Bengaluru 28°C
Ad

ಆಕಾಶ್ ಸಂಸ್ಥೆಯ ಶ್ರೇಯಸ್ ನೀಟ್‌ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಹಾಸನ ಶಾಖೆಯ ವಿದ್ಯಾರ್ಥಿ ಶ್ರೇಯಸ್ ಅವರು ಪ್ರತಿಷ್ಠಿತ ನೀಟ್ ಯುಜಿ ೨೦೨೪ ಪರೀಕ್ಷೆಯಲ್ಲಿ ೭೦೫ ಅಂಕಗಳೊಂದಿಗೆ ೧೧೫೧ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಶಾಖೆ ಮುಖ್ಯಸ್ಥರಾದ ಪ್ರವೀಣ್ ಕುಲಕರ್ಣಿ ತಿಳಿಸಿದರು.

ಹಾಸನ : ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಹಾಸನ ಶಾಖೆಯ ವಿದ್ಯಾರ್ಥಿ ಶ್ರೇಯಸ್ ಅವರು ಪ್ರತಿಷ್ಠಿತ ನೀಟ್ ಯುಜಿ ೨೦೨೪ ಪರೀಕ್ಷೆಯಲ್ಲಿ ೭೦೫ ಅಂಕಗಳೊಂದಿಗೆ ೧೧೫೧ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಶಾಖೆ ಮುಖ್ಯಸ್ಥರಾದ ಪ್ರವೀಣ್ ಕುಲಕರ್ಣಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಗಮನಾರ್ಹ ಸಾಧನೆಯು ಸಂಸ್ಥೆಯ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಉತ್ಕೃಷ್ಟ ಗುಣಮಟ್ಟದ ತರಬೇತಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಫಲಿತಾಂಶ ಪ್ರಕಟಿಸಿದೆ.

ವಿದ್ಯಾರ್ಥಿಗಳ ಅಸಾಧಾರಣ ಸಾಧನೆಯ ಕುರಿತು ಹೆಮ್ಮೆ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯ ಮುಖ್ಯ ಶೈಕ್ಷಣಿಕ ಮತ್ತು ವ್ಯವಹಾರ ಮುಖ್ಯಸ್ಥರಾದ ಧೀರಜ್ ಕುಮಾರ್ ಮಿಶ್ರಾ ಅವರು, ವಿದ್ಯಾರ್ಥಿಗಳನ್ನು ಅವರ ಅನುಕರಣಿಯ ಸಾಧನೆಗಾಗಿ ನಾವು ಅಭಿನಂದಿಸುತ್ತೇವೆ ಎಂದು ಶುಬ ಹಾರೈಸಿದ್ದಾರೆ.

ದೇಶದೆಲ್ಲೆಡೆಯ ೨೦ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ೨೦೨೪ ಪರೀಕ್ಷೆಗೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಯು ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮತ್ತು ಅವರ ಹೆತ್ತವರ ಬೆಂಬಲವನ್ನು ಬಣ್ಣಿಸುತ್ತದೆ. ನಮ್ಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾಡುವ ಎಲ್ಲ ಪ್ರಯತ್ನಗಳಿಗೆ ನಾವು ಶುಭ ಹಾರೈಸುತ್ತೇವೆ ಎಂದರು.

ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಪದವಿಗಳಿಗೆ ಪ್ರವೇಶ ಪಡೆಯಲು ಹಾಗೂ ವಿದೇಶದಲ್ಲಿ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರತಿ ವರ್ಷವೂ ಅರ್ಹತಾ ಪರೀಕ್ಷೆಯಾಗಿ ಅನ್ನು ನಡೆಸುತ್ತದೆ.

ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ನೀಟ್ ನಲ್ಲಿ ೭೦೫ ಅಂಕ ಪಡೆದ ಟಾಪರ್ ಶ್ರೇಯಸ್ ಮಾಧ್ಯಮದೊಂದಿಗೆ ಮಾತನಾಡಿ, ವಿಷಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಶಿಸ್ತಿನ ಅಧ್ಯಯನದೊಂದಿಗೆ ವೇಳಾಪಟ್ಟಿಯನ್ನು ಪಾಲಿಸಿರುವುದು ತಮ್ಮ ಯಶಸ್ಸಿಗೆ ಕಾರಣವೆಂದು ಸಾಧಕ ವಿದ್ಯಾರ್ಥಿಗಳು ಬಣ್ಣಿಸಿದರು.

ಜಾಗತಿಕವಾಗಿ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದು ಎಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ನೀಟ್ ಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳಲು ಎ.ಇ.ಎಸ್.ಎಲ್. ನ ತರಗತಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆದಿದ್ದು,

ಈ ಎರಡೂ ವಿಷಯಗಳಲ್ಲಿ ಆಕಾಶ್ ಸಂಸ್ಥೆಯು ಮಾಡಿರುವ ಸಹಾಯಕ್ಕೆ ನಾವು ಕೃತಜ್ಞರಾಗಿರುತ್ತೇವೆ. ನೀಡಿರುವ ವಿಷಯ ಮತ್ತು ತರಬೇತಿ ಅಲ್ಲದಿದ್ದರೆ ಈ ಅಲ್ಪಾವಧಿಯಲ್ಲಿ ನಾವು ವಿವಿಧ ವಿಷಯಗಳಲ್ಲಿ ಅನೇಕ ಪರಿಕಲ್ಪನೆಗಳನ್ನು ಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ” ಎಂದು ವಿದ್ಯಾರ್ಥಿಗಳು ಅಭಿಪ್ರಾಯಿಸಿದರು.

ಮೊಬೈಲ್ ಕಡೆ ಹೆಚ್ಚಿನ ಗಮನ ಕೊಡದೇ ಓದುವಿನ ಕಡೆ ಹೆಚ್ಚಿನ ಕಾಳಜಿ ಇದ್ದರೇ ಮಾತ್ರ ಸಾಧನೆ ಮಾಡಬಹುದು ಎಂದು ಕಿವಿಮಾತು ಹೇಳಿದರು. ಈ ವೇಳೆ ಸಂಸ್ಥೆಯ ಸಹಾಯಕ ನಿರ್ದೇಶಕ ಸಾಮವೇದಂ ಬಾಲ ಶ್ರೀನಿವಾಸ್ ಇತರರು ಉಪಸ್ಥಿತರಿದ್ದರು

Ad
Ad
Nk Channel Final 21 09 2023
Ad