News Karnataka Kannada
Tuesday, April 16 2024
Cricket
ಬೀದರ್

ಮಾದಕ ವಸ್ತುಗಳ ಮಾರಾಟ ಜಾಲ ಕಂಡುಬಂದಲ್ಲಿ ಮಾಹಿತಿ ನೀಡಿ: ಎಂ.ಡಿ. ಇಸ್ಮಾಯಿಲ್ ಇನಾಮದಾರ

Inform if a drug peddling network is found: MD Ismail Inamdar
Photo Credit : News Kannada

ಬೀದರ್: ಜೀವನದಲ್ಲಿ ಬರುವ ಕಷ್ಟಗಳಿಗೆ ವಿದ್ಯಾರ್ಥಿಗಳು ಎದೆಗುಂದಬಾರದು ಇದರಿಂದ ಮಾದಕ ವಸ್ತುಗಳ ಸೇವನೆ ಕಡೆಗೆ ವಾಲುವ ಸಾಧ್ಯತೆ ಇರುತ್ತದೆ ಆದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಬೇಕು ಮತ್ತು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಬೀದರ್ ಅಬಕಾರಿ ಉಪ ಆಯುಕ್ತ ಎಂ.ಡಿ ಇಸ್ಮಾಯಿಲ್ ಇನಾಮದಾರ ಹೇಳಿದರು.

ಅವರು ಸೋಮವಾರ ನಗರದ ಗುರುನಾನಕ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಪಂಚಾಯತ ಬೀದರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗುರುನಾನಕ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಒತ್ತಡಗಳನ್ನು ಕಡಿಮೆ ಮಾಡಲು ಯೋಗ, ಪ್ರಾಣಯಾಮ ಮಾಡಬೇಕು. ಜೀವದಲ್ಲಿ ಆದಷ್ಟು ಸಜ್ಜನರ ಸಂಘ ಮಾಡುವುದನ್ನು ರೂಡಿಸಿಕೊಳ್ಳಬೇಕು. ಮಾದಕ ವಸ್ತುಗಳ ಮಾರಾಟದ ಜಾಲಗಳು ತಮ್ಮ ಗಮನಕ್ಕೆ ಬಂದಲ್ಲಿ ತಕ್ಷಣ ಸಂಬಂಧಿಸಿದ ಇಲಾಖೆ ಮಾಹಿತಿ ನೀಡಬೇಕು ಇದರಿಂದ ಮಾದಕ ವಸ್ತುಗಳ ವಹಿವಾಟನ್ನು ನಿಯಂತ್ರಿಸಬಹುದು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರತಿಕಾಂತ ಸ್ವಾಮಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಭವಿಷ್ಯಕ್ಕಾಗಿ ಆದಷ್ಟು ಉತ್ತಮ ವಾತವರಣ ನಿರ್ಮಿಸಬೇಕು.

ಮತ್ತು ರಾಮಾಯಣ – ಮಹಭಾರತದಂತಹ ಪೌರಾಣಿಕ ಕಥೆಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಒಳ್ಳೆಯ ಸಂಸ್ಕಾರ ನೀಡಬೇಕು ಎಂದರು. ವಿದ್ಯಾರ್ಥಿಗಳು ಜೀವನದಲ್ಲಿ ಧನಾತ್ಮಕ ಚಿಂತನೆಗಳನ್ನು ಹೆಚ್ಚು ಮಾಡಬೇಕು. ಋಣಾತ್ಮಕ ಚಿಂತನೆಗಳತ್ತ ವಾಲಬಾರದು ಮತ್ತು ಜೀವನದಲ್ಲಿ ಉತ್ತಮ ಗುರಿ ಇಟ್ಟು ಮುಂದೆ ಸಾಗಬೇಕು.

ತಮ್ಮ ಸುತ್ತಮುತ್ತಲು ಯಾರಾದರು ಮಾದಕ ವೇಸನಕ್ಕೆ ಬಲಿಯಾಗಿದ್ದು ಕಂಡುಬಂದಲ್ಲಿ ಅವರಿಗೆ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು.

ಅಗತ್ಯಬಿದ್ದಲ್ಲಿ ನಮ್ಮ ಬೀದರ ಬ್ರೀಮ್ಸ್ ಆಸ್ಪತ್ರೆಯಲ್ಲಿರುವ ವೇಸನ ಮುಕ್ತ ಕೇಂದ್ರಕ್ಕೂ ಸಹ ಭೇಟಿ ನೀಡಬಹುದು ಎಂದರು.

ಬೀದರ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಆನಂದ ಉಕ್ಕಲಿ ಮಾತನಾಡಿ, ಇತ್ತೀಚೆಗೆ ಯುವಕರು ಮಾದಕ ವಸ್ತುಗಳ ಸೇವನೆಗಳತ್ತ ಹೆಚ್ಚು ಮುಖ ಮಾಡುತ್ತಿರುವುದು ದೊಡ್ಡ ದುರಂತ. ಸರ್ಕಾರ ಈ ಮಾದಕ ವಸ್ತುಗಳನ್ನು ಅಕ್ರಮವಾಗಿ ಬೆಳೆಸುವುದು, ಮಾರಾಟ ಮಾಡುವುದು ಸೇರಿದಂತೆ ಸೇವನೆ ಮಾಡುವವರ ವಿರುದ್ಧವು ಸಹ ಕಠಿಣ ಕ್ರಮಗಳನ್ನು ಜರುಗಿಸುತ್ತಿದೆ.ಆದರೂ ನಗರಿಕರಣ ಹೆಚ್ಚಿದಂತೆ ಈ ಮಾದಕ ವಸ್ತುಗಳ ನಿಯಂತ್ರಣವು ಸಹ ಅಷ್ಟೆ ಕಷ್ಠಕರವಾಗಿದೆ. ಆದರಿಂದ ಯುವಕರು ಇಂತಹ ದುಷ್ಚಟಗಳತ್ತ ವಾಲಬಾರದು ಎಂದು ಹೇಳಿದರು.

ಪ್ರಸ್ತುತ ಪಾಕಿಸ್ತಾನ, ಅಫಘಾನಿಸ್ತಾನ, ಇರಾನ, ಥೈಲ್ಯಾಂಡ್ ಸೇರಿದಂತೆ ವಕ್ರ ದೃಷ್ಠಿಕೋನ ಹೊಂದಿದ ಇತರೆ ರಾಷ್ಟ್ರಗಳು ಭಾರತಕ್ಕೆ ವಾಮಮಾರ್ಗದಿಂದ ಮಾದಕ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿವೆ, ಆದರು ನಮ್ಮ ಭಾರತ ಸರ್ಕಾರ ಇವುಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಇದರ ಫಲವಾಗಿ ಇತ್ತಿಚೇಗೆ ಅಕ್ರಮ ಮಾದಕ ವಸ್ತುಗಳ ಸಾಗಾಣಿಕೆ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ ಎಂದ ಅವರು ವಿದ್ಯಾರ್ಥಿಗಳು ಇಂತಹ ಮಾದಕ ವಸ್ತುಗಳ ಸೇವನೆಗೆ ಬಲಿಯಾಗಬಾರದು ಎಂದು ಸಲಹೆ ನೀಡಿದರು.

ಅತಿಥಿ ಉಪನ್ಯಾಸ ನೀಡಿದ ಬೀದರ್ ಬ್ರೀಮ್ಸ್  ಮಾನಸಿಕ ವಿಭಾಗದ ಮುಖ್ಯಸ್ಥೆ ಡಾ. ಶ್ವೇತಾ ಕುಣಕೆರಿ, ವಿದ್ಯಾರ್ಥಿಗಳು ತಮಗೆ ಅರಿವಿಗೆ ಬಾರದೆ ದುಷ್ಚಟಗಳತ್ತ ಹೋಗುತ್ತೀರಿ ಇದನ್ನು ಅರಿಯಬೇಕು. ಇತ್ತೀಚಿನ ಯುವ ಸಮೂಹ ಸಮಾಜಿಕ ಜಾಲತಾನಗಳಿಗೆ ಮಾರುಹೊಗುತ್ತಿದೆ. ಸಮಾಜಿಕ ಜಾಲತಾಣವು ಉತ್ತಮ ಹಾಗೂ ಕೆಟ್ಟ ಎರಡು ಮಾಹಿತಿಯನ್ನು ನೀಡುತ್ತದೆ ಆದರೆ ಅದರಿಂದ ಯಾವುದನ್ನು ಆರಿಸಿಕೊಳ್ಳಬೇಕು ಎನ್ನುವುದು ನಿಮ್ಮ ಕೈಯಲ್ಲಿದೆ ಎಂದರು.

ಈ ಸಂದರ್ಭದಲ್ಲಿ ಗುರುನಾನಕ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲಕಿ ಶಾಮಲ ವಿ. ದತ್ತಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಕಿರಣ ಎಂ. ಪಾಟೀಲ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಮನೋವೈದ್ಯ ಡಾ. ಅಮಲ್ ಶರಿಫ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ, ಜಿಲ್ಲಾ ಮಾನಸಿಕ ವಿಭಾಗದ ಮನೋಶಾಸ್ತ್ರ ಜ್ಞ ಮಲ್ಲಿಕಾರ್ಜುನ ಗುಡ್ಡೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಆಪ್ತಸಮಲೋಚಕಿ ರೇಣುಕಾ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಆಪ್ತಸಮಲೋಚಕ ಸಿಮಪ್ಪಾ ಬಿ. ಸರಕೊರೆ, ಜಿಲಾನಿ, ಶರಣಬಸಪ್ಪಾ, ಸಂಗಮೇಶ, ಪ್ರಮೋದ ರಾಠೋಡ, ಪರಶುರಾಮ, ಅಂಬಾದಾಸ ಸೇರಿದಂತೆ ಗುರುನಾನಕ ಪದವಿ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು