News Karnataka Kannada
Wednesday, May 08 2024
ಕಲಬುರಗಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ರಾಜ್ಯವನ್ನು ತಾಲಿಬಾನ್ ಮಾಡಲು ಹೊರಟಿದ್ದಾರೆ: ಆಂದೋಲ ಶ್ರೀ

Case registered against Andolan seer for making inflammatory speeches
Photo Credit : News Kannada

ಕಲಬುರಗಿ: ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ತಂಡ ರಾಜ್ಯವನ್ನು ಮತ್ತೊಂದು ತಾಲಿಬಾನ್ ಮಾಡಲು ಹೊರಟಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.

ಶಿವಮೊಗ್ಗ ಹಾಗೂ ಕೋಲಾರದಲ್ಲಿ ನಡೆದ ಗಲಭೆ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹಿಂದುಗಳ ಮೇಲೆ ನಡೆದ ಕಲ್ಲುತೂರಾಟ ಸರ್ಕಾರ ಪ್ರಾಯೋಜಿತ ಗಲಭೆಯಾಗಿದೆ. ಘಟನೆ ನಡೆದು ನಾಲ್ಕೈದು ದಿನಕಳೆದರೂ ಸಹ ಗಲಭೆಕೋರರ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಇದೆಲ್ಲ ನೋಡಿದ್ರೆ ನಾವು ಕರ್ನಾಟಕದಲ್ಲಿ ಇದ್ದೇವೋ ಅಥವಾ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿದ್ದೇವೋ ಎಂದು ಅನುಮಾನ ಹುಟ್ಟಿಕೊಳ್ಳುತ್ತಿದೆ. ಇದೆಲ್ಲ ಗಮನಿಸಿದರೆ ಕರ್ನಾಟಕ ಸರ್ಕಾರ ಪುಂಡರ ಹೆಡೆಮುರಿ ಕಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

ಹಿಂದೂ ಕಾರ್ಯಕರ್ತರು ಶಾಲು ಹಾಕಿಕೊಂಡು ಬಂದು ಆ ಸಂಘಟನೆ ಈ ಸಂಘಟನೆ ಎಂದರೆ ಒದ್ದು ಒಳಗೆ ಹಾಕಿ ಎಂದು ಹೇಳುವ ಸಚಿವ ಪ್ರಿಯಾಂಕ್ ಖರ್ಗೆ ಶಿವಮೊಗ್ಗ ಗಲಭೆ ನಡೆದು ನಾಲ್ಕೈದು ದಿನಗಳು ಕಳೆದರೂ ಸಹ ತುಟಿ ಬಿಚ್ಚಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎನ್ನುವ ಹಾಗೆ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಗಲಭೆ ಬೆಂಬಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗಣೇಶ ಉತ್ಸವ ಪ್ರತಿಷ್ಠಾಪನೆಗೆ ನೂರಾರು ನಿಯಮಗಳನ್ನು ಜಾರಿಗೆ ತರಲಾಗುತ್ತೆ ಅದನ್ನ ಹಿಂದೂ ಕಾರ್ಯಕರ್ತರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ ಆದರೆ ಈದ್ ಮಿಲಾದ್ ಹಬ್ಬಕ್ಕೂ ಕೂಡ ಪೊಲೀಸ್ ಇಲಾಖೆಯಿಂದ ಸಾಕಷ್ಟು ನಿಯಮಗಳು ಇದ್ದರೂ ಸಹ ಮಾರಕಸ್ತ್ರಗಳನ್ನು ಪ್ರದರ್ಶಿಸಿ ಬೆದರಿಕೆ ಹುಟ್ಟು ಹಾಕುವಂತಹ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು