Bengaluru 28°C
Ad

ಸತ್ಯಮಂಗಲದಲ್ಲಿ ನೂರಾರು ಸಸಿ ನೆಡುವ ಮೂಲಕ ಪರಿಸರ ಜಾಗೃತಿ

ನಗರದ ಸತ್ಯಮಂಗಲ ೬೦ ಅಡಿ ರಸ್ತೆಯ ಬದಿಯಲ್ಲಿ ನೂರಾರು ಸಸಿ ನೆಡುವ ಮೂಲಕ ಪರಿಸರ ಜಾಗ್ರತಿ ಕಾರ್ಯವನ್ನು ಹಲವು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೆಳಿಗ್ಗೆ ಯಶಸ್ವಿಯಾಗಿ ನಡೆಸಲಾಯಿತು.

ಹಾಸನ: ನಗರದ ಸತ್ಯಮಂಗಲ ೬೦ ಅಡಿ ರಸ್ತೆಯ ಬದಿಯಲ್ಲಿ ನೂರಾರು ಸಸಿ ನೆಡುವ ಮೂಲಕ ಪರಿಸರ ಜಾಗ್ರತಿ ಕಾರ್ಯವನ್ನು ಹಲವು ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೆಳಿಗ್ಗೆ ಯಶಸ್ವಿಯಾಗಿ ನಡೆಸಲಾಯಿತು.

ಸತ್ಯಮಂಗಲ ಬಡಾವಣೆಯ ಸನ್ ರೈಸ್ ಏಕೋ ಕ್ಲಬ್ ಸಂಸ್ಥೆ, ಕೆಂಪೇಗೌಡ ನಗರ ಕ್ಷೇಮಾಭಿರುದ್ದಿ ಸಂಘ, ಶ್ರೀ ಲಕ್ಷ್ಮಿ ನಾರಾಯಣ ಕ್ಷೇಮಾಭಿರುದ್ದಿ ಸಂಘದ ಆಶ್ರಯದಲ್ಲಿ ಸ್ಥಳೀಯ ನಾಗರಿಕರು, ಸಂಘ ಸಂಸ್ಥೆಯ ಸದಸ್ಯರ ಒಳಗೊಂಡ ತಂಡವು ಬೆಳಿಗ್ಗೆ ೨೫೦ ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಪರಿಸರ ಪ್ರೇಮಿ ಕಾರ್ಯವನ್ನು ಮಾಡಿದರು.

ಈ ಕುರಿತು ಸನ್ ರೈಸ್ ಏಕೋ ಕ್ಲಬ್ ನ ಅಧ್ಯಕ್ಷರಾದ ಇಂದ್ರಕುಮಾರ್ ಮಾತನಾಡಿ, ಪರಿಸರ ಸಮರಕ್ಷಣೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಕೊಡುಗೆಯಾಗಿ ನೀಡಿದ್ದ ೨೫೦ ಕ್ಕೂ ಹೆಚ್ಚು ಸಸಿಗಳನ್ನು ಹಾಸನ ಪಬ್ಲಿಕ್ ಶಾಲೆಯಿಂದ ಸತ್ಯ ಮಂಗಲ ಮುಖ್ಯ ರಸ್ತೆಯ ಕೊನೆಯವರೆಗೂ ನಡೆಲಾಗಿದೆ ಜೊತೆಗೆ ಹಾಸನ್ ಪಬ್ಲಿಕ್ ಶಾಲೆಯ ಪಕ್ಕದಲ್ಲಿ ಉದ್ಯಾನವನ ನಿರ್ಮಾಣ ಮಾಡುತ್ತಿದ್ದು ಅಲ್ಲಿ ಪಕ್ಷಿಗಳಿಗೆ ಅನುಕೂಲವಾಗಲಿ ಎಂದು ಹಣ್ಣಿನ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದೇವೆ ಎಂದರು.

ಇದೆ ವೇಳೆ ಕೆಂಪೇಗೌಡ ನಗರ ಕ್ಷೇಮಾಭಿರುದ್ದಿ ಸಂಘದ ಅಧ್ಯಕ್ಷ ಸುಧೀರ್ ಕೃಷ್ಣ ಹಾಗೂ ಶ್ರೀ ಲಕ್ಷ್ಮಿ ನಾರಾಯಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಶ್ವನಾಥ್ ಇತರರು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad