Bengaluru 22°C
Ad

ದಾರಿ ತಪ್ಪಿಸುವ ಜಾಹೀರಾತಿಗೆ ನಟಿಸಿದವರೇ ಹೊಣೆ ಆಗಬೇಕು : ವರುಣ್ ಚಕ್ರವರ್ತಿ ಎಚ್ಚರಿಕೆ

ದಾರಿ ತಪ್ಪಿಸುವ ಜಾಹೀರಾತಿಗೆ ನಟಿಸಿದವರೇ ಹೊಣೆ ಆಗಬೇಕು : ವರುಣ್ ಚಕ್ರವರ್ತಿ ಎಚ್ಚರಿಕೆ

ಹಾಸನ : ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುವ ಜಾಹೀರಾತುಗಳಿಗೆ ಅವುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು ಹಾಗೂ ಇನ್‌ಫ್ಲುಯೆನ್ಸರ್‌ಗಳೂ ನೇರವಾಗಿ ಹೊಣೆಗಾರರಾಗುವಂತೆ ಮಾಡಬೇಕು ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗ ಅಧ್ಯಕ್ಷ ವರುಣ್ ಚಕ್ರವರ್ತಿ ಹಾಸನ ಎಚ್ಚರಿಕೆ ನೀಡಿದ್ದಾರೆ ಅಲ್ಲದೆ, ಜಾಹೀರಾತುಗಳನ್ನು ಪ್ರಸಾರ ಮಾಡುವವರು ಇನ್ನುಮುಂದೆ ಸ್ವಯಂ ಘೋಷಣೆ ಸಲ್ಲಿಸಬೇಕು.

ಅದರಲ್ಲಿ ತಾವು ಜಾಹೀರಾತುಗಳ ನಿಯಮಕ್ಕೆ ಬದ್ದರಾಗಿದ್ದು, ಈಗ ಪ್ರಸಾರ ಮಾಡುತ್ತಿರುವ ಜಾಹೀರಾತು ಕೂಡ ನಿಯಮಕ್ಕೆ ಅನುಗುಣವಾಗಿದೆ ಎಂದು ಖಾತ್ರಿ ನೀಡಬೇಕು ಎಂದು ಸೂಚನೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಒಂದು ಸುತ್ತೋಲೆಯನ್ನು ಹೊರಡಿಸಬೇಕು ಆಯುರ್ವೇದ ಕಂಪನಿಯ ವಂಚಕರು ಜಾಹೀರಾತುಗಳ ಕುರಿತಾದ ಹಾಗೂ ತೈಲ ಆಹಾರಇನ್ನು ಕೆಲವು ಕಂಪನಿಗಳು ಗ್ರಾಹಕರಿಗೆ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ.

ಇದರಿಂದ ಅನೇಕ ಕಡೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಸಾವು ನೋವು ಸಂಭವಿಸುತ್ತದೆ ಅದಕ್ಕಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಒಂದು ನಿರ್ಧಾರ ಕೈಗೊಳ್ಳಬೇಕು ಎಂದರು.

Ad
Ad
Nk Channel Final 21 09 2023
Ad