ಬೀದರ್ : ಬಿಗ್ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರ ಹುಲಿ ಉಗುರು ಪತ್ತೆ ಆಗಿರುವುದರಿಂದ ಅವರನ್ನು ಬಂಧಿಸಲಾಗಿದೆ ಸದ್ಯ ಈ ಕುರಿತಾಗಿ ನಗರದಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದು ಸಂತೋಷ್ ಕೊರಳಲ್ಲಿ ಹುಲಿಯ ಉಗುರು ಹಾಕಿಕೊಂಡಿದ್ದಾರೆಂಬ ದೂರು ಇತ್ತು .
ಆ ದೂರಿನ ಆಧಾರದ ಮೇಲೆ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ . ವನ್ಯ ಜೀವಿಗಳ ಕಾನೂನಿನ ಆಧಾರದ ಮೇಲೆ ಅರೆಸ್ಟ್ ಮಾಡಲಾಗಿದೆ ಇದರಲ್ಲಿ ಯಾರೇ ಇದ್ದರೂ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.