ಬೆಂಗಳೂರು: ಕೊರೊನಾ ರೂಪಾಂತರಿ EG.5 ವೈರಸ್ ವಿದೇಶಗಳಲ್ಲಿ ಆತಂಕ ಸೃಷ್ಟಿಸಿದ್ದು, ಓಮಿಕ್ರಾನ್ ತಳಿಯ ಉಪ ತಳಿ ಎರಿಸ್ EG.5 ಹೊಸ ಅಲೆಗೆ ಕಾರಣವಾಗುವ ಆತಂಕ ಸೃಷ್ಟಿಮಾಡಿದೆ. ಸದ್ಯ ಎರಿಸ್ EG.5 ಅತಿವೇಗವಾಗಿ ಹರಡುವ ರೂಪಾಂತರವಾಗುವ ಆತಂಕ ಮನೆ ಮಾಡಿದ್ದು, ಅಮೇರಿಕಾ, ಜಪಾನ್ ಹಾಗೂ ಬ್ರಿಟನ್ನಲ್ಲಿ ಹೊಸ ಅಲೆ ಸೃಷ್ಟಿಸುವ ಭೀತಿ ಶುರುವಾಗಿದೆ. ಹೀಗಾಗಿ ಇತ್ತ ಕರ್ನಾಟಕದಲ್ಲೂ ಕೋವಿಡ್ ಮತ್ತೆ ಏರಿಕೆಯ ಆತಂಕ ಶುರುವಾಗಿದೆ.
ಜೂನ್ ನಲ್ಲಿ ಪತ್ತೆಯಾಗಿದ್ದ ಓಮಿಕ್ರಾನ್ ತಳಿಯ ಉಪ ತಳಿ ಎರಿಸ್ EG.5 ಈಗ ವಿದೇಶಗಳಲ್ಲಿ ಅರ್ಭಟಿಸಲು ಮುಂದಾಗಿದೆ. ಹೀಗಾಗಿ ರಾಜ್ಯದಲ್ಲಿಯೂ ಸಹ ಕೋವಿಡ್ ಮತ್ತೆ ಭಯ ಶುರುವಾಗಿದೆ. ಹೀಗಾಗಿ ಜ್ವರ, ಕೆಮ್ಮು, ಶೀತ, ಉಸಿರಾಟದ ತೊಂದರೆ, ಆಯಾಸ, ಸ್ನಾಯಿ ಸೆಳೆತ, ತಲೆನೋವು , ಗಂಟಲು ನೋವು, ಮೂಗಿನಲ್ಲಿ ಸೊರುವಿಕೆ, ವಾಕರಿಕೆ, ವಾಂತಿ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ ಎಂದಿದ್ದಾರೆ ಆರೋಗ್ಯ ತಜ್ಞರು.