News Karnataka Kannada
Sunday, April 28 2024
ಕಾಸರಗೋಡು

ಬೈಕ್ ಗೆ ಡಿಕ್ಕಿ ಹೊಡೆದ ಲಾರಿ: ಸವಾರ ಪ್ರಾಣಾಪಾಯದಿಂದ ಪಾರು

ಬೈಕ್ ಗೆ ಡಿಕ್ಕಿ ಹೊಡೆದ ಟೋರಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ತಂಗುದಾಣಕ್ಕೆ ನುಗ್ಗಿದ ಘಟನೆ ನೀರ್ಚಾಲ್ ನಲ್ಲಿ ನಡೆದಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ. ನೀರ್ಚಾಲ್ ನಲ್ಲಿರುವ ಬೇಳ ಗ್ರಾಮ ಕಚೇರಿ ಸಮೀಪ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.
Photo Credit : By Author

ಕಾಸರಗೋಡು: ಬೈಕ್ ಗೆ ಡಿಕ್ಕಿ ಹೊಡೆದ ಟೋರಸ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ತಂಗುದಾಣಕ್ಕೆ ನುಗ್ಗಿದ ಘಟನೆ ನೀರ್ಚಾಲ್ ನಲ್ಲಿ ನಡೆದಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ. ನೀರ್ಚಾಲ್ ನಲ್ಲಿರುವ ಬೇಳ ಗ್ರಾಮ ಕಚೇರಿ ಸಮೀಪ ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ.

ಬೈಕ್ ಸವಾರ ಬಿ.ಎಂ ಅಬ್ಬಾಸ್ ಪಾರಾದ ಬೈಕ್ ಸವಾರ. ಬಿರ್ಮಿನಡ್ಕದಿಂದ ನೀರ್ಚಾಲ್ ಗೆ ಬರುತ್ತಿದ್ದ ಬೈಕ್ ಹಾಗೂ ನೀರ್ಚಾಲ್ ನಿಂದ ಮಾನ್ಯ ಕಡೆಗೆ ತೆರಳುತ್ತಿದ್ದ ಲಾರಿ ಬೇಳ ಗ್ರಾಮ ಕಚೇರಿ ಸಮೀಪ ಸಂಪರ್ಕ ರಸ್ತೆ ಬಳಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬಳಿಕ ನಿಯಂತ್ರಣ ತಪ್ಪಿ ಬಸ್ಸು ತಂಗುದಾಣದೊಳಗೆ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಶೆಡ್ ನೆಲ ಕಚ್ಚಿದೆ.

ಈ ಸಂದರ್ಭದಲ್ಲಿ ತಂಗುದಾಣದೊಳಗೆ ಪ್ರಯಾಣಿಕರಾರು ಇಲ್ಲದಿದ್ದುದರಿಂದ ಭಾರೀ ಅಪಾಯ ತಪ್ಪಿದೆ ಎನ್ನಬಹುದು. ಬೈಕ್ ನ್ನು ಲಾರಿ ಎಳೆದು ಕೊಂಡು ಹೋಗಿದ್ದು, ಅಬ್ಬಾಸ್ ಡಿಕ್ಕಿ ಹೊಡೆದ ಸಂದರ್ಭದಲ್ಲಿ ರಸ್ತೆಗೆ ಬಿದ್ದರೂ ಸಣ್ಣ ಪುಟ್ಟ ಗಾಯಾಗಳೊಂದಿಗೆ ಪಾರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು