News Karnataka Kannada
Monday, April 29 2024
ಕಾಸರಗೋಡು

ಬಾಡಿಗೆ ಮನೆಯೊಂದನ್ನು ಕೇಂದ್ರೀಕರಿಸಿ ಮಾದಕ ವಸ್ತು ಮಾರಾಟ

New Project (2)
Photo Credit :
ಕಾಸರಗೋಡು : ಬಾಡಿಗೆ ಮನೆ ಕೇಂದ್ರೀಕರಿಸಿ  ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಮೂವರನ್ನು  ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು  ಕಾಞ0ಗಾಡ್  ಅರಂಗಾಡಿಯ  ಶಮೀರ್ ( 30) ಮತ್ತು ಪಾಣತ್ತೂರು  ಕಾರಟ್ ವಯಲಿನ  ಎಂ . ಎ  ಆರಿಫ್ ( 24) ಎಂದು ಗುರುತಿಸಲಾಗಿದೆ.
ಎಂ . ಡಿ . ಎಂ . ಎ  ಮಾದಕ ವಸ್ತು ಸಹಿತ ಇವರನ್ನು ಬಂಧಿಸಲಾಗಿದೆ.
ಮುಟ್ಟತ್ತೋಡಿ ಹಿದಾಯತ್ ನಗರದ ಬಾಡಿಗೆ ಮನೆಯೊಂದನ್ನು ಕೇಂದ್ರೀಕರಿಸಿ  ಮಾದಕ ವಸ್ತು ವನ್ನು ಮಾರಾಟ ಮಾಡುತ್ತಿದ್ದರು .
ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಶಮೀರ್ ನ ಸಹೋದರ ಶಫೀಕ್ ಬಾಡಿಗೆಗೆ ಮನೆ ಪಡೆದಿದ್ದನು. ರಾತ್ರಿ ಸಮಯಗಳಲ್ಲಿ ಕಾರು ಮತ್ತು ಬೈಕ್ ಗಳಲ್ಲಿ  ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು . ಮನೆಯಿಂದ 20. 75  ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು