Ad

ಒಂದೇ ರೂಂನಲ್ಲಿ ಪ್ರಜ್ವಲ್​ ಮತ್ತು ಸೂರಜ್​ ರೇವಣ್ಣ ಟೈಂ ಪಾಸ್

Pk

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಮತ್ತು ಅಸಹಜ ಲೈಂಗಿಕ ದೌರ್ಜ್ಯನ ಕೇಸ್​ನಡಿ ಹೆಚ್​.ಡಿ ರೇವಣ್ಣನವರ ಇಬ್ಬರು ಮಕ್ಕಳು ಜೈಲು ಸೇರಿದ್ದಾರೆ. ಅಣ್ಣ ಸೂರಜ್​ ರೇವಣ್ಣ ಮತ್ತು ತಮ್ಮ ಪ್ರಜ್ವಲ್​ ರೇವಣ್ಣ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಸದ್ಯ ಇಬ್ಬರನ್ನು ಜೈಲಿನಲ್ಲಿ ಒಂದೇ ಸೆಲ್ ನಲ್ಲಿ ಇರಿಸಲಾಗಿದೆ.

Ad
300x250 2

ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಪ್ರಜ್ವಲ್​​ನನ್ನು ಅಣ್ಣ ಸೂರಜ್​ ರೂಂಗೆ ಶಿಫ್ಟ್ ಮಾಡಲಾಗಿದೆ. ಇಬ್ಬರು ಒಂದೇ ರೂಂನಲ್ಲಿ ಎರಡು ದಿನದಿಂದ ಇದ್ದಾರೆ.

ಇನ್ನು ಇಬ್ಬರ ರೂಂಗೆ ಟಿವಿ ಸಹ ಇಲ್ಲ. ಯಾವುದೇ ದಿವಾನ್ ಕಾಟ್ ಸಹ ಇಲ್ಲ. ಕೇವಲ ಚಾಪೆ ದಿಂಬು ಬಿಟ್ಟರೆ ಯಾವುದನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.

ಇಬ್ಬರು ಗೋಡೆಯ ಆ ಕಡೆ ಮತ್ತು ಈ ಕಡೆ ಇಬ್ಬರು ಚಾಪೆ ಮೇಲೆ ಕುಳಿತುಕೊಂಡು ಚರ್ಚೆ ಮಾಡುತ್ತಿದ್ದಾರೆ.  ನ್ಯೂಸ್ ಪೇಪರ್ ಓದುತ್ತಾ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.

Ad
Ad
Nk Channel Final 21 09 2023
Ad