News Karnataka Kannada
Monday, May 06 2024
ದೆಹಲಿ

ಕಾಂಗ್ರೆಸ್​-ಬಿಜೆಪಿ ಮಧ್ಯೆ ಮುಂದುವರಿದ “ರಾವಣ-ಮೋದಾನವ” ಪೋಸ್ಟರ್ ವಾರ್

'Ravana-Daanava' poster war continues between Congress and BJP
Photo Credit : News Kannada

ದೆಹಲಿ: ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಇದೀಗ ಪೋಸ್ಟರ್ ವಾರ್ ಶುರುವಾಗಿದೆ. ಕಳೆದ ದಿನ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನ ಬಿಜೆಪಿಯು ದುಷ್ಟ, ಧರ್ಮ ವಿರೋಧಿ ಮತ್ತು ರಾಮ ವಿರೋಧಿ ಅಂತ ಜರಿದಿತ್ತು. ಅಲ್ಲದೇ “ರಾವಣ”ನಂತೆ ರಾಹುಲ್​ರನ್ನ ಚಿತ್ರಿಸಿರುವ ಫೋಟೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಪೋಸ್ಟ್​ ಮಾಡಿದೆ.

ಇದಕ್ಕೂ ಮೊದಲು ಕಾಂಗ್ರೆಸ್​ ಪ್ರಧಾನಿ ಮೋದಿಗೆ ಸಂಬಂಧಿಸಿದ ಪೋಸ್ಟ್ ಒಂದನ್ನು ಟ್ವೀಟ್ ಮಾಡಿತ್ತು. ಅದರಲ್ಲಿ ದೊಡ್ಡ ಸುಳ್ಳುಗಾರ ಎಂದು ಟೀಕಿಸಿದೆ. ಅಲ್ಲದೆ ದಾನವನಿಗೆ (ರಾಕ್ಷಸ) ಹೋಲಿಕೆ ಮಾಡಿ ‘ಮೋದಾನವ’ ಹೆಸರಿನಲ್ಲಿ ಪೋಸ್ಟರ್‌ ಬಿಡುಗಡೆ ಮಾಡಿದೆ.

ಪೋಸ್ಟರ್​ನಲ್ಲಿ ಮೋದಿ ಫೋಟೋ ಜೊತೆಗೆ ಕಾಂಗ್ರೆಸ್​ ಪ್ರಶ್ನೆಯೊಂದನ್ನು ಕೇಳಿದೆ. ಅತಿ ದೊಡ್ಡ ಸುಳ್ಳುಗಾರ ಯಾರು ಅಂತಾ ಪ್ರಶ್ನೆ ಮಾಡಿದೆ. ಅದರ ಕಳಗೆ ಮೋದಿ ಅವರು ‘ನಾನು’ ಎಂದು ಉತ್ತರಿಸುವಂತೆ ಬರೆದಿದೆ. ಇನ್ನೊಂದು ಪೋಸ್ಟರ್​ನಲ್ಲಿ ಜುಮ್ಲಾ ಬಾಯ್ ಎಂದು ಬರೆದು ಕಾಂಗ್ರೆಸ್​ ಕಿಡಿಕಾರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು