News Karnataka Kannada
Tuesday, May 07 2024
ಕಾಸರಗೋಡು

ಕಾಸರಗೋಡು : ವಿವಾಹ  ಮೊಟಕುಗೊಂಡ ಹಿನ್ನಲೆಯಲ್ಲಿ  ವಿಷ ಸೇವಿಸಿ ಯುವತಿ ಆತ್ಮಹತ್ಯೆ

Woman commits suicide by consuming poison after marriage was cut short
Photo Credit : By Author

ಕಾಸರಗೋಡು : ವಿವಾಹ  ಮೊಟಕುಗೊಂಡ ಹಿನ್ನಲೆಯಲ್ಲಿ  ವಿಷ ಸೇವಿಸಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ   ಚೆಮ್ನಾಡ್ ನಲ್ಲಿ ನಡೆದಿದೆ.

ಚೆಮ್ನಾಡ್ ಕೊಂಬನಡ್ಕ ದ  ಮಲ್ಲಿಕಾ ( ೨೭)ಮೃತಪಟ್ಟವರು. ಕುಂಬಳೆಯ ಯುವಕನೋರ್ವನನ್ನು ಈಕೆ ಪ್ರೀತಿಸುತ್ತಿದ್ದಳು. ವಿವಾಹವಾಗುವ ಬಗ್ಗೆ ಇಬ್ಬರು ಮನೆಯವರಿಗೆ ತಿಳಿಸಿದ್ದರು. ಆದರೆ ಜಾತಕ ನೋಡಿದಾಗ  ಸಾಮ್ಯತೆ  ಕಂಡುಬಂದಿಲ್ಲ , ಇದರಿಂದ ವಿವಾಹ ಮೊಟಕುಗೊಂಡಿತ್ತು.

ಬೇರೊಂದು ವಿವಾಹ   ನಡೆಸುವ ಬಗ್ಗೆ ಮನೆಯವರು ಚಿಂತನೆ ನಡೆಸಿದ್ದರು. ಇದರಿಂದ ಬೇಸತ್ತ ಮಲ್ಲಿಕಾ  ವಿಷ ಸೇವಿಸಿದ್ದು , ಗಂಭೀರ ಸ್ಥಿತಿಯಲ್ಲಿ  ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಚಿಕಿತ್ಸೆಗೆ ಸ್ಪಂದಿಸದೆ  ಮಂಗಳವಾರ ಮೃತಪಟ್ಟರು.      ಮೇಲ್ಪರಂಬ ಠಾಣಾ ಪೊಲೀಸರು ಪ್ರಕರಣ  ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು