News Karnataka Kannada
Friday, May 03 2024
ಮಂಗಳೂರು

ಗುರುವಾಯನಕೆರೆ ನಾಗರಿಕ ಸೇವಾ ಸಮಿತಿ ಹೆಸರಿನಲ್ಲಿ ವಂಚನೆ ಹಿನ್ನೆಲೆ ಉನ್ನತ ತನಿಖೆಗೆ ಒತ್ತಾಯ

Press Meet
Photo Credit : News Kannada

ಬೆಳ್ತಂಗಡಿ : ಸುಳ್ಳು ದಾಖಲೆಗಳನ್ನು ನೀಡಿ ನಾಗರಿಕ ಸೇವಾ ಸಮಿತಿ (ರಿ) ಗುರುವಾಯನಕೆರೆ ಎಂದು ಕೆ. ಸೋಮನಾಥ್ ನಾಯಕ್ ಹಾಗೂ ರಂಜನ್ ರಾವ್ ಯೆರ್ಡೂರು ನೇತೃತ್ವದಲ್ಲಿ ಸಮಿತಿಯನ್ನು ನವೀಕರಣಗೊಳಿಸಿದ್ದು ಇದು ನಕಲಿಯಾಗಿದೆ. ಅಲ್ಲದೆ ಇದರ ಹೆಸರಿನಲ್ಲಿ ದಲಿತರಿಗೆ ನ್ಯಾಯ ಕೊಡುತ್ತೇವೆ ಎಂದು ಜನರನ್ನು ವಂಚಿಸಿ ಕುವೆಟ್ಟು ಗ್ರಾಮ ಪ.ವರ್ಗಕ್ಕೆ ಸೇರಿದ ಅಪ್ಪಿ ನಾಯ್ಕೆದಿ ಮತ್ತು ಕುಟುಂಭಿಕರಿಗೆ ಅವರ ಜಮೀನನ್ನು ಸ್ವಾದೀನಪಡಿಸಲು ಉದ್ದೇಶಿಸಿ ಅದರ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಲ್ಲದೆ ಆ ಕುಟುಂಬಕ್ಕೆ ಅನ್ಯಾಯ ಮಾಡಿದವರ ವಿರುದ್ಧ ಸೋಮನಾಥ್ ನಾಯಕ್ ಹಾಗೂ ರಂಜನ್ ರಾವ್ ಯೆರ್ಡೂರು ವಿರುದ್ಧ ಕಾನೂನಾತ್ಮಕ ಹಾಗೂ ಸಾರ್ವಜನಿಕ ಹೋರಾಟ ಮಾಡಲಾಗುವುದು ಎಂದು ನಾಗರಿಕ ಸೇವಾ ಸಮಿತಿ (ರಿ) ಇದರ ಅಧ್ಯಕ್ಷ ಸುಕೇಶ್ ಕುಮಾರ್ ಕಡಂಬು ಹೇಳಿದ್ದಾರೆ.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಪ್ಪಿ ನಾಯ್ಕೆದಿ ಎಂಬವರಿಗೆ ಸಂಬಂಧಪಟ್ಟ ಆಸ್ತಿಯನ್ನು ನಕಲಿ ದಾಖಲೆ ಸೃಷ್ಠಿಸಿ ವಂಚನೆ ಮಾಡಲು ಯತ್ನಿಸಿದ್ದು ಇದರಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಇದಲ್ಲದೆ ಪಡುಬಿದಿರೆ ಸದಾಶಿವ ಎಂಬವರ ಮಗ ಶಶಿಧರ ಎಂಬವರ ಒಬ್ಬರ ಜಿಪಿಎ ಪಡೆದು ಉಳಿದ ಹಕ್ಕುದಾರರಿಗೆ ತಿಳಿಯದಂತೆ ಆಸ್ತಿಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದು ಈ ಬಗ್ಗೆಯೂ ಉನ್ನತ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುವುದು.

ನಾಗರಿಕ ಸೇವಾ ಸಂಸ್ಥೆ ಹೆಸರಲ್ಲಿ ಸರಕಾರದ ಜಮೀನನ್ನು ಪಡೆದುಕೊಂಡಿದ್ದು ಇದನ್ನು ಕೂಡ ಸರಕಾರ ತನಿಖೆ ನಡೆಸಿ ಈ ನಕಲಿ ಸಂಸ್ಥೆಯಿAದ ಜಮೀನನ್ನು ಸರಕಾರ ಮತ್ತೆ ವಶಪಡಿಸಿಕೊಳ್ಳಬೇಕು. ಗುರುವಾಯನಕೆರೆಯಲ್ಲಿ ಸುಮಾರು ೪೦ಎಕರೆ ಜಮೀನನ್ನು ನೂರಕ್ಕೂ ಅಧಿಕ ಮಂದಿಗೆ ಮಾರಾಟ ಮಾಡಿ ಸ್ಟಾಂಪ್  ಡ್ಯೂಟಿ ಸರಿಯಾಗಿ ಕಟ್ಟದೆ ಸರಕಾರದ ಬೊಕ್ಕಸಕ್ಕೆ ವಂಚನೆ ಮಾಡಿದ್ದು ಈ ಬಗ್ಗೆಯೂ ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳ, ಅದರ ಸಂಸ್ಥೆಗಳ ಅಥವಾ ಹೆಗ್ಗಡೆಯವರ ಬಗ್ಗೆ ಮಾತನಾಡುವಂತಿಲ್ಲ ಎಂದು ಕೆ. ಸೋಮನಾಥ್ ನಾಯಕ್ ಅವರಿಗೆ ಬೆಳ್ತಂಗಡಿ ಸಿವಿಲ್ ನ್ಯಾಯಾಲಯ ಶಾಶ್ವತ ಪ್ರತಿಬಂದಕಾಜ್ಞೆ ಮಾಡಿದ್ದು ಇದನ್ನು ಉಲ್ಲಂಘಿಸಿ ಕೆಲವೊಂದು ಸಾಮಾಜಿಕ ಜಲತಾಣದಲ್ಲಿ ಆರೋಪಗಳನ್ನು ಮಾಡುತ್ತಾ ಬಂದಿದ್ದು ಇದರ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.

ನ್ಯಾಯಾಲಯದ ಆದೇಶವನ್ನು ಪದೇ ಪದೇ ಉಲ್ಲಂಘಿಸುತ್ತಿರುವ ಕೆ. ಸೋಮನಾಥ ನಾಯಕ್‌ಗೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯ ಮೂರು ತಿಂಗಳ ಕಾರಾಗೃಹ ಸಜೆ, ೪,೫೦,೦೦೦ ದಂಡ ಹಾಗೂ ದಾವೆ ಖರ್ಚನ್ನು ನೀಡಬೇಕು ಎಂದು ಆದೇಶಿಸಿದ್ದು ಆಸ್ತಿಯನ್ನು ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಇದರ ಆದೇಶದ ವಿರುದ್ಧ ಅಪೀಲು ಮಾಡಿ ಸೋಮನಾಥ ನಾಯಕ್ ಸೆರೆಮನೆವಾಸವನ್ನು ಮುಂದೂಡಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆಯವರ ಕುರಿತು ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಾರಣಕ್ಕೆ ಕೆ. ಸೋಮನಾಥ ನಾಯಕ್ ಕ್ಷಮಾರ್ಹರಲ್ಲರು ಎಂದು ಮಾಡಿದ ತಪ್ಪಿಗೆ ೨೫ಲಕ್ಷವನ್ನು ಶ್ರೀಕ್ಷೇತ್ರಕ್ಕೆ ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಿದ್ದು ಇದರಲ್ಲಿ ಅಪೀಲು ಸಲ್ಲಿಸಿ ದಿನದೂಡುತ್ತಿದ್ದು ನ್ಯಾಯಾಲಯದಲ್ಲೂ ಮುಖಭಂಗ ಎದುರಿಸುತ್ತಿದ್ದಾರೆ. ಇದೀಗ ಜನರಿಗೆ ನಾನು ಪ್ರಾಮಾಣಿಕ ಎಂದು ತಿಳಿಸುವ ಉದ್ದೇಶದಿಂದ ಶ್ರೀಕ್ಷೇತ್ರದ ಆಸ್ತಿಯ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು ಇದೆಲ್ಲದರ ವಿರುದ್ಧ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.

ನಾಗೇಶ್ ನಾಯ್ಕ್ ಕುವೆಟ್ಟು ಮಾತನಾಡಿ ನಮ್ಮ ಕುಟುಂಬದ ಆಸ್ತಿ ವಿಚಾರದಲ್ಲಿ ನಮಗೆ ಸೋಮನಾಥ ನಾಯಕ್ ಮಾನಸಿಕ ಹಿಂಸೆ ನೀಡುತ್ತಿದ್ದು ಮನೆಗ ಬಂದು ಮನೆಯವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ನಮ್ಮ ಆಸ್ತಿಯನ್ನು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಮೀನನ್ನು ಸೋಮನಾಥ್ ನಾಯಕ್ ತನ್ನ ಮಕ್ಕಳ ಹೆಸರಿಗೆ ಮಾಡಿಕೊಳ್ಳಲು ಯತ್ನಿಸಿದ್ದು ಈ ಬಗ್ಗೆ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ನಾಗರಿಕಾ ಸೇವಾ ಸಮಿತಿಯ ಈಶ್ವರ ಬೈರ ಉಪಸ್ಥಿತರಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು