News Karnataka Kannada
Sunday, May 12 2024
ವಿಜಯನಗರ

ಗಿನ್ನಿಸ್ ದಾಖಲೆ ಸೃಷ್ಟಿಸಿದ ಲಂಬಾಣಿ ಕಸೂತಿ ಕಲೆ: ಪ್ರಧಾನಿ ಮೋದಿ ಅಭಿನಂದನೆ

modi tweeted
Photo Credit : Twitter

ವಿಜಯನಗರ: ಹಂಪಿಯಲ್ಲಿ ನಡೆಯುತ್ತಿರುವ ಜಿ -20 ಮೂರನೇ ಸಾಂಸ್ಕೃತಿಕ ಕಾರ್ಯಪಡೆ (ಸಿಎಬ್ಲುಜಿ) ಸಭೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ಕುಶಲ ಕಲಾಕೇಂದ್ರದ 450 ಮಹಿಳೆಯರು ತಯಾರಿಸಿದ ಸುಮಾರು 1750 ಲಂಬಾಣಿ ಕಸೂತಿ ಕಲೆಯ ಅತಿದೊಡ್ಡ ವಸ್ತ್ರ ಪ್ರದರ್ಶನವನ್ನು ಏರ್ಪಡಿಸಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಾಧನೆ ಮಾಡಿತು.

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಜ್ಯೂರಿ ಋಷಿನಾಥ ಅವರು ಗಿನ್ನಿಸ್ ದಾಖಲೆ ಘೋಷಿಸಿ, ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಗಿನ್ನಿಸ್ ದಾಖಲೆ ಪ್ರಮಾಣ ಪತ್ರ ವಿತರಿಸಿದರು. ಈ ಕುರಿತು ಪ್ರಧಾ‌ನಿ ಮೋದಿ‌‌ ಟ್ವೀಟ್ ಮಾಡಿದ್ದು, ” ಶ್ಲಾಘನೀಯವಾದ ಪ್ರಯತ್ನ, ಇದು ಲಂಬಾಣಿ ಕಲೆ ಮತ್ತು ಕರಕುಶಲತೆಯನ್ನು ಜನಪ್ರಿಯಗೊಳಿಸುತ್ತದೆ ಮತ್ತು ಸಾಂಸ್ಕೃತಿಕ ಉಪಕ್ರಮಗಳಲ್ಲಿ ನಾರಿ ಶಕ್ತಿಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ’ ಎಂದಿದ್ದಾರೆ.

https://twitter.com/MinOfCultureGoI/status/1678406734161870848/photo/1

ಹಂಪಿಯ ಎದುರು‌ ಬಸವಣ್ಣ ವೇದಿಕೆ ಬಳಿ ಆಯೋಜಿಸಿದ್ದ ಲಂಬಾಣಿ ಕಸೂತಿ ವಸ್ತ್ರ ಪ್ರದರ್ಶನಕ್ಕೆ ಭಾರಿ ಭದ್ರತೆಯಲ್ಲಿ ಆಗಮಿಸಿದ ಜಿ-20 ರಾಷ್ಟಗಳ ಪ್ರತಿನಿಧಿಗಳನ್ನು ಲಂಬಾಣಿ ಮಹಿಳೆಯರು ನೃತ್ಯದ ಮೂಲಕ ಸ್ವಾಗತಿಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಂಬಾಣಿ ಕಸೂತಿ ಪ್ರದರ್ಶನಕ್ಕೆ ಚಾಲನೆ ನೀಡಿದರು. 450 ಲಂಬಾಣಿ ಮಹಿಳೆಯರಿಂದ ತಯಾರಾದ 11750 ಕಸೂತಿ ಕಲೆಗಳ ಪ್ರದರ್ಶನಕ್ಕಿಡಲಾಗಿತ್ತು. ಗಿನ್ನಿಸ್ ರೆಕಾರ್ಡ್ ಗೆ ಸಾಕ್ಷಿಯಾದ ಲಂಬಾಣಿ ಕಸೂತಿ ಕಲೆ ಪ್ರದರ್ಶನದಲ್ಲಿ‌ ಜಿ-20 ರಾಷ್ಟಗಳ 56 ಪ್ರತಿನಿಧಿಗಳು ಭಾಗವಹಿಸಿದ್ದರು. ಲಂಬಾಣಿ ಕಸೂತಿ ವೀಕ್ಷಿಸಲು ಆಗಮಿಸಿದ ಜಿ-20 ರಾಷ್ಟ್ರಗಳ ನಾನ ದೇಶಗಳ ಪ್ರತಿನಿಧಿಗಳು ಲಂಬಾಣಿ ನೃತ್ಯಕ್ಕೆ ಮನಸೋತು ತಮ್ಮ ಮೊಬೈಲ್ ಗಳಲ್ಲಿ ಲಂಬಾಣಿ ನೃತ್ಯ ಸೆರೆಹಿಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು