ಮಂಗಳೂರು: ಪೇಮೆಂಟ್ ಕೋಟಾದಡಿ ಬಂದಂತಹ ಸಚಿವರು ಡಕಾಯಿತಿ ಮಾಡುತ್ತಿದ್ದಾರೆ. ಅಧಿಕಾರಿಗಳಿಂದ ಪೇಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಪೇಮೆಂಟ್ ಅಧಿಕಾರಿಗಳಿಗೆ ಸೂಚನೆ ಇದೆ. ಹಣ ಸಂಗ್ರಹ ಮಾಡಿ ಕೊಡಲು ಸೂಚನೆ ನೀಡಿದ್ದಾರೆ. ತಿಂಗಳಿಗೆ ಇಷ್ಟು ಕಲೆಕ್ಷನ್ ಮಾಡಿ. ಆಯಾ ಇಲಾಖಾ ಸಚಿವರಿಗೆ ಕೊಡಬೇಕು. ಇದನ್ನ ಸ್ವತಃ ಕಾಂಗ್ರೆಸ್ ಶಾಸಕರೇ ಪತ್ರ ಮುಖೇನ ದೂರುತ್ತಿದ್ದಾರೆ ಎಂದು ಮಂಗಳೂರು ಶಾಸಕ ವೈ ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರೇ ಸಿ ಎಂ ಗೆ ಪತ್ರ ಬರೆದಿದ್ದಾರೆ. ಈ ಸರಕಾರ ಲಂಚ ಗ್ಯಾರೆಂಟಿಯ ಸರಕಾರ. ಈ ಸರಕಾರದಲ್ಲಿ ಲಂಚ. ಮಾತ್ರ ಗ್ಯಾರೆಂಟಿ. ಅಶೋಕ್ ರೈ ಪತ್ರ ಬರೆದಿದ್ದಾರೆ. ಇದರಿಂದ ಸರಕಾರ ಹೇಗೆ ನಡಿತಿದೆ ಎನ್ನೋದು ಸ್ಪಷ್ಟ ಆಗಿದೆ. ನಮ್ಮ ಸರಕಾರಕ್ಕೆ 40% ಕಮಿಷನ್ ಆರೋಪದ ಜಾಹೀರಾತು ಕೊಟ್ರು, ಆದರೆ ಕೇವಲ ಅದು ಹಿಟ್ ಅಂಡ್ ರನ್ ಸಾಬೀತುಪಡಿಸಲು ಆಗ್ಲಿಲ್ಲ ಎಂದರು.

View this post on Instagram

A post shared by News Karnataka (@newskarnataka)