮಾನ್ಯವಲ್ಲ. ಗುರುಗಳ ಚಿಂತನೆಗಳು ಬಿಜೆಪಿ ಸಿದ್ಧಾಂತಕ್ಕೆ ಸತ್ಯವಲ್ಲ ಎಂಬುದು ಸತ್ಯವಾದರೂ ಗುರುಗಳ ಸಂದೇಶಗಳು ಭಾರತ ಸಂವಿದಾನದ ಆಶ್ರಯಗಳಿಗೆ ಪೂರಕವಾಗಿದೆ ಎಂಬುದನ್ನು ನಾವು ಪ್ರತಿಪಾದಿಸುತ್ತೇವೆ ಎಂದರು.

ಶ್ರೀಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ, ನಿವೃತ್ತ ಎಸ್.ಪಿ ಪಿತಾಂಬರ ಹೆರಾಜೆ ಮಾತನಾಡಿ ನಾರಾಯಣ ಗುರುಗಳಿಗೆ ಕೇಂದ್ರ ಸರಕಾರದಿಂದ ಆಗಿರುವ ಈ ಅಪಚಾರ, ಜಾತಿ, ಧರ್ಮ, ವರ್ಗ ಮೀರಿ ಜನಸಾಮನ್ಯರಲ್ಲಿ ಆಕ್ರೊಷವನ್ನು, ನೋವನ್ನು ಮೂಡಿಸಿದೆ. ನಾವು ಜಂಟಿಯಾಗಿ ಕೇಂದ್ರ ಸರಕಾರದ ಈ ದುರುದ್ಧೇಶದ ಮನಸ್ಥಿತಿಯನ್ನು ಹಾಗೂ ಕೇಂದ್ರ ಸರಕಾರವನ್ನು ಸಮರ್ಥಿಸಿ ಜವಬ್ದಾರಿಯುತ ಕೆಲವರು ಹೇಳಿಕೆ ನೀಡುತ್ತಿರುವ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಹಿರಿಯ ಸಿ.ಪಿ.ಐ.ಎಂ ಮುಖಂಡ ಬಿ.ಎಂ ಭಟ್ ಮಾತನಾಡಿ ರಾಜ್ಯ ಸರಕಾರದ ಮಂತ್ರಿಗಳಾದ ಸುನೀಲ್ ಕುಮಾರ್‌ರವರು ಹೇಳಿಕೆ ನೀಡಿ ಪ್ರತೀ ಮೂರು ವರ್ಷಗಳಿಗೊಮ್ಮೆ ಮಾತ್ರ ರಾಜ್ಯಗಳಿಗೆ ಟ್ಯಾಬ್ಲೋ ಕಳುಹಿಸಲು ಅವಕಾಶ ಎಂದು ಸುಳ್ಳು ಹೇಳಿದ್ದಾರೆ. ಮತ್ತೆ ಇತ್ತೀಚೆಗೆ ಉಜಿರೆಯಲ್ಲಿ ಕೇರಳ ಸರಕಾರ ಕಳುಹಿಸಿದ ಸ್ಥಬ್ದಚಿತ್ರ ಸರಕಾರದ ರೀತಿ, ನಿಯಮಗಳಿಗೆ ಸರಿಯಾಗಿಲ್ಲ ಎಂದು ಹೇಳುತ್ತಾರೆ. ಈ vರೀತಿಯ ದ್ವಂದ್ವ ಹೇಳಿಕೆ ನೋಡಿದರೆ ಗುರುಗಳಿಗೆ ಆಗಿರುವ ಅವಮಾನಕ್ಕಿಂತ ಮೋದಿಯವರನ್ನು ಸಮರ್ಥಿಸುವುದೇ ಇವರಿಗೆ ಪ್ರಧಾನ ಎಂದು ಅರಿವಾಗುತ್ತದೆ. ಕಾಂಗ್ರೇಸ್ ಮತ್ತು ಕಮ್ಯೂನಿಸ್ಟರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಇವರು ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳುವ ಬ್ರಿಟೀಷ್ ಸಂಸ್ಕೃತಿಯAತೆ ನಡೆಯುತ್ತಿರುವವರು ಬಿಜೆಪಿಗರಾಗಿದ್ದಾರೆ. ಹಿಂದೂ ಧರ್ಮದ ಹೆಸರನ್ನು ಬಳಸಿ ಬಿಜೆಪಿ ಹಿಂದುಗಳೆAದು ಇತರ ನೈಜ ಹಿಂದುಗಳಿAದ ಪ್ರತ್ಯೇಕಗೊಂಡು ಧರ್ಮವನ್ನು ಒಡೆದವರು ಬಿಜೆಪಿಗರು. ನಾರಾಯಣ ಗುರುಗಳ ಹೆಸರನ್ನು ಬಳಸಿ ರಾಜಕೀಯ ಮಾಡುತ್ತಾರೆ ಎನ್ನುವ ಇವರಿಗೆ ಶ್ರೀರಾಮಚಂದ್ರನ ಹೆಸರನ್ನು ರಾಜಕೀಯಕ್ಕೆ ಬಳಸಿ ಅಧಿಕಾರಕ್ಕೆ ಬಂದ ಬಿಜೆಪಿಗರಿಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು