News Karnataka Kannada
Saturday, April 27 2024
ಕಾಸರಗೋಡು

ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆ

ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸಹೋದರ ಹಾಗೂ ಸಂಬಂಧಿಕರೋರ್ವರ ಬೆದರಿಕೆ ಇದ್ದುದರಿಂದ ತಪ್ಪಿಸಿಕೊಂಡಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
Photo Credit : By Author

ಕಾಸರಗೋಡು: ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸಹೋದರ ಹಾಗೂ ಸಂಬಂಧಿಕರೋರ್ವರ ಬೆದರಿಕೆ ಇದ್ದುದರಿಂದ ತಪ್ಪಿಸಿಕೊಂಡಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಧರ್ಮತ್ತಡ್ಕದ ಜೋನ್ ಡಿ’ಸೋಜ (60) ನಾಪತ್ತೆಯಾಗಿದ್ದ ವ್ಯಕ್ತಿ. ಇವರು ಸೋಮವಾರ ಕಾಸರಗೋಡು ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಇವರ ಹೇಳಿಕೆಯಂತೆ ಸಹೋದರ ಜೋರ್ಜ್ ಹಾಗೂ ಸಂಬಂಧಿಕ ಥೋಮಸ್ ವಿರುದ್ಧ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಕಳೆದ ಗುರುವಾರ ದಂದು ಜೋನ್ ಡಿಸೋಜ ನಾಪತ್ತೆಯಾಗಿದ್ದರು.

ಇವರ ಮೊಬೈಲ್ ಫೋನ್ ಮತ್ತು ಸ್ಕೂಟರ್ ಉಪ್ಪಳ ನಯಬಜಾರ್ ಬಳಿಯ ಅಂಬಾರ್ ಎಂಬಲ್ಲಿ ಪತ್ತೆಯಾಗಿದೆ. ಪೆರ್ಮುದೆ ತೆರಳುವುದಾಗಿ ಗುರುವಾರದಂದು ತೆರಳಿದ್ದ ಇವರು ನಾಪತ್ತೆಯಾಗಿರುವುದಾಗಿ ಪತ್ನಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದ್ದರು. ಆಸ್ತಿ ವಿವಾದ ಇವರ ನಡುವೆ ವೈಮನಸ್ಸಿಗೆ ಕಾರಣ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು