ಕಾಸರಗೋಡು : ಗಾಂಜಾ ಮತ್ತು ಎಂ ಡಿ ಎಂ ಎ ಮಾದಕ ವಸ್ತು ಸಹಿತ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾರು ಮತ್ತು ಸ್ಕೂಟರ್ l ನ್ನು ವಶಪಡಿಸಿ ಕೊಳ್ಳಲಾಗಿದೆ.
ನೀಲೇಶ್ವರ ತೈಕಡಪ್ಪುರದ ಮಂಶೀರ್ (33) , ಮಂಜೇಶ್ವರ ಬಡಾಜೆಯ ಅಭಿಲಾಷ್ (25) ಮತ್ತು ಉಪ್ಪಳ ಹಿದಾಯತ್ ನಗರದ ಮುಹಮ್ಮದ್ ಸುಹೈಲ್ (25) ಬಂಧಿತರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಕಾರನ್ನು ತಡೆದು ನಿಲ್ಲಿಸಿ ಪರಿ ಶೀಲನೆ ನಡೆಸಿದಾಗ 4. 29 ಗ್ರಾಂ ಎಂ ಡಿ ಎಂ ಎ ಮಾದಕ ವಸ್ತು ವನ್ನು ಪತ್ತೆ ಯಾಗಿದ್ದು, ಕಾರಲ್ಲಿದ್ದ ಮಂಶೀ ರ್ ಮತ್ತು ಅಭಿ ಲಾಷ್ ನನ್ನು ವಶಕ್ಕೆ ತೆಗೆದು ಕೊಳ್ಳ ಲಾಯಿತು. ಇನ್ನೊಂದು ಪ್ರಕರಣದಲ್ಲಿ ಉಪ್ಪಳ ಬಸ್ಸು ನಿಲ್ದಾಣ ಪರಿಸರ ದಿಂದ ಸ್ಕೂಟರ್ ನ್ನು ತಡೆದು ತಪಾಸಣೆ ನಡೆಸಿದಾಗ 375 ಗ್ರಾಂ ಗಾಂಜಾ ಪತ್ತೆ ಯಾಗಿದ್ದು, ಮುಹಮ್ಮದ್ ಸುಹೈಲ್ ಎಂಬಾತ ನನ್ನು ಬಂಧಿ ಸಲಾಗಿದೆ.