News Karnataka Kannada
Saturday, May 11 2024
ಕರಾವಳಿ

ಬೈಕ್‍ನಿಂದ ಬಿದ್ದು ಸಾವು

Photo Credit :

ಬೈಕ್‍ನಿಂದ ಬಿದ್ದು ಸಾವು

ಮೂಡುಬಿದಿರೆ: ಕೂಲಿ ಕಾರ್ಮಿಕರೊಬ್ಬರು ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ಮೃತಪಟ್ಟ ಘಟನೆ ನೆಲ್ಲಿಕಾರಿನ ಪೆರ್ನೋಡಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಮೃತ ವ್ಯಕ್ತಿಯನ್ನು ಮಾಂಟ್ರಾಡಿ ನಿವಾಸಿ ರಾಜು ಕೋಟ್ಯಾನ್(42)ಎಂದು ಗುರುತಿಸಲಾಗಿದೆ. ಇವರು ಬುಧವಾರ ಬೆಳಿಗ್ಗೆ ನಾರಾಯಣ ಪೂಜಾರಿ ಅವರ ಜತೆ ಬೈಕ್‍ನಲ್ಲಿ ಬಜಗೋಳಿಗೆ ಕೂಲಿ ಕೆಲಸಕ್ಕೆ ಹೊರಟಿದ್ದು ಬೈಕ್‍ನ ಹಿಂಬದಿ ಸೀಟಿನಲ್ಲಿ ಕುಳಿತಿದ್ದರು.

ನೆಲ್ಲಿಕಾರಿನ ಪೆರ್ನೋಡಿಯಲ್ಲಿ ಚಲಿಸುತ್ತಿದ್ದ ಬೈಕ್‍ನಿಂದ ಬಿದ್ದು ರಾಜು ಕೋಟ್ಯಾನ್ ಅವರ ತಲೆಗೆ ಗಂಭೀರ ಏಟು ಬಿದ್ದು ಮೃತಪಟ್ಟರೆನ್ನಲಾಗಿದೆ. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
193
Deevith S K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು