ಹಾವೇರಿ: ಕುಡಿದ ಅಮಲಿನಲ್ಲಿ ಮೋಜು ಮಾಡಲು ತೆರಳಿದ್ದ ಯುವಕನ ದುರಂತ ಅಂತ್ಯಕಂಡಿದೆ. ಹಾವೇರಿ ಜಿಲ್ಲೆ ರಾಣೆಬೇನ್ನೂರು ತಾಲೂಕಿನ ಕವಲೆತ್ತು ಗ್ರಾಮದಲ್ಲಿ ಘಟನೆ ನಡೆದಿದೆ. ಕವಲೆತ್ತು ಗ್ರಾಮದ ನಿವಾಸಿ ಬೀರೇಶ ಚಿನ್ನಿಕಟ್ಟಿ 28 ಮೃತ ವ್ಯಕ್ತಿ.

ನದಿಗೆ ಹಾರುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಸ್ನೇಹಿತರ ಜೊತೆ ತುಂಗಭದ್ರಾ ನದಿ ದಡದಲ್ಲಿ ಎಣ್ಣೆ ಪಾರ್ಟಿ ವೇಳೆ ಘಟನೆ ನಡೆದಿದೆ. ನದಿಗೆ ಹಾರುತ್ತಿರುವ ವಿಡಿಯೋ ಸ್ನೇಹಿತರ ಮೊಬೈಲ್ನಲ್ಲಿ ಸೆರೆಯಾಗಿದೆ. ನದಿಗೆ ಹಾರಿ ಸ್ವಲ್ಪ ಹೊತ್ತಿನಲ್ಲೆ ಹುಡುಕಾಡಿದರು ದೇಹ ಸಿಗಲಿಲ್ಲ. ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

View this post on Instagram

A post shared by News Karnataka (@newskarnataka)