News Karnataka Kannada
Friday, May 03 2024
ದೆಹಲಿ

ದೇಶದ 19 ಲಕ್ಷ ಮಕ್ಕಳ ಪೋಷಕರು ಕೋವಿಡ್ ಗೆ ಬಲಿ: ವರದಿ

Covid Test 1
Photo Credit : News Kannada

ಹೊಸದಿಲ್ಲಿ: ಒಮೈಕ್ರಾನ್ ಪ್ರಬೇಧದ ಕೋವಿಡ್-19 ಸೋಂಕು ಭಾರತದಲ್ಲಿ ಇಳಿಮುಖವಾಗುತ್ತಿದ್ದರೂ, ದೇಶದಲ್ಲಿ ಈ ಮಾರಕ ಸಾಂಕ್ರಾಮಿಕಕ್ಕೆ 19.2 ಲಕ್ಷ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂಬ ಆತಂಕಕಾರಿ ಅಂಕಿ ಅಂಶಗಳನ್ನು ಲ್ಯಾನ್ಸೆಟ್ ಬಿಡುಗಡೆ ಮಾಡಿದೆ.2020ರ ಮಾರ್ಚ್ ನಿಂದ 2021ರ ಅಕ್ಟೋಬರ್ ನಡುವಿನ 20 ತಿಂಗಳ ಅವಧಿಯಲ್ಲಿ ಈ ಮಕ್ಕಳು ತಮ್ಮ ಒಬ್ಬ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿದ್ದಾರೆ.

ಇದು ವಿಶ್ವದಲ್ಲೇ ಅತ್ಯಧಿಕ ಎಂದು ಲ್ಯಾನ್ಸೆಟ್ ವರದಿ ವಿವರಿಸಿದೆ.ಹಲವು ಕುಟುಂಬಗಳು ಈ ಸಾಂಕ್ರಾಮಿಕದಿಂದ ನಾಮಾವಶೇಷವಾಗಿವೆ ಎಂದು ಲ್ಯಾನ್ಸೆಟ್ ಪ್ರಕಟಿಸಿದ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ.

ಅಧ್ಯಯನ ನಡೆಸಿದ ಕೋವಿಡ್-19 ಸೋಂಕಿನಿಂದ ತೀವ್ರವಾಗಿ ಪೀಡಿತವಾದ 20 ದೇಶಗಳ ಪೈಕಿ ಅತ್ಯಧಿಕ ಮಕ್ಕಳು ಅನಾಥರಾಗಿರುವುದು ಭಾರತದಲ್ಲಿ ಎನ್ನುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಜರ್ಮನಿಯಲ್ಲಿ 2,400 ಮಕ್ಕಳು ಅನಾಥರಾಗಿರುವುದು ಇದು ಕನಿಷ್ಠ ಪ್ರಮಾಣವಾಗಿದೆ. 1000 ಮಕ್ಕಳ ಪೈಕಿ ಅತ್ಯಧಿಕ ಮಂದಿ ಅನಾಥರಾಗಿರುವುದು ಪೆರು (8.3) ದೇಶದಲ್ಲಿ. ದಕ್ಷಿಣ ಆಫ್ರಿಕಾ (7.2) ನಂತರದ ಸ್ಥಾನದಲ್ಲಿದೆ. ಜಾಗತಿಕವಾಗಿ 33 ಲಕ್ಷ ಮಕ್ಕಳು ಕನಿಷ್ಠ ಒಬ್ಬ ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಉಳಿದಂತೆ 18.3 ಲಕ್ಷ ಮಕ್ಕಳು ತಮ್ಮ ಅಜ್ಜಂದಿರು ಅಥವಾ ವೃದ್ಧ ಪಾಲಕರನ್ನು ಕಳೆದುಕೊಂಡಿದ್ದಾರೆ.

ಅಂದಾಜಿನ ಪ್ರಕಾರ 18 ವರ್ಷಕ್ಕಿಂತ ಕೆಳಗಿನ ಕನಿಷ್ಠ 52 ಲಕ್ಷ ಮಕ್ಕಳು ಸಾಂಕ್ರಾಮಿಕದಲ್ಲಿ ತಮ್ಮ ಪೋಷಕರು ಅಥವಾ ಪಾಲಕರನ್ನು ಕಳೆದುಕೊಂಡಿದ್ದಾರೆ. ಏತನ್ಮಧ್ಯೆ ದೇಶದಲ್ಲಿ ಗುರುವಾರ 14148 ಹೊಸ ಪ್ರಕರಣಗಳು ವರದಿಯಾಗಿದ್ದು, 302 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿನಿಂದ ದೇಶದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 5,12,924ಕ್ಕೇರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು