News Karnataka Kannada
Thursday, May 02 2024
ಮಂಗಳೂರು

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಮಾಜ ಕಲ್ಯಾಣ ಕಾರ್ಯಕ್ರಮ

Manglore
Photo Credit :

ಸಮಾಜದಲ್ಲಿ ಬಂಟ ಸಮಾಜಕ್ಕೆ ವಿಶೇಷವಾದ ಗೌರವ ಸ್ಥಾನಮಾನ ಇದೆ: ಎಂ.ಎನ್. ರಾಜೇಂದ್ರ ಕುಮಾರ್

ಮಂಗಳೂರು: ಸಮಾಜದಲ್ಲಿ ಬಂಟ ಸಮಾಜಕ್ಕೆ ವಿಶೇಷವಾದ ಗೌರವ, ಸ್ಥಾನಮಾನವಿದೆ. ಎಂಟೆದೆಯ ಬಂಟರಾಗಿ ಐಕಳ ಹರೀಶ್ ಶೆಟ್ಟಿ ಎಲ್ಲಾ ಸಮಾಜದ ಕಷ್ಟಕ್ಕೆ ಒಕ್ಕೂಟದ ಮೂಲಕ ಧ್ವನಿಯಾಗಿರೋದು ಶ್ಲಾಘನೀಯವಾದುದು. ಹಿಂದೆ ಹೆಚ್ಚಿನ ದೇವಸ್ಥಾನ, ದೈವಸ್ಥಾನಗಳ ಅಧಿಕಾರ ಜೈನರು ಹಾಗೂ ಬಂಟರಲ್ಲಿತ್ತು. ಈಗ ಬೇರೆಯವರ ಪಾಲಾಗುತ್ತಿದೆ. ಈ ಬಗ್ಗೆ ಗಮನಹರಿಸಿ ಸಮಾಜದದಲ್ಲಿನ ನಮ್ಮ ಅಧಿಕಾರವನ್ನು ಉಳಿಸಿ ಬೆಳೆಸುವಂತೆ ಅವರು ಕರೆ ನೀಡಿದರು.

ಅವರು ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಸಮಾಜ ಕಲ್ಯಾಣ ಯೋಜನೆ ಹಾಗೂ ಬಂಟ ಸಮಾಜದ ದೈವದ ಮುಕ್ಕಾಲ್ದಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಒಕ್ಕೂಟ ಬೇರೆ ಸಮಾಜದ ಸಂಕಷ್ಟಕ್ಕೂ ನೆರವಾಗಿದೆ: ಐಕಳ ಹರೀಶ್ ಶೆಟ್ಟಿ
ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಲವು ಬಾರಿ ಸಮಾಜದ ರಾಜಕಾರಣಿಗಳಲ್ಲಿ ಒಕ್ಕೂಟಕ್ಕೆ ಸರ್ಕಾರದಿಂದ ಅನುದಾನ ದೊರೆಕಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಭಾರಿಯಾದರೂ ಸರ್ಕಾರದ ವತಿಯಿಂದ ಒಕ್ಕೂಟದ ಕಾರ್ಯ ಗುರುತಿಸಿ ಅನುದಾನ ನೀಡುವಲ್ಲಿ ಸಹಕರಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಮಾಡಿದರು.

ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಸಚಿವರಾಗಿದ್ದಾಗ ಅವರ ಅವಧಿಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ, ಕಾರ್ಯಕ್ರಮಗಳಿಗೆ ಹೆಚ್ಚಿನ ಸಹಕಾರ ನೀಡಿದ್ದರು. ಅವರ ಕಾರ್ಯವನ್ನು ಸಮಾಜ ಇಂದಿಗೂ ನೆನಪಿನಲ್ಲಿಟ್ಟುಕೊಂಡಿದೆ ಎಂದರು.

ಒಕ್ಕೂಟಕ್ಕೆ ಬೇರೆ ಸಮಾಜದಿಂದ ದೇಣಿಗೆ ನೀಡಿದವರಿದ್ದರೆ ಅದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ  ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್. ಅವರು ಮೊದಲು ೫ ಲಕ್ಷ ರೂ. ಹಾಗೂ ಈಗ ೨೦ ಲಕ್ಷ ರೂ ನೀಡಿದ್ದಾರೆ.

ಒಟ್ಟು ೨೫ ಲಕ್ಷ ರೂ. ಹಣವನ್ನು ಒಕ್ಕೂಟಕ್ಕೆ ಬೇರೆ ಸಮಾಜದವರು ನೀಡಿರುವುದು ದೊಡ್ಡ ವಿಚಾರ. ಒಕ್ಕೂಟವು ಕೂಡ ಬಂಟ ಸಮಾಜದ ಮಾತ್ರವಲ್ಲದೆ ಬೇರೆ ಸಮಾಜದ ಕಷ್ಟಕ್ಕೂ ಧ್ವನಿಯಾಗಿ ಕೆಲಸ ಮಾಡುತ್ತಿದ್ದು ಎಲ್ಲರ ಸಹಕಾರ ಬೆಂಬಲವನ್ನು ಕೋರಿದರು.

ಆರ್ಥಿಕ ಸಂಕಷ್ಟದಲ್ಲಿ ಇರುವವರನ್ನು ಗುರುತಿಸಿ: ಕನ್ಯಾನ ಸದಾಶಿವ ಶೆಟ್ಟಿ
ಮುಂಬಯಿ ಹೇರಂಬ ಇಂಡಸ್ಟ್ರೀಸ್ ನ ಅಧ್ಯಕ್ಷ, ಒಕ್ಕೂಟದ ನಿರ್ದೇಶಕ ಸದಾಶಿವ ಶೆಟ್ಟಿ ಕುಳೂರು-ಕನ್ಯಾನ ಮಾತನಾಡಿ, ಬಂಟ ಸಮಾಜದಲ್ಲಿ ಬಡ, ಮಧ್ಯಮ, ಶ್ರೀಮಂತರೆಂಬ ವರ್ಗವಿದೆ. ಇವರಲ್ಲಿ ಆರ್ಥಿಕ ಸಂಕಷ್ಟದಲ್ಲಿವವರನ್ನು ಗುರುತಿಸಿ ಒಕ್ಕೂಟವು ಸಹಾಯ ಮಾಡುತ್ತಿರುವುದು ಸಂತೋಷದ ವಿಷಯ. ಹಿಂದೆ ಬಂಟರ ಸಂಘ ನೆಪ ಮಾತ್ರಕ್ಕೆ ಆಸ್ತಿತ್ವದಲ್ಲಿತ್ತು. ಬಂಟರ ವಲಯ ಸಂಘಗಳು ತಮ್ಮ ವ್ಯಾಪ್ತಿಯ ಬಡವರ ಮಾಹಿತಿ ಒಕ್ಕೂಟಕ್ಕೆ ನೀಡಬೇಕು. ಜತೆಗೆ ದಾನಿಗಳಿಂದ ದೇಣಿಗೆ ನೀಡುವ ಕಾರ್ಯಕ್ಕೂ ಕೈ ಜೋಡಿಸಿದಾಗ ಒಕ್ಕೂಟಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದರು.

ಮಕ್ಕಳಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆಯಾಗಬೇಕು : ಜಯಪ್ರಕಾಶ್ ಹೆಗ್ಡೆ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಒಕ್ಕೂಟದ ಯೋಜನೆಗಳು ಮಕ್ಕಳ ಶಿಕ್ಷಣ, ಕ್ರೀಡೆ ಇನ್ನಿತರ ವಿಚಾರಗಳಿಗೆ ಸಹಾಯಹಸ್ತ ನೀಡಿ ಸಹಕಾರ ನೀಡುತ್ತಿವೆ. ಅದೇ ರೀತಿ ಮುಂದೆ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆಯಾಗಬೇಕು. ಸಂಘಗಳು ದೊಡ್ಡ ಉದ್ದಿಮೆ ಪ್ರಾರಂಭಿಸಿ ನಮ್ಮ ಸಮಾಜದ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕು. ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಗವಹಿಸಿಸಲು ಪ್ರೋತ್ಸಾಹಿಸಬೇಕು ಎಂದರು. ಇದೇ ಸಂದರ್ಭ ಹಿಂದುಳಿದ ವರ್ಗಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡಿರುವ ಮೀಸಲಾತಿಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿ. ನಾಗರಾಜ ಶೆಟ್ಟಿ, ಒಕ್ಕೂಟದ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ, ಹೊಟೇಲ್ ಉದ್ಯಮಿ ರಾಜೇಂದ್ರ ಶೆಟ್ಟಿ ಹುಬ್ಬಳ್ಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಂಟ ಸಮಾಜದ ದೈವ ಪಾತ್ರಿಗಳಾದ (ಮುಕ್ಕಾಲ್ದಿಗಳು) ಹಿರಿಯರಾದ ಶ್ರೀಧರ ಶೆಟ್ಟಿ ಪಾಲಡ್ಕ, ಪೂವಪ್ಪ ಶೆಟ್ಟಿ ಕರೀಂಜೆ, ಲಾಡಿ ಅಣ್ಣು ಶೆಟ್ಟಿ, ಪದ್ಮನಾಭ ಶೆಟ್ಟಿ ಮಲಾರಬೀಡು, ನಾರಾಯಣ ಶೆಟ್ಟಿ ಪುದ್ದರಕೋಡಿ, ಪ್ರಸಾದ್ ಶೆಟ್ಟಿ ಪೆರ್ವಾಜೆ, ಸುನೀಲ್ ನಾರಾಯಣ ಶೆಟ್ಟಿ ಕಾಪು, ಪ್ರಭಾಕರ ಶೆಟ್ಟಿ ದರೆಗುಡ್ಡೆ, ಸುನೀಲ್ ಶೆಟ್ಟಿ ಮಾರೂರು, ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ, ಬಾಲಕೃಷ್ಣ ಉಪ್ಪೂರು, ಸೌರವ್ ಶೆಟ್ಟಿ ಮೇರಮಜಲುಗುತ್ತು ಹಾಗೂ ರಮೇಶ್ ಶೆಟ್ಟಿ ಮಾರ್ನಾಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಡಾ| ಸುಧಾರಾಣಿ, ಡಾ| ಮಂಜುಳಾ ಶೆಟ್ಟಿ ಹಾಗೂ ಡಾ| ಪ್ರಿಯಾ ಹರೀಶ್ ಶೆಟ್ಟಿ ಸನ್ಮಾನಿತರ ವಿವರ ವಾದಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸುನೀಲ್ ಶೆಟ್ಟಿ ಮಾರೂರು, ಬಂಟ ಸಮಾಜದ ಮುಕ್ಕಾಲ್ದಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಸನ್ನಾನಿಸಿದಕ್ಕೆ ಅಭಾರಿಯಾಗಿದ್ದೇವೆ. ತಾವು ಆರಾಧಿಸುವ ಉಳ್ಳಾಯ, ಕೊಡಮಣಿತ್ತಾಯ ದೈವಗಳು ಒಕ್ಕೂಟವನ್ನು ಬೆಳಗಿಸಲಿ ಎಂದು ಹಾರೈಸಿದರು.

ಅಭಿಲಾಷ್ ಚೌಟ ಮಾತನಾಡಿ, ಕರೋನ ಸಂದರ್ಭ ಮುಕ್ಕಾಲ್ದಿಗಳ ಕಷ್ಟ ಅರಿತು ಹರೀಶಣ್ಣ ಒಕ್ಕೂಟದ ಮೂಲಕ ಸಹಾಯ ಮಾಡಿದ್ದಾರೆ, ಅದು ನಮಗೆ ಸಿಕ್ಕ ಮೊದಲ ಸನ್ಮಾನ ಎಂದು ಅಭಿಪ್ರಾಯ ಹಂಚಿಕೊಂಡಿದರು.

ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ  ಶಿಕ್ಷಣ, ಮದುವೆ, ಮನೆ ನಿರ್ಮಾಣ, ಕ್ರೀಡೆ, ವೈದ್ಯಕೀಯ ಮೊದಲಾದ  ಫಲಾನುಭವಿಗಳಿಗೆ ಒಟ್ಟು ೪೭ ಲಕ್ಷ ರೂಪಾಯಿಗೂ ಮಿಕ್ಕಿದ ಮೊತ್ತದ ಚೆಕ್’ಗಳನ್ನು ವಿತರಿಸಲಾಯಿತು.
ಕದ್ರಿ ನವನೀತ ಶೆಟ್ಟಿ ಹಾಗೂ ಪುರುಷೋತ್ತಮ ಭಂಡಾರಿ ನಿರೂಪಿಸಿದರು. ಡಾ. ಪ್ರತಿಭಾ ರೈ ಪ್ರಾಥಿಸಿದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ ಶೆಟ್ಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಜತೆ ಕಾರ್ಯದರ್ಶಿ ಸತೀಶ ಅಡಪ ಸಂಕಬೈಲ್, ಆಡಳಿತಾಧಿಕಾರಿ ಸಚ್ಚಿದಾನಂದ ಹೆಗ್ಡೆ ಕೊಲ್ಕೆಬೈಲು, ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ ವಿವಿಧ ವಲಯ ಬಂಟರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು