ಮಂಗಳೂರು: ಸಚಿವ ಸಂಪುಟ ಸಭೆ ಮೊದಲ ಬಾರಿ ಮಂಗಳೂರಿನಲ್ಲಿ ನಡೆಯುತ್ತಿದೆ. ಬೆಂಗಳೂರು ಬಳಿಕ ಮೊದಲ ಬಾರಿ ಮಂಗಳೂರಿನಲ್ಲಿ ನಡೆಯುತ್ತಿದೆ. ಹಿಂದೆ ಹೇಳಿದ ಮಾತಿನ ಪ್ರಕಾರವೇ ಮಂಗಳೂರಿನಲ್ಲಿ ನಡೆಯಲಿದೆ. ಮಂಗಳೂರಿನ ಬೆಳವಣಿಗೆ ಪ್ರವಾಸೋದ್ಯಮ ಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಮಂಗಳೂರಿನಲ್ಲಿ ಆರೋಗ್ಯ ಸಚಿವ ಯುಟಿ ಖಾದರ್ ಹೇಳಿಕೆ ನೀಡಿದರು.

ವಾಲ್ಮೀಕಿ ಹಗರಣದ ಹಣ ವಿಚಾರ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಅಧಿವೇಶನವನ್ನು ರಾಜಕೀಯ ಪಕ್ಷ ಪ್ರತಿಭಟನಾ ವೇದಿಕೆ ಮಾಡಬಾರದು. ಹೊರಗೆ ಎಷ್ಟು ಬೇಕಾದರೂ ಮಾಡಲಿ, ನಾವು ಏನೂ ಹೇಳಲ್ಲ. ಅಧಿವೇಶನ ಜನರ ಸಮಸ್ಯೆಗಳನ್ನು ಚರ್ಚೆ ಮಾಡಿ ಪರಿಹಾರ ಕೊಡುವ ವೇದಿಕೆಯಾಗಿದೆ. ಅಧಿವೇಶನ ಮಾಡಲು ಬಿಡದೆ ರಾಜ್ಯದ ಜನರಿಗೆ ವಂಚನೆ ಮಾಡಿದೆ. ನಾಗೇಂದ್ರ ರಾಜೀನಾಮೆ ಈಗಲೇ ಕೊಟ್ಟಿದ್ದಾರೆ ಎಂದರು.

99% ಹಣವನ್ನು ಈಗಾಗಲೇ ರಿಕವರಿ ಮಾಡಲಾಗಿದೆ. ಸರ್ಕಾರದ ಹಣ ರಿಟರ್ನ್ ಬಂದಿರೋದು ಇದೇ ಮೊದಲು. ಈಗಾಲೇ ಆ ಅಧಿಕಾರಿಗಳ ಮೇಲೆ ಕ್ರಮವಾಗಿದೆ. ನಾಗೇಂದ್ರರಿಗೆ ತನಿಖಾ ಸಂಸ್ಥೆ ಕ್ಲೀನ್ ಚಿಟ್ ಕೊಟ್ಟಿದೆ. ಮಂತ್ರಿಯಾದ ಬಳಿಕ ಈ ಘಟನೆ ಆದ ಕಾರಣ ನೈತಿಕತೆಯ ಬದ್ದತೆಯಿಂದ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿ ಬಹಳಷ್ಟು ಮುಖಂಡರಿಗೆ ನೊಟೀಸ್ ಕೊಟ್ಟಿದ್ದಾರೆ. ಬಿಜೆಪಿಯವರು ರಾಜೀನಾಮೆ ಕೊಟ್ಟು ನೈತಿಕ ಬದ್ಧತೆ ತೋರಿಸಲಿ. ಪುತ್ತೂರು ಶಾಸಕ ಅಶೋಕ್ ರೈ ಯಿಂದ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ಆರೋಪ ಮಾಡಲಾಗಿದೆ.

ನಮ್ಮ‌ಹೆಸರು ಹೇಳಿಕ ಹಣ ವಸೂಲಿ ಮಾಡಿರೋದು ಗಮನಕ್ಕೆ ಬಂದಿಲ್ಲ. ಹಾಗಿದ್ದಲ್ಲಿ ನಾನೇ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕ್ಷೇತ್ರದ ಇಂಜಿನಿಯರ್ ಗಳು ಆ ವಿಚಾರದಲ್ಲಿ ಇಲ್ಲ. ನಮ್ಮ‌ ಜಿಲ್ಲೆಯ ಇತಿಹಾಸದಲ್ಲಿ ಆ ರೀತಿಯ ಘಟನೆ ಆಗಿಲ್ಲ, ಇಂಜಿನಿಯರ್ ಗಳು ಬರುವ ಸಂಧರ್ಭದಲ್ಲೇ ಹದ್ದುಬಸ್ತುನಲ್ಲಿ ಇಟ್ಟುಕೊಳ್ಳುತ್ತೇವೆ. ಅಶೋಕ್ ರೈ ಜೊತೆ ಬೇರೆ ವಿಷಯಕ್ಕೆ ಫೋನ್ ನಲ್ಲಿ ಮಾತನಾಡಿದ್ದೇನೆ. ಅಶೋಕ್ ರೈ ಆರೋಪದ ಬಗ್ಗೆ ನನ್ನ ಗಮನಕ್ಕೆ ಇಲ್ಲ. ತನಿಖೆಯ ಮೂಲಕ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುತ್ತೇವೆ ಎಂದು ಮಂಗಳೂರಿನಲ್ಲಿ ದ.ಕ ಉಸ್ತುವಾರಿ ಸಚಿವ ಯುಟಿ ಖಾದರ್ ಹೇಳಿಕೆ ನೀಡಿದ್ದಾರೆ.

View this post on Instagram

A post shared by News Karnataka (@newskarnataka)