News Karnataka Kannada
Tuesday, May 07 2024
ಬೀದರ್

ಬೀದರ್: ಸರ್ಕಾರಿ ಶಾಲೆ ಹೆಣ್ಮಕ್ಕಳಿಗೆ ಬಯಲೇ ಶೌಚಾಲಯ!

Bidar: Open toilets for girls in government schools
Photo Credit : News Kannada

ಔರಾದ್: ತಾಲೂಕಿನ ಎಕಂಬಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ವಿವಿಧ ಮೂಲ ಹಾಗೂ ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಔರಾದ್ ತಾಲೂಕು ಕೇಂದ್ರದಿಂದ 5 ಕಿ.ಮೀ. ದೂರದಲ್ಲಿರುವ ಈ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಸೌಲಭ್ಯದ ಕೊರತೆಯಿಂದ ಒಲ್ಲದ ಮನಸ್ಸಿನಿಂದಲೇ ಶಾಲೆಗೆ ಬಂದು ಹೋಗುತ್ತಿದ್ದಾರೆ.

8 ರಿಂದ 10ನೇ ತರಗತಿ ವರೆಗಿನ 222 ವಿದ್ಯಾರ್ಥಿಗಳ ಪೈಕಿ 147 ವಿದ್ಯಾರ್ಥಿನಿಯರಿದ್ದಾರೆ. ಆತಂಕ ಪಡುವ ಸಂಗತಿ ಎಂದರೆ ಈ ವಿದ್ಯಾರ್ಥಿನಿಯರಿಗೆ ಶೌಚಾಲಯ ಸೌಲಭ್ಯವಿಲ್ಲ. ಇವರು ಶೌಚಕ್ಕೆ ಶಾಲೆ ಅಕ್ಕ-ಪಕ್ಕದ ಗಿಡಮರ, ಮುಳ್ಳಿನ ಪೊದೆ ಅವಲಂಬಿಸಿದ್ದಾರೆ.

ಈ ಶಾಲೆಗೆ ಎಕಂಬಾ ಗ್ರಾಮ ಹಾಗೂ ಸುತ್ತಮುತ್ತಲಿನ ಐದಾರು ಕಿ.ಮೀ. ದೂರದ ಡೊಂಗರಗಾಂವ, ಹುಲ್ಯಾಳ, ಜಮಾಲಪುರ, ದುಡಕನಾಳ ಹಾಗೂ ವಿವಿಧ ತಾಂಡಾಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಬರುವ ಈ ವಿದ್ಯಾರ್ಥಿನಿಯರಿಗೆ ತಿರುಗಿ ಮನೆಗೆ ಹೋಗಲು ಸಂಜೆ ಆಗುತ್ತದೆ. ಅಷ್ಟೊತ್ತು ಅವರು ಶೌಚಾಲಯ ಬಳಸದೆ ಇದ್ದರೆ ಏನಾಗುತ್ತದೆ ಎಂಬುದನ್ನು ನೀವೇ ಉಹಿಸಿ ಎಂದು ಶಾಲೆ ಶಿಕ್ಷಕರೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

‘ಶಾಲೆಯಲ್ಲಿ ಶೌಚಾಲಯ ಇಲ್ಲದೆ ನಮಗೆ ಸಮಸ್ಯೆಯಾಗುತ್ತಿದೆ. ಬಯಲಲ್ಲಿ ಹೋಗಬೇಕಾದರೆ ಜನ ಇರುತ್ತಾರೆ. ಹುಡುಗರು ಆಟವಾಡುತ್ತಿರುತ್ತಾರೆ. ಕೆಲ ಬಾರಿ ಸಂಜೆ ಮನೆಗೆ ಹೋಗುವ ತನಕ ಕಾಯಬೇಕಾಗುತ್ತದೆ. ಈ ಕಾರಣ ಜಾಸ್ತಿ ನೀರು ಕುಡಿಯಲು ಯೋಚಿಸಬೇಕಾಗಿದೆ’ ಎಂದು ವಿದ್ಯಾರ್ಥಿನಿಯರು ಗೋಳು ಹೇಳಿಕೊಂಡಿದ್ದಾರೆ.

ನಮ್ಮ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇರುವುದು ನಿಜ. ಸಿಆರ್‌ಸಿ ಕಟ್ಟಡದಲ್ಲಿ ಒಂದು ಶೌಚಾಲಯ ವ್ಯವಸ್ಥೆ ಇದ್ದರೂ ಅದನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲ ಬಳಸುವುದು ಕಷ್ಟ. ಹಳೆ ಶೌಚಾಲಯ ರಿಪೇರಿ ಮಾಡಿಕೊಂಡುವಂತೆ ಸಂಬಂಧಿತರಿಗೆ ಬೇಡಿಕೆ ಸಲ್ಲಿಸಿದ್ದೇವೆ ಎಂದು ಮುಖ್ಯ ಶಿಕ್ಷಕ ಧುಳಪ್ಪ ಗಳಗೆ ತಿಳಿಸಿದ್ದಾರೆ.

ನಮ್ಮ ಶಾಲೆ ಜಮೀನು ವಿವಾದಲ್ಲಿದೆ. ಜಮೀನು ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೊಸ ಕಟ್ಟಡ ಕಟ್ಟುವಂತಿಲ್ಲ. ಈ ಕಾರಣ ವರ್ಗ ಕೋಣೆಗಳ ಕೊರತೆಯಾಗಿದೆ. ಒಂದೊಂದು ತರಗತಿಯಲ್ಲಿ 75-80 ವಿದ್ಯಾರ್ಥಿಗಳನ್ನು ಕೂರಿಸಿ ಪಾಠ ಮಾಡಬೇಕಾಗಿದೆ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಔರಾದ್‌ ತಾಲ್ಲೂಕಿನ ಎಕಂಬಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿನಿಯರು ಹೊರಗಡೆ ಪರೀಕ್ಷೆ ಬರೆಯುತ್ತಿರುವುದು-ಮಹಮ್ಮದ್ ಮಕ್ಸೂದ್, ಕ್ಷೇತ್ರ ಶಿಕ್ಷಣಾಧಿಕಾರಿ ಔರಾದ್ಶಾಲೆ ಜಮೀನು ವಿವಾದದಲ್ಲಿದೆ. ಅದನ್ನು ಪರಿಹರಿಸಲು ಪ್ರಯತ್ತಿಸುತ್ತಿದ್ದೇವೆ. ಸದ್ಯ ಹಳೆ ಶೌಚಾಲಯ ರಿಪೇರಿ ಮಾಡಿ ಉಪಯೋಗಿಸಲು ಸೂಚಿಸಲಾಗಿದೆ. -ಸತೀಶ್ ವಾಸರೆ ಜಿಲ್ಲಾಧ್ಯಕ್ಷ ಸಂಭಾಜಿ ಬ್ರಿಗೇಡರ್ನಮ್ಮ ಊರಿನ ಶಾಲೆ ಸ್ಥಿತಿ ಗಂಭೀರವಾಗಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಯಾರೂ ಇದನ್ನು ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು