News Karnataka Kannada
Monday, April 29 2024
ಮಂಗಳೂರು

ಅಂತರಾಷ್ಟ್ರೀಯ ಯ ರೋಟರಿ ಸಂಸ್ಥೆಯ ಸ್ಥಾಪನಾ  ದಿನಾಚರಣೆ ಸಾಧಕರಿಗೆ ಪ್ರಶಸ್ತಿ ಪ್ರಧಾನ

Rotery Club
Photo Credit : News Kannada

ಮಂಗಳೂರು : ನಗರದ ರೋಟರಿ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಸ್ಥಾಪನಾ ದಿನಾಚರಣೆ ಹಾಗೂ 3 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭವು ನಗರದ ಉತ್ಸವ ಹೋಟೆಲ್ ಸಭಾಂಗಣದಲ್ಲಿ ಬುಧವಾರ  ಜರಗಿತು. ಸಂಸ್ಥೆಯ ಅಧ್ಯಕ್ಷರಾದ ರೋ| ಕೆನ್ಯೂಟ್ ಪಿಂಟೋರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಟರಿ ಸಂಸ್ಥೆಯ ಸ್ಥಾಪನೆ, ಬೆಳವಣಿಗೆ ಬಗ್ಗೆ ಮಾತನಾಡಿ 3 ಸಾಧಕರನ್ನು 01) ಶ್ರೀ  ಲಕ್ಷ್ಮೀಶ ಭಂಡಾರಿ (ಸಮಾಜ ಸೇವೆ) 02) ಶ್ರೀ ಫ್ರಾನ್ಸಿಸ್ ಮ್ಯಾಕ್ಸಿಮ್ ಮೋರಾಸ್ (ರಸ್ತೆ ಸಂಚಾರ ನಿರ್ವಹಣೆ) 03) ಶ್ರೀಮತಿ ವಿದ್ಯಾ ಕಿಶೋರ್ ಬಗ್‌ಲಾಡಿ (ಅಂಚೆ ಚೀಟಿ ಸಂಗ್ರಹಣೆ) ಇವರ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ ಗೌರವಿಸಿ ರೋಟರಿ ವೃತ್ತಿಪರ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರೋಟರಿ ಜಿಲ್ಲಾ ಸಾರ್ವಜನಿಕ ದೃಷ್ಟಿಕೋನ ಸಮಿತಿಯ ಅಧ್ಯಕ್ಷರಾದ ಸತೀಶ್ ಬೋಳಾರ್‌ರವರು ಸಾಧಕರ ಸಾಧನೆಯನ್ನು ಪ್ರಶಂಶಿಸಿ, ಅಭಿನಂದಿಸಿ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ 118 ವರ್ಷಗಳ ಇತಿಹಾಸ ಸಾಧಿಸಿದ ಸೇವಾ ಸಾಧನೆ, 1905 ರಿಂದ ಬೆಳವಣಿಗೆ ಬಗ್ಗೆ ವಿವರ ನೀಡಿದರು.

ಶ್ರೀ ಫ್ರಾನ್ಸಿಸ್ ಮ್ಯಾಕ್ಸಿಮ್ ಮೋರಾಸ್ ಪ್ರಶಸ್ತಿ ಸ್ವೀಕರಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡುವ ರೋಟರಿ ಸಂಸ್ಥೆಯ ಸೇವಾ ಕಾರ್ಯ ಶ್ಲಾಘನೀಯ ಎಂದು ನುಡಿದು ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ರೋಟರಿ ಸ್ಥಾಪನಾ ಅಧ್ಯಕ್ಷ ರೋ| ಡಾ| ರಂಜನ್, ಸ್ಥಾಪನಾ ಕಾರ್ಯದರ್ಶಿ ರೋ| ಪ್ರಶಾಂತ್ ರೈ ಉಪಸ್ಥಿತರಿದ್ದರು. ಕಾರ್ಯದರ್ಶಿ ರೋ| ಬಸವಕುಮಾರ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು