ರಾಯಚೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಮಹಿಳೆಯೋರ್ವರು ರಾಯಚೂರು ಟು ಬೆಂಗಳೂರಿಗೆ ತಡರಾತ್ರಿ ಪ್ರಯಾಣಿಸುತ್ತಿದ್ದ ವೇಳೆ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.
ಈ ಘಟನೆ ಫೆಬ್ರವರಿ 18ರಂದು ನಡೆದಿದೆ. ಮಹಿಳೆ ರಾತ್ರಿ ಕೆಎ-36,ಎಫ್-1532 ನಂಬರ್ನ ಬಸ್ನಲ್ಲಿ ಮಹಿಳೆಯೋರ್ವರು ರಾಯಚೂರು ಟು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ತಡ ರಾತ್ರಿ ಬಸ್ ಒಳಗಿನ ಲೈಟ್ ಆಫ್ ಆದಾಗ ರಾಯಚೂರು ನಗರ ಘಟಕದ ಕಂಡಕ್ಟರ್ ಲಕ್ಷ್ಮಿಕಾಂತ್ ರೆಡ್ಡಿ ಮಹಿಳೆಯ ಖಾಸಗಿ ಅಂಗಾಂಗಗಳನ್ನ ಮುಟ್ಟಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಂತ್ರಸ್ತ ಮಹಿಳೆ ಡ್ರೈವರ್ ಸೀಟ್ ಹಿಂಬದಿಯಲ್ಲಿ ಕುಳಿತು ಪ್ರಯಾಣ ಮಾಡ್ತಿದ್ದರು. ಡ್ರೈವರ್ ಮಲಗೋಕೆ ಇರುವ ಸೀಟ್ನಲ್ಲಿ ಕಂಡಕ್ಟರ್ ಮಲಗಿದ್ದ. ಪಕ್ಕದಲ್ಲಿದ್ದ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದ. ಫ್ರೀ ಟಿಕೆಟ್ ಹರಿದು ತನ್ನ ಜೇಬ್ನಲ್ಲಿ ಇಟ್ಟುಕೊಂಡು ಟಿಕೆಟ್ ಬೇಕಾದ್ರೆ ಲೈಂಗಿಕವಾಗಿ ಸಹಕರಿಸು, ಇಲ್ಲ ಫೈನ್ ಬೀಳುತ್ತೆ ಎಂದು ಹೇಳಿ ಪಟ್ಟು ಹಿಡಿದಿದ್ದ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಆದರೆ ಕಂಡಕ್ಟರ್ ನಾನು ಯಾರ ಜೊತೆಯೂ ಈ ರೀತಿ ವರ್ತಿಸಿಲ್ಲ. ಇಲಾಖೆಯಲ್ಲಿ ನನಗೆ ಆಗದೇ ಇರೋರು, ಈ ರೀತಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.