News Karnataka Kannada
Sunday, April 28 2024
ಕರಾವಳಿ

ಪುತ್ತೂರಿನಲ್ಲಿ 2ನೇ ವರ್ಷ ಮೇಲೈಸುತ್ತಿದೆ ಹಲಸು ಮೇಳ

Photo Credit :

ಪುತ್ತೂರಿನಲ್ಲಿ 2ನೇ ವರ್ಷ ಮೇಲೈಸುತ್ತಿದೆ ಹಲಸು ಮೇಳ

ಪುತ್ತೂರು: ಹಲಸಿನ ಉತ್ಪನ್ನಗಳು, ವಿವಿಧ ಜಾತಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟವನ್ನೊಳಗೊಂಡ 2 ದಿನಗಳು ನಡೆಯುವ ಹಲಸು ಸಾರ ಮೇಳ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜೂ. 15ರಂದು ಉದ್ಘಾಟನೆಗೊಂಡಿದೆ.

ಮೇಳದಲ್ಲಿ 30 ಕ್ಕೂ ಅಧಿಕ ಹಲಸಿನ ಉತ್ಪನ್ನಗಳದ್ದೆ ಮಳಿಗಗಳು ಕಂಡು ಬಂದಿದ್ದು, ಸ್ಥಳದಲ್ಲೇ ತಯಾರಿಸಿ ಕೊಡುವ ಬಿಸಿ ಬಿಸಿ ದೋಸೆ, ಹೊಳಿಗೆ ಸೇರಿದಂತೆ ಹಲಸಿನ ಕಬಾಬ್, ಚಡ್ಡಂಬಡೆ ಎಲ್ಲರಿಗೂ ಸವಿ ತಂದಿದೆ. ಮೇಳದಲ್ಲಿ ಹಲಸು ಹಪ್ಪಳದ ಚಾಟ್ ಹಾಗೂ ಹಲಸು ಕೇಸರಿಬಾತ್ ವಿಶೇಷವಾಗಿ ಕಂಡು ಬಂತ್ತು. ಜೊತೆಗೆ ಹಲಸಿನ ಉತ್ಪನ್ನಗಳ ಮಳಿಗೆಯೊಂದಿಗೆ ಕೃಷಿಗೆ ಪೂರಕವಾಗಿ ವಿವಿಧ ಜಾತಿಯ ಮಾವಿನ ಹಣ್ಣುಗಳು, ತೆಂಗಿನ ಕಾಯಿಂದ ಹುರಿದ ವಿವಿಧ ತಿನಸುಗಳು, ಹಣ್ಣಿನಿಂದ ತಯಾರಿಸಿದ ಐಸ್ ಕ್ಯಾಂಡಿ, ಐಸ್‍ಕ್ರೀಮ್ ಮಳಿಗೆಗಳು ಮೇಳಕ್ಕೆ ಬಂದವರಿಗೆ ರುಚಿಯನ್ನು ನೀಡಿತ್ತು. ಮೌಲ್ಯವರ್ಧಿತ ವಸ್ತುಗಳಾದ ಹಣ್ಣುಗಳನ್ನು ಮರದಿಂದ ಕೊಯ್ಯುವ ಸಾಧನಗಳು, ಕೃಷಿ ಸಲಕರಣೆಗಳು, ಅಡಿಕೆ ಒಣಗಿಸುವ ಸಾಧನ, ಪುಸ್ತಕ ಮಳಿಗೆ, ಬಟ್ಟೆ ಮಳಿಗೆ, ಮೆಡಿಕಲ್ ಹಾಗೂ ಆಕ್ಯುಪ್ರೆಷರ್ ಪಾದರಕ್ಷೆಗಳ ಮಳಿಗೆಗಳು ವಿಶೇಷತೆಯನ್ನು ಒಳಗೊಂಡಿತ್ತು.

ಕೃಷಿಯನ್ನು ಉದ್ಯಮವನ್ನಾಗಿ ಮಾಡಲು ಮೇಳಗಳ ಅಗತ್ಯ: ಹಲಸು ಸಾರ ಮೇಳವನ್ನು ಉದ್ಘಾಟಿಸಿದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಮ್.ಆರ್ ದಿನೇಶ್ ಅವರು ಬಳಿಕ ಕೆಂಪು ಸೋಳೆಯ ಹಲಸನ್ನು ಭಾಗ ಮಾಡುವ ಮಾಡಿ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಮಾವು ಮತ್ತು ಹಲಸು ಭಾರತದ ಮೂಲ ಹಣ್ಣುಗಳು. ಸಾವಿರಕ್ಕೂ ಹೆಚ್ಚು ತಳಿ ನಮ್ಮ ದೇಶದಲ್ಲಿದೆ. ಆದರೆ ಇದನ್ನು ಸಂಗ್ರಹಿಸಲು ರೈತರ ಜೊತೆ ಇರಬೇಕು. ರೈತ ತಮಗೆ ಗೊತ್ತಿರುವ ತಳಿಗಳನ್ನು ವಿಶ್ಲೇಷಿಸಿದಾಗ ವಿಜಾÐನಿಗಳು ತಳಿಯ ವೈವಿಧ್ಯತೆಯನ್ನು ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಇಂತಹ ಮೇಳಗಳು ಕೃಷಿಯನ್ನು ಉದ್ಯಮವನ್ನಾಗಿ ಮಾಡಲು ಸಹಕಾರಿಯಾಗುತ್ತದೆ ಎಂದ ಅವರು ಪ್ರತಿ ಮೇಳದಲ್ಲೂ ನಮಗೆ ಒಂದೊಂದು ಪಾಠ ಕಲಿಸುತ್ತದೆ ಎಂದು ಹೇಳಿದರು. ಕೃಷಿಕ ಜನಾರ್ದನ ಭಟ್ ಸೇಡಿಯಾಪು ಅವರು ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಮುಂದಿನ ದಿನ ಹಲಸೇ ಹಸಿವನ್ನು ನೀಗಿಸಲಿದೆ: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಗ್ಲೋಬಲ್ ವಾರ್‍ನಿಂದಾಗಿ ಮುಂದೆ ನಮ್ಮ ಕೃಷಿ ಬರಡಾಗುತ್ತದೆ. ನೀರಿನ ಅಭಾವದಿಂದ ಅಡಿಕೆ ಕೃಷಿ ಮಾಡಲೂ ಕಷ್ಟ ಆಗಬಹುದು. ಈ ಬದಲಾವಣೆ ಬಹಳ ದೂರ ಇಲ್ಲ. ಇದಕ್ಕೆ ತಕ್ಕಂತೆ ನಾವು ತಯಾರಿಯಾಗಿ ಇರಬೇಕು ಎಂದ ಪ್ರಪಂಚದ ಅತಿ ದೊಡ್ಡ ಹಣ್ಣು ಮತ್ತು ಅತ್ಯಂತ ಸುಲಭದಲ್ಲಿ ಬೆಳೆಸಲಾಗುವ ಹಣ್ಣು ಹಲಸು. ಇದು ಮುಂದಿನ ದಿನಗಳಲ್ಲಿ ಸಮಾಜದ ಹಸಿವನ್ನು ನೀಗಿಸುವ ಏಕಮಾತ್ರ ಉತ್ಪನ್ನವಾಗಿ ಬೆಳೆಯಲಿದೆ. ಇದು ವೈವಿಧ್ಯಮಯವಾಗಿ ಉಪಯೋಗ ಆಗುತ್ತದೆ ಎಂದು ಹೇಳಿದರು.

ಹಲಸಿನ ಹಸಿ ಸೋಳೆಗೆ ರೂ.100/- ಮಂಗಳೂರಿನ ಯಯ್ಯಾಡಿಯಲ್ಲಿರುವ ಏಸ್ ಸಂಸ್ಥೆಯಲ್ಲಿ ಹಲಸಿನ ಹಸಿ ಸೋಳೆಯನ್ನು ಚಿಪ್ಸ್ ಮಾಡಲು ಖರೀದಿಸುತ್ತಾರೆ. ಬೆಳಿಗ್ಗೆ 11.30ಕ್ಕೆ ಹಲಸಿನ ಸೋಳೆಯನ್ನು ತೆಗೆದು ಅಲ್ಲಿಗೆ ನೀಡಿದರೆ ಕೆ.ಜಿಗೆ ರೂ. 100 ಕೊಡುತ್ತಾರೆ ಎಂದು ಮಂಚಿ ಶ್ರೀನಿವಾಸ ಆಚಾರ್ ಮಾಹಿತಿ ನೀಡಿದರು.

ಸಾಕಷ್ಟು ಹಲಸು ತಳಿಯನ್ನು ಗುರುತಿಸಬೇಕಾಗಿದೆ: ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆಯವರು ಮಾತನಾಡಿ ಹಲಸು ಕೇರಳದಲ್ಲಿ ಆಫಿಶಿಯಲ್ ಹಣ್ಣು ಎಂದು ಕಾರ್ಯಗತ ಮಾಡಿಕೊಂಡಿದೆ. ಕೇರಳದಷ್ಟು ಹಲಸಿನ ಹಣ್ಣಿನ ಕುರಿತು ಅರಿತುಕೊಂಡ ರಾಜ್ಯ ಬೇರೆ ಯಾವುದು ಇಲ್ಲ. ಯಾಕೆಂದರೆ ಹಲಸಿನೊಂದಿಗೆ ಆತ್ಮೀಯತೆ ಹೇಗಿದೆ ಎಂದ ಅವರು ಹಲಸಿನ ಕಾಯಿ ಸೋಳೆ ಡಯಾಬಿಟಿಸ್‍ನವರಿಗೆ ಒಳ್ಳೆಯ ಆಹಾರ ಎಂದು ಅಲ್ಲಿ ಸಿದ್ಧವಾಗಿ. ಕಾಯಿ ಸೋಳೆ ಪ್ಯಾಕೆಟ್‍ನಲ್ಲಿ ಲಭ್ಯವಾಯಿತು. ಪರಿಣಾಮವಾಗಿ ಕೇರಳದಲ್ಲಿನ ಮೆಡಿಕಲ್‍ನಲ್ಲಿ ಡಯಾಬಿಟಿಸ್ ಔಷಧ ಮಾರಾಟ ಶೆ.25 ಕಡಿಮೆ ಆಗಿರುವುದೆ ಒಂದು ಉತ್ತಮ ಉದಾಹಾರಣೆ ಎಂದರು. ಹಲಸನ್ನು ಹಲಸಿನ ಬಗ್ಗೆ ತಾತ್ಸಾರ ನೂರೆಂಟು ಕೊರತೆಗಳನ್ನು ಹೇಳಿಕೊಂಡು ಅದರ ಒಳ್ಳೆಯತನವನ್ನು ಗುರುತಿಸಲು ಹೋದದ್ದು ತೀರಾ ಇತ್ತೀಚಿನ ದಿನಗಳಲ್ಲಿ ಎಂದ ಅವರು ಇವತ್ತು ಸಾಕಷ್ಟು ಹಲಸು ತಳಿಗಳನ್ನು ಗುರುತಿಸಬೇಕಾಗಿದೆ ಎಂದರು.

ಹಲಸಿಗ ಅಮೇರಿಕದಲ್ಲಿ ಬೇಡಿಕೆ:ಮುಳಿಯ ಜ್ಯುವೆಲರ್ಸ್‍ನ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ ಹಲಸಿನ ಬೇಡಿಕೆ ಪ್ರಸ್ತುತ ದಿನಗಳಲ್ಲಿ ಅಮೇರಿಕದಲ್ಲಿ ಇದೆ. ಈ ನಿಟ್ಟಿನಲ್ಲಿ ಅಮೇರಿಕಾಕ್ಕೆ ನಾವು ಹಲಸನ್ನು ರಫ್ತು ಮಾಡಬಹುದು. ಇದರಿಂದ ಕೃಷಿಕರ ಆದಾಯ ಹೆಚ್ಚುತ್ತದೆ ಎಂದು ಹೇಳಿದರು. ನವಚೇತನ ಸ್ನೇಹ ಸಂಗಮದ ಅಧ್ಯಕ್ಷ ಅನಂತಪ್ರಸಾದ್ ನೈತ್ತಡ್ಕ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜೆಸಿಐ ಅಧ್ಯಕ್ಷ ಗೌತಮ್ ರೈ ಸ್ವಾಗತಿಸಿ, ಹಲಸು ಸ್ನೇಹ ಸಂಗಮದ ಕಾರ್ಯದರ್ಶಿ ಸುಹಾಸ ಎ.ಪಿ ಮರಿಕೆ ವಂದಿಸಿದರು. ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಹಲಸಿನ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ಅಡಿಕೆ ಪತ್ರಿಕೆ ಕಾರ್ಯನಿರ್ವಾಕ ಸಂಪಾದಕ ಶ್ರೀಪಡ್ರೆ ಅವರು ಮಾಹಿತಿ ನೀಡಿದರು.

ಹಲಸು ಸ್ನೇಹ ಸಂಗಮದ ಸದಸ್ಯ ಮಹೇಶ್ ಪುಚ್ಚಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಮಧ್ಯಾಹ್ನ ಹಲಸಿನ ತಳಿಗಳು, ಕೃಷಿಕ್ರಮಗಳು, ತಾಂತ್ರಿಕತೆ ಮತ್ತು ಅವಕಾಶಗಳು ಕುರಿತು ಡಾ.ಜಿ.ಕರುಣಾಕರನ್ ಅವರು ಮಾಹಿತಿ ಮಾತುಕತೆ ನಡೆಸಿಕೊಟ್ಟರು. ಮೋಹನ್ ಅವರು ಕಾರ್ಯಕ್ರಮ ನಿರೂಪಿಸಿದರು.

ಮೇಳದಲ್ಲಿ ಸ್ಪೆಷಲ್:ಮೇಳದಲ್ಲಿ ವಿಶೇಷವಾಗಿ ಹಲಸಿನ ಕಾಯಿ ಹಾಗೂ ಹಣ್ಣಿನ ದೋಸೆ, ಹಲಸಿನ ಬೀಜದ ಹೊಳಿಗೆ, ಹಲಸಿನ ಹಣ್ಣಿನ ಹಲ್ವ, ಹಲಸಿನ ಹಪ್ಪಳ ಚಾಟ್, ಗುಜ್ಜೆ ಮಂಚೂರಿ, ಬೋನ್ ಲೆಸ್ ಕಬಾಬ್, ಹಲಸು ರೋಸ್ಟ್ , ಪಲಾವ್, ಪೋಡಿ, ಹಲಸಿನ ಬೀಜದ ಅಂಬೊಡೆ, ಹಲಸಿನಕಾಯಿ ಅಂಬೊಡೆ, ಹಲಸಿನಬೀಜದ ಜಾಮೂನ್ , ಹಲಸಿನಬೀಜದ ಬಿಸ್ಕೆಟ್ , ಇನ್ಟಂಟ್ ರಸಂ ಪೌಡರ್, ಹಲಸಿನಹಣ್ಣಿನ ಕೇಸರಿಬಾತ್ , ಕಲರ್ ರಹಿತ ಹಲಸಿನಹಪ್ಪಳ, ತೆಂಗಿನ ಎಣ್ಣೆಯಲ್ಲಿ ಕರಿದ ಹಲಸಿನ ಚಿಪ್ಸ್, ಹಲಸಿನ ಬೀಜದ ಬಿಸ್ಕೆಟ್ , ಉಪ್ಪುಸೊಳೆ ವಡೆ ಹಲಸಿನ ಐಸ್ ಕ್ರೀಂ , ಕ್ಯಾಂಡಿ, ಹಲಸಿನ ಬೀಜದ ಪತ್ರೊಡೆ, ಪಾಯಸ, ಗಟ್ಟಿ, ಕಡುಬು, ಹಲಸಿನ ಬೀಜದ ಬರ್ಫಿ, ಹಲಸಿನ ಹಲ್ವಾ ಮೇಳದಲ್ಲಿ ಕಂಡು ಬಂದಿದ್ದು, ಹಲಸು ಉತ್ಪನ್ನಗಳ ಕುರಿತು ಮಾತುಕತೆ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
185

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು