ಕಾರವಾರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ತಪ್ಪಿಸಿಕೊಂಡಿದ್ದ ಆರೋಪದಡಿ ವ್ಯಕ್ತಿವೊಬ್ಬನನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಹೆಮ್ಮಾಡಿಯ ಆಗೇರ ಕಾಲೋನಿಯ ಬಾಳೆಜಡ್ಡಿ ನಿವಾಸಿ ರಾಘವೇಂದ್ರ ಮಂಜ್ಯಾ ಚಲವಾದಿ(24) ಬಂಧಿತ ಆರೋಪಿ.ಮೇ 8ರಂದು ಯಾರೂ ಇಲ್ಲದ ವೇಳೆ ಬಾಲಕಿಯ ಮನೆಯೊಳಗೆ ಪ್ರವೇಶಿಸಿ, ಆಕೆಯ ಮೇಲೆ ಅತ್ಯಾಚಾರದ್ದು. ಆ ಬಳಿಕ ಆತ ಪರಾರಿಯಾಗಿ ತಲೆಮರೆಸಿಕೊಂಡಿದ್ದ.
ರಾಘವೇಂದ್ರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಂಗಳವಾರ ಯಲ್ಲಾಪುರದ ಉಮ್ಮಚಗಿಯ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.