News Karnataka Kannada
Thursday, May 02 2024
ಬೀದರ್

ಹುಮನಾಬಾದ್: ಕಾಂಗ್ರೆಸ್‌ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದ ಈಶ್ವರ ಖಂಡ್ರೆ

Only Congress party can develop the state, says Ishwar Khandre
Photo Credit : News Kannada

ಹುಮನಾಬಾದ್: ‘ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗುತ್ತಿದೆ. ಬಿಜೆಪಿಯ ಕಳೆದ 5 ವರ್ಷಗಳ ಸಾಧನೆ ಶೂನ್ಯ. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ನಡೆದ ಅಶೋಕ ಖೇಣಿ ನೇತೃತ್ವದ ಅಭಿವೃದ್ಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ತಕ್ಷಣ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಮನೆ ಒಡತಿಗೆ ₹ 2000 ಸಹಾಯಧನ ವಿತರಿಸುವ ಯೋಜನೆಗಳು ಜಾರಿಗೆ ತರಲಾಗುತ್ತದೆ ಎಂದರು.

ಶಾಸಕ ರಾಜಶೇಖರ್‌ ಪಾಟೀಲ ಮಾತನಾಡಿ,’ದಕ್ಷಿಣ ಕ್ಷೇತ್ರದಲ್ಲಿ ಅಶೋಕ ಖೇಣಿ ಅವರ ಅಧಿಕಾರದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅವರ ದೂರದೃಷ್ಟಿ ಎಲ್ಲರಿಗೂ ಮಾದರಿಯಾಗಲಿದೆ ಎಂದರು.

ಮಾಜಿ ಶಾಸಕ ಅಶೋಕ ಖೇಣಿ ಮಾತನಾಡಿ, ‘2013 ರಿಂದ 2018ರ ಅವಧಿಯಲ್ಲಿ ಕ್ಷೇತ್ರದೆಲ್ಲೆಡೆ ಮೂಲ ಸೌಲಭ್ಯ ಪೂರೈಕೆಗೆ ಒತ್ತು ನೀಡಿದ್ದು, ಗ್ರಾಮೀಣ ಭಾಗಕ್ಕೆ ಉತ್ತಮ ರಸ್ತೆ, ಕುಡಿಯುವ ನೀರು, ವಿದ್ಯುತ್‌, ಆರೋಗ್ಯ ಹಾಗೂ ಶಾಸಕರ ಅನುದಾನದಡಿಯಲ್ಲಿ 50ಕ್ಕೂ ಹೆಚ್ಚು ವಿದ್ಯುತ್‌ ಪರಿವರ್ತಕಗಳ ಅಳವಡಿಸಿ ರೈತರಿಗೆ ಅನುಕೂಲ ಒದಗಿಸಲಾಗಿದೆ’ ಎಂದರು.

ಅಮೃತರಾವ ಚಿಮಕೊಡೆ, ಅರವಿಂದ ಅರಳಿ, ಮೀನಾಕ್ಷಿ ಸಂಗ್ರಾಮ, ಶಾಸಕ ರಹಿಮ ಖಾನ್‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷದ ಹಲವು ಕಾರ್ಯಕರ್ತರು ಕಾಂಗ್ರೆಸ್‌ ಸೇರ್ಪಡೆಯಾದರು.

ಕಾರ್ಯಕ್ರಮದಲ್ಲಿ ಗೋವರ್ಧನ ರಾಠೋಡ್‌, ಶಿವಪುತ್ರ ಸಾದಾ, ರಮೇಶ್‌ ಖುದ್ದುಸ್‌, ಅಬ್ದುಲ್‌ ಸತ್ತರ ಸಾಬ್‌, ಸೈಯದ್‌ ಸಮಿಯೊದ್ದಿನ್‌, ನರಸಿಂಗ್‌, ಸಾಜೀದ್‌, ಉದಯ ಚಟನಳ್ಳಿ, ಚಂದ್ರಶೇಖರ್‌ ಚನ್ನಶೆಟ್ಟಿ, ರಾಜಕುಮಾರ ತೆಳಮನಿ, ಧರ್ಮೇಂದ್ರ ಪಾಟೀಲ, ವಿಜಯಕುಮಾರ ವಿಜಾಪುರೆ, ಅನೀಲರಡ್ಡಿ, ಸುನೀಲ ರಡ್ಡಿ, ಅನೀಲರಡ್ಡಿ ಲಚ್ಚನಗಾರ, ಸತೀಶ ತೆಳಮನಿ, ಅಮರ ತೆಳಮನಿ, ಜನಾರ್ದನ ರಡ್ಡಿ, ಶಿವಕುಮಾರ, ಮಲ್ಲಿಕಾರ್ಜುನ, ಮಹೇಶ್‌, ಸಂದೀಪ, ಶಿವಕುಮಾರ ಅಂಬಾಡಿ, ಪ್ರಕಾಶ, ಅನೀಲ, ಶರಣು ಪಾಟೀಲ, ನೂರೋದ್ದಿನ್‌, ರಾಮಶೆಟ್ಟಿ ಪಾಟೀಲ, ಅಜಮತ್‌ ಸಂತೋಷ ಪಾಟೀಲ, ಲೋಕೇಶ ಮಂಗಲಗಿ, ಸೂರ್ಯಕಾಂತ್‌ ಸಿಂಧೋಲ, ಶಿವರಾಜ ಹಾವಶೆಟ್ಟಿ, ಜಯಮೊದ್ದಿನ್‌ ಇತರರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು