News Karnataka Kannada
Friday, May 03 2024
ಕಾಸರಗೋಡು

ಕಾಸರಗೋಡು| ಗಲ್ಫ್ ಉದ್ಯೋಗಿ ಹತ್ಯೆ ಪ್ರಕರಣ: ಬಂಧಿತರ ಸಂಖ್ಯೆ 5 ಕ್ಕೆ ಏರಿಕೆ

Gulf employee's murder: Number of arrests rises to 5
Photo Credit :

ಕಾಸರಗೋಡು: ಗಲ್ಫ್ ಉದ್ಯೋಗಿ ಸೀತಾಂಗೋಳಿ ಮುಗುವಿನ  ಅಬೂಬಕ್ಕರ್ ಸಿದ್ದಿಕ್ ( 32) ನ ಕೊಲೆಗೆ ಸಂಬಂಧಪಟ್ಟಂತೆ ಮೂವರನ್ನು ವಿಶೇಷ  ತನಿಖಾ ತಂಡ  ಬಂಧಿಸಿದ್ದು , ಇದರಿಂದ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.

ಬಂಧಿತರನ್ನು ಮಂಜೇಶ್ವರ ಉದ್ಯಾವರದ  ರಿಯಾಜ್ ಹಸನ್  ( 33) ,  ಉಪ್ಪಳ  ಬಿ . ಟಿ ರಸ್ತೆಯ ಅಬ್ದುಲ್ ರಜಾಕ್ ( 46) ಮತ್ತು ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್ ( 33) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ  ಮಂಜೇಶ್ವರದ ಅಬ್ದುಲ್   ರಹೀಮ್ ಮತ್ತು ಅಬ್ದುಲ್ ಅಝೀಜ್ ನನ್ನು  ಈ ಹಿಂದೆ ಬಂಧಿಸಲಾಗಿತ್ತು.

ಜೂನ್ 29 ರಂದು  ಅಬೂಬಕ್ಕರ್ ಸಿದ್ದಿಕ್ ನನ್ನು  ತಂಡವು ಅಪಹರಿಸಿ ಪೈವಳಿಕೆಯ ಮನೆಯೊಂದರಲ್ಲಿ  ದಿಗ್ಬಂಧನದಲ್ಲಿರಿಸಿ  ಥಳಿಸಿ ಕೊಲೆಗೈಯ್ಯಲಾಗಿತ್ತು. ಬಳಿಕ  ಕಾರೊಂದರಲ್ಲಿ ಬಂದ್ಯೋಡಿನ ಖಾಸಗಿ ಆಸ್ಪತ್ರೆಯ ಆವರಣದಲ್ಲಿ ಮೃತದೇಹವನ್ನು ತೊರೆದು ತಂಡವು ಪರಾರಿಯಾಗಿತ್ತು. ಕೃತ್ಯದಲ್ಲಿ ಶಾಮೀಲಾಗಿರುವ  ಇನ್ನೂ ಐದಕ್ಕೂ ಅಧಿಕ ಮಂದಿ ತಲೆಮರೆಸಿಕೊಂಡಿದ್ದು , ಇವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು