News Karnataka Kannada
Thursday, May 02 2024
ಮಂಗಳೂರು

ಮುಂಡಾಜೆ ಗ್ರಾಮದ ಸೀಟು ಬಳಿ ಕೋಳಿ ಸಾಗಾಟದ ರಿಕ್ಷಾ ಟೆಂಪೋ ಪಲ್ಟಿ

Mundaje
Photo Credit :

ಮುಂಡಾಜೆ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಬಳಿ ಬುಧವಾರ ಬೆಳಿಗ್ಗೆ ಕೋಳಿ ಸಾಗಟದ ರಿಕ್ಷಾ ಟೆಂಪೋ ಮಗುಚಿ ಬಿದ್ದ ಘಟನೆ ನಡೆದಿದೆ.

ಬೆಂಗಳೂರಿನಿಂದ ಉಡುಪಿಗೆ ಕೋಳಿಗಳನ್ನು ಸಾಗಾಟ ಮಾಡುತ್ತಿದ್ದ ರಿಕ್ಷಾ ಟೆಂಪೋ ಮುಂದಿನಿಂದ ಬಂದ ವಾಹನಕ್ಕೆ ದಾರಿ ನೀಡಲು ಎಡಬದಿಗೆ ಚಲಾಯಿಸಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು.ಮಳೆ,ಮಂಜು ಕವಿದ ವಾತಾವರಣ,ರಸ್ತೆಗೆ ಬಾಗಿ ನಿಂತಿರುವ ಮರಗಳು ಈ ಅಪಘಾತಕ್ಕೆ ಕಾರಣವಾಗಿವೆ.

ಆತಂಕದ ವಾತಾವರಣ
ವಾಹನ ಮಗುಚಿ ಬೀಳುತ್ತಿದ್ದಂತೆ ಅದರಿಂದ ಭಾರಿ ಹೊಗೆ ಕಂಡುಬಂದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.ಇತರ ವಾಹನಗಳ ಚಾಲಕರು ಈ ಸಮಯ ವಾಹನ ಗಳನ್ನು ಮುಂದೆ ಚಲಾಯಿಸಲು ಹಿಂದೇಟು ಹಾಕಿದ ಪರಿಣಾಮ ರಸ್ತೆಯ ಇಕ್ಕೆಲಗಳಲ್ಲು ವಾಹನಗಳ ಸರತಿ ಕಂಡುಬಂತು.

ಸ್ಥಳೀಯರ ಹಾಗೂ ಇತರ ವಾಹನ ಚಾಲಕರ ಪ್ರಸಂಗಾವಧಾನತೆಯಿಂದ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿತು.ರಿಕ್ಷಾ ಟೆಂಪೋದಲ್ಲಿದ್ದ ಚಾಲಕ ಹಾಗೂ ಇನ್ನೋರ್ವ ಪವಾಡಸದೃಶವಾಗಿ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.ವಾಹನ ಮಗುಚಿಬಿದ್ದ ಸಂದರ್ಭ ಕೆಲವು ಕೋಳಿಗಳು ಕಾಡಿನತ್ತ ಓಡಿ ಹೋಗಿರುವುದಾಗಿಯು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು