Bengaluru 21°C
Ad

ರಾಜ್ಯದಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ : ಬೆಂಗಳೂರಲ್ಲಿ ಅಧಿಕ

ಮುಂಗಾರು ಮಳೆ ಕಾಣಸಿಕೊಂಡ ಬೆನ್ನಿಗೆ ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಹವಮಾನ ವೈಪರೀತ್ಯದಿಂದ ಈ ರೋಗ ಮತ್ತಷಚ್ಟು ಉಲ್ಬಣಗೊಂಡಿದೆ.

ಬೆಂಗಳೂರು: ಮುಂಗಾರು ಮಳೆ ಕಾಣಸಿಕೊಂಡ ಬೆನ್ನಿಗೆ ಡೆಂಗ್ಯೂ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಹವಮಾನ ವೈಪರೀತ್ಯದಿಂದ ಈ ರೋಗ ಮತ್ತಷಚ್ಟು ಉಲ್ಬಣಗೊಂಡಿದೆ.

ಈವರೆಗೆ ವರದಿಯಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 4,886ಕ್ಕೆ ತಲುಪಿದೆ. ಕಳೆದ ತಿಂಗಳು ಈ ವೇಳೆ ಒಟ್ಟು 2,877 ಪ್ರಕರಣಗಳು ವರದಿಯಾಗಿದ್ದವು.

ಈ ವರ್ಷ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 4,063 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ 1,230 ಮಂದಿಯಲ್ಲಿ ಈ ಜ್ವರ ಖಚಿತಪಟ್ಟಿದೆ. ಮೈಸೂರು – 377, ಚಿಕ್ಕಮಗಳೂರು – 346, ಹಾವೇರಿ – 272, ಶಿವಮೊಗ್ಗ – 236, ಚಿತ್ರದುರ್ಗ – 229, ದಕ್ಷಿಣ ಕನ್ನಡ – 211 ಪ್ರಕರಣಗಳು ದೃಢ‍ಪಟ್ಟಿವೆ.

Ad
Ad
Nk Channel Final 21 09 2023
Ad