ಕಾಸರಗೋಡು : ತಾಯಿ ಮತ್ತು ಮಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಡಂಗುಯಿಯಲ್ಲಿ ನಡೆದಿದೆ.
ಕುಂಡಂಗುಯಿ ನಿರ್ಕಾಯಿಯ ಚಂದ್ರವರವರ ಪತ್ನಿ ನಾರಾಯಣಿ (46) ಮತ್ತು ಪುತ್ರಿ ಶ್ರೀನಂದಾ (12) ಮೃತ ಪಟ್ಟವರು.
ನಾರಾಯಣಿ ರವರ ಮೃತದೇಹ ನೇಣು ಬಿಗಿದು ಹಾಗೂ ಶ್ರಿನಂದಾ ರವರ ಮೃತ ದೇಹ ಕೋಣೆಯಲ್ಲಿ ಪತ್ತೆಯಾಗಿದೆ. ಶ್ರೀ ನಂದಾಳು ಕುಂಡಗುಯಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಯಾಗಿದ್ದಳು. ಆದಿತ್ಯವಾರ ರಾತ್ರಿ ಕೃತ್ಯ ಬೆಳಕಿಗೆ ಬಂದಿದೆ.ಮಾಹಿತಿ ತಿಳಿದ ಪಡೆದ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ಆರಂಭಿಸಿದ್ದಾರೆ.