ಬೆಂಗಳೂರು: ಮೆಟ್ರೊ ರೈಲಿನಲ್ಲಿ ಚುಂಬನ, ಅಶ್ಲೀಲ ವರ್ತನೆಯಂತಹ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದರೂ ಯುವಜನರು ತಮ್ಮ ವರ್ತನೆ ತಿದ್ದಿಕೊಳ್ಳದೇ ಹುಚ್ಚಾಟ ನಡೆಸುತ್ತಾರೆ. ಅಂತಹುದೇ ಒಂದು ಘಟನೆ ನಮ್ಮ ಮೆಟ್ರೊದಲ್ಲಿ ನಡೆದಿದೆ.
ಏನಾಯ್ತು: ಮೆಟ್ರೋ ಅಧಿಕಾರಿಗಳ ಪುನರಾವರ್ತಿತ ಎಚ್ಚರಿಕೆಯ ಹೊರತಾಗಿಯೂ, ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಪಲ್ಟಿ ಹೊಡೆಯುವ ಸಾಹಸ ಮಾಡಿ ಅದನ್ನು ವಿಡಿಯೋ ಮಾಡಿದ್ದಾಳೆ. ಅಲ್ಲದೆ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಿಶಾ ಶರ್ಮಾ ಎಂಬ ಅಥ್ಲೀಟ್ ಈ ವಿಡಿಯೋ ಮಾಡಿದ್ದು, ಈ ವಿಡಿಯೋ ಸಹ ಪ್ರಯಾಣಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
View this post on Instagram