News Karnataka Kannada
Sunday, May 05 2024
ಮಂಗಳೂರು

ಉಜಿರೆ: ಪಿಎಚ್.ಡಿ ಪದವಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Latest News
Photo Credit :

ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿರುವ ಹಂಪಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ. ಹಾಮಾನಾ ಸಂಶೋಧನ ಕೇಂದ್ರವು 2022-23ನೇ ಸಾಲಿಗೆ ಕನ್ನಡ, ಅಭಿವೃದ್ಧಿ ಅಧ್ಯಯನ ಮತ್ತು ಚರಿತ್ರೆ ವಿಷಯಗಳಲ್ಲಿ ಪಿಎಚ್. ಡಿ. ಪದವಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.

ಅರ್ಜಿ ಶುಲ್ಕ 600ರೂ. ಆಗಿದ್ದು, ಪ. ಜಾತಿ, ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ಶೇ. 50 ರಿಯಾಯಿತಿ ಇದೆ. (ಕೇಂದ್ರ/ರಾಜ್ಯ ಸರ್ಕಾರ/ನಿಗಮ/ಮಂಡಳಿಗಳಲ್ಲಿ ಖಾಯಂ ನೇಮಕಾತಿಗೊಂಡು ಸೇವೆಯಲ್ಲಿರುವ ಸಿಬ್ಬಂದಿಗಳಿಗೆ ಯಾವುದೇ ವಿನಾಯಿತಿ ಇರುವುದಿಲ್ಲ) ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು 10.06.2022 ಕೊನೆಯ ದಿನವಾಗಿದೆ.

ಆಸಕ್ತರು ಅರ್ಜಿ ಶುಲ್ಕವನ್ನು ‘ಹಣಕಾಸು ಅಧಿಕಾರಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ 583276’ ಇವರ ಹೆಸರಿಗೆ ಸಂದಾಯವಾಗುವಂತೆ (ಹೊಸಪೇಟೆಯ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಅಥವಾ ಬ್ಯಾಂಕ್ ಆಫ್ ಇಂಡಿಯಾ ಕಮಲಾಪುರ, ಬಳ್ಳಾರಿ ಜಿಲ್ಲೆ- ಇಲ್ಲಿ ಪಾವತಿಯಾಗುವಂತೆ) ಡಿ.ಡಿ. ತೆಗೆದು ವೆಬ್‍ಸೈಟ್‍ನಿಂದ ಅರ್ಜಿ ಡೌನ್‍ಲೋಡ್ ಮಾಡಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ. ಸಹಿತ ‘ನಿರ್ದೇಶಕರು, ಅಧ್ಯಯನಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ಹೊಸಪೇಟೆ, ಬಳ್ಳಾರಿ-583276’ ಅವರಿಗೆ ನೇರವಾಗಿ ಇಲ್ಲವೆ ಅಂಚೆ ಮೂಲಕ ತಲುಪುವಂತೆ ಕಳುಹಿಸಲು ತಿಳಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ತಿತಿತಿ.ಞಚಿಟಿಟಿಚಿಜಚಿuಟಿiveಡಿsiಣಥಿ.oಡಿg, hಣಣಠಿs://ತಿತಿತಿ.ಞಚಿಟಿಟಿಚಿಜಚಿuಟಿiveಡಿsiಣಥಿ.oಡಿg ಜಾಲತಾಣವನ್ನು ಅಥವಾ ಡಾ. ಎಸ್. ಡಿ. ಶೆಟ್ಟಿ (9448724697), ಡಾ. ದಿವ ಕೊಕ್ಕಡ(9902032480)
ಡಾ. ಹಾಮಾನಾ ಸಂಶೋಧನ ಕೇಂದ್ರ (08256-236221) ಅವರನ್ನು ಸಂಪರ್ಕಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು