News Karnataka Kannada
Saturday, May 11 2024
ಕಾಸರಗೋಡು

ಕಾಸರಗೋಡು: ಸೀಮೆಎಣ್ಣೆ ಗೋದಾಮಿಗೆ ಬೆಂಕಿ, ಅಪಾರ ಹಾನಿ

Fire breaks out at kerosene godown, damages
Photo Credit : By Author

ಕಾಸರಗೋಡು: ಸೀಮೆಎಣ್ಣೆ ಗೋದಾಮಿನಲ್ಲಿ ಭಾರೀ ಬೆಂಕಿ ಅನಾಹುತ ಉಂಟಾಗಿದ್ದು, ಅಪಾರ ನಾಶ ನಷ್ಟ ಉಂಟಾಗಿದೆ. ವಿದ್ಯಾನಗರದಲ್ಲಿ ಗೋದಾಮಿನಲ್ಲಿ ಶನಿವಾರ ಸಂಜೆ ಈ ಅನಾಹುತ ನಡೆದಿದೆ.

ದುರಂತ ನಡೆದ ಸಂದರ್ಭದಲ್ಲಿ ಗೋದಾಮಿನಲ್ಲಿ ಕಾರ್ಮಿಕರು ಇಲ್ಲದಿದ್ದುದರಿಂದ ಅಪಾಯ ತಪ್ಪಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.ಕಾಸರಗೋಡಿ ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಮುನೀರ್ ಎಂಬ ವರ ಮಾಲಕತ್ವದ ಎರಡಂತಸ್ತಿನ ಕಟ್ಟಡದಲ್ಲಿ ಈ ಘಟನೆ ನಡೆದಿದ್ದು, ಅಗ್ನಿ ಶಾಮಕ ದಳ ಹಾಗೂ ಪರಿಸರ ವಾಸಿಗಳ ಸಕಾಲಿಕ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿದೆ ಎನ್ನಲಾಗಿದೆ. ಬೆಂಕಿ ಅನಾಹುತ ಸಂಭವಿಸಿದ ಕೂಡಲೇ ಈ ಕಟ್ಟಡದಲ್ಲಿದ್ದವರನ್ನು ತೆರವು ಗೊಳಿಸಲಾಯಿತು. ಕಾಸರಗೋಡಿನಿಂದ ಆಗಮಿಸಿದ ಮೂರು ಅಗ್ನಿಶಾಮಕ ಘಟಕ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು