Ad

ಟೈಯರ್ ಬ್ಲಾಸ್ಟ್ : ಹಳ್ಳಕ್ಕೆ ಇಳಿದ 108 ಆಂಬುಲೆನ್ಸ್

ರೋಗಿಯನ್ನು ಕರೆತರುತ್ತಿದ್ದ ೧೦೮ ಆಂಬುಲೆನ್ಸ್ ವಾಹನದ ಟೈಯರ್ ಬ್ಲಾಸ್ಟ್ ಆಗಿ ರಸ್ತೆ ಬದಿಯ ಹಳ್ಳಕ್ಕೆ ಇಳಿದ ಘಟನೆ ನಡೆದಿದೆ.

ಹಾಸನ: ರೋಗಿಯನ್ನು ಕರೆತರುತ್ತಿದ್ದ ೧೦೮ ಆಂಬುಲೆನ್ಸ್ ವಾಹನದ ಟೈಯರ್ ಬ್ಲಾಸ್ಟ್ ಆಗಿ ರಸ್ತೆ ಬದಿಯ ಹಳ್ಳಕ್ಕೆ ಇಳಿದ ಘಟನೆ ನಡೆದಿದೆ.
ಹಾಸನದ ವರವಲಯದ ಶ್ರೀರಾಮನಗರ ಬಳಿ ಘಟನೆ ನಡೆ ದಿದ್ದು ಟೈಯರ್ ಬ್ಲಾಸ್ಟ್ ಆಗುತ್ತಿ ದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ.

Ad
300x250 2

ಅರಕಲಗೂಡಿನಿಂದ ಹಾಸನಕ್ಕೆ ರೋಗಿಯನ್ನು ಕರೆತರು ತ್ತಿದ್ದ ಆಂಬುಲೆನ್ಸ್ ರಸ್ತೆ ಬದಿಯ ಹಳ್ಳಕ್ಕೆ ಇಳಿದು ವಾಲಿದ ನಂತರ ಆಂಬುಲೆನ್ಸ್ ನಲ್ಲಿದ್ದ ರೋಗಿ ಸೇರಿ ಮೂವರಿಗೆ ಸಣ್ಣಪುಟ್ಟ ಗಾಯ ಗಳಾಗಿದೆ.ಘಟನೆ ನಂತರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬೇರೆ ಆಂಬುಲೆನ್ಸ್ ನಲ್ಲಿ ರೋಗಿಯನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Ad
Ad
Nk Channel Final 21 09 2023
Ad