News Karnataka Kannada
Saturday, May 18 2024
ಕರಾವಳಿ

ಉಗ್ರರಿಗೆ ಆರ್ ಎಸ್ ಎಸ್ ಕಾರ್ಯಕರ್ತರು ಟಾರ್ಗೆಟ್: ಕಲ್ಕಡ್ಕ ಪ್ರಭಾಕರ್ ಭಟ್

Photo Credit :

ಉಗ್ರರಿಗೆ ಆರ್ ಎಸ್ ಎಸ್ ಕಾರ್ಯಕರ್ತರು ಟಾರ್ಗೆಟ್: ಕಲ್ಕಡ್ಕ ಪ್ರಭಾಕರ್ ಭಟ್

ಬಂಟ್ವಾಳ: ಭಯೋತ್ಪಾದಕರು, ದೇಶದ್ರೋಹಿಗಳಿಗೆ ಆರೆಸ್ಸೆಸ್ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದೇ ಉದ್ದೇಶ, ಶರತ್ ಹತ್ಯೆ ಹಿಂದು ಕಾರ್ಯಕರ್ತರ ಟಾರ್ಗೆಟ್ ನ ಒಂದು ಭಾಗ ಎಂದು ಆರೆಸ್ಸೆಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಸಜೀಪಮುನ್ನೂರು ಗ್ರಾಮದ ಕಂದೂರಿನಲ್ಲಿರುವ ತನಿಯಪ್ಪ ಮಡಿವಾಳ ಅವರ ಮನೆಯ ಪಕ್ಕ ಅವರ ಪುತ್ರ ಶರತ್ ಮಡಿವಾಳ ಸ್ಮರಣೆಗೋಸ್ಕರ ಶರತ್ ಅಭಿಮಾನಿಗಳು ನಿರ್ಮಿಸಿದ ಸ್ಮಾರಕವನ್ನು ಲೋಕಾರ್ಪಣೆಗೊಳಿಸಿ, ಪುಷ್ಪನಮನ ಸಲ್ಲಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಡಾ. ಭಟ್, ಕೆಲವು ಸಾವಿರ ವರ್ಷಗಳಿಂದಲೂ ಹಿಂದುಗಳನ್ನು ದಮನಿಸಲು ಸಾಕಷ್ಟು ಮತೀಯವಾದಿಗಳು ಯೋಜಿತ ಹತ್ಯೆಗಳನ್ನು ನಡೆಸುತ್ತಲೇ ಬಂದಿದ್ದು, ಶರತ್ ಹತ್ಯೆ ಅದರ ಮುಂದುವರಿದ ಭಾಗವಾಗಿದೆ. ಇದಕ್ಕೆ ಕಾಂಗ್ರೆಸ್ ನ ರಾಜನೀತಿಯು ಪ್ರೇರಣೆ ನೀಡುತ್ತಿದೆ ಎಂದು ಆಪಾದಿಸಿದರು.

ವೇದಗಳು ಹುಟ್ಟಿದ ಸಿಂಧು, ವಿವೇಕಾಂದರು ಹುಟ್ಟಿದ ಬಂಗಾಳ ನಮ್ಮಲ್ಲಿಲ್ಲ. ಯಶಸ್ವಿಯಾಗಿ ಭಾರತದ ಭೂಪಟದಿಂದ ಮತಾಂಧರು ನಮ್ಮ ಭೂಭಾಗಗಳನ್ನು ಬೇರ್ಪಡಿಸಿದರು, ಆಗಿನ ಧೂರ್ತ ರಾಜಕಾರಣ ಇದಕ್ಕೆ ಕಾರಣವಾಯಿತು. ಇದರ ಮುಂದುವರಿದ ಭಾಗವಾಗಿ ರಾಷ್ಟ್ರವಾದಿ, ಹಿಂದುತ್ವವಾದಿ ಕಾರ್ಯಕರ್ತರ ಹತ್ಯೆಯಾಯಿತು, ಶ್ರದ್ಧಾಕೇಂದ್ರಗಳ ಮೇಲೆ ಆಕ್ರಮಣ ನಡೆದವು, ಶರತ್ ಹತ್ಯೆಯೂ ಇದೇ ಯೋಜಿತ ಕೃತ್ಯದ ಭಾಗ ಎಂದು ಭಟ್ ವಿಶ್ಲೇಷಿಸಿದರು.

ಶರತ್ ಮಾಡಿದ ಕೆಲಸ ಹಿಂದು ಸಮಾಜ ಹಾಗೂ ರಾಷ್ಟ್ರಪ್ರೇಮಿ ಕೆಲಸ. ಹೀಗಾಗಿ ಆತನ ಸಾವು ಅಚಾನಕ್ ಆಗಿ ಆದದ್ದಲ್ಲ. ದೇಶಕ್ಕೋಸ್ಕರ ಶರತ್ ಮಡಿವಾಳ ಮಡಿದಿದ್ದಾನೆ. ಮಹಾಪುರುಷರ ಸಾಲಿಗೆ ಸೇರುವ ವ್ಯಕ್ತಿತ್ವ ಶರತ್ ಮಡಿವಾಳನದ್ದು ಎಂದು ಭಟ್ ಹೇಳಿದರು. ಇದೇ ಸಂದರ್ಭ ಶರತ್ ನೆನಪಿಗಾಗಿ ಗಿಡವೊಂದನ್ನು ನೆಡಲಾಯಿತು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಶರತ್ ತಂದೆ ತನಿಯಪ್ಪ ಮಡಿವಾಳ, ತಾಯಿ ನಳಿನಿ, ಮುಖಂಡರಾದ ಕೆ.ಹರಿಕೃಷ್ಣ ಬಂಟ್ವಾಳ, ಬಿ.ದೇವದಾಸ ಶೆಟ್ಟಿ, ಶರಣ್ ಪಂಪ್ ವೆಲ್, ಅಶೋಕ್ ಶೆಟ್ಟಿ ಸರಪಾಡಿ, ಸಂತೋಷ್ ರೈ ಬೋಳಿಯಾರ್, ನವೀನ್ ಸುವರ್ಣ, ವಿನೋದ್ ಕೊಡ್ಮಣ್, ಕೃಷ್ಣಪ್ಪ ಕಲ್ಲಡ್ಕ, ಡಾ.ಕಮಲ ಪ್ರಭಾಕರ ಭಟ್, ರಾಧಾಕೃಷ್ಣ ಅಡ್ಯಂತಾಯ, ಸತೀಶ್, ಲೋಹಿತ್ ಮತ್ತು ಅಪಾರ ಸಂಖ್ಯೆಯಲ್ಲಿ ಶರತ್ ಅಭಿಮಾನಿಗಳು ಸುರಿಯುವ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು