Bengaluru 27°C
Ad

ಭಗವದ್ಗೀತೆಯಲ್ಲಿ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾದ ಸರ್ಕಾರಿ ಶಾಲೆ ಶಿಕ್ಷಕ

Daeth

ಗದಗ: ಸರ್ಕಾರಿ ಶಾಲಾ ಶಿಕ್ಷಕನೊಬ್ಬ ತಾನು ಮನೆಯಲ್ಲಿ ಓದಲು ಇಟ್ಟುಕೊಂಡಿದ್ದ ಭಗವದ್ಗೀತೆ ಪುಸ್ತಕದಲ್ಲಿ ಡೆತ್‌ನೋಟ್ ಬರೆದಿಟ್ಟು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ.

ಸರ್ಕಾರಿ ಶಾಲೆಯ ಶಿಕ್ಷಕ ಭಗವದ್ಗಿತೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ನಗರದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ಮೃತರನ್ನು ಈಶಪ್ಪ ಕಟ್ಟಿಮನಿ (40) ಎಂದು ಗುರುತಿಸಲಾಗಿದೆ.

ಇನ್ನು ಈ ಶಿಕ್ಷಕ ನೇಣು ಬಿಗಿದುಕೊಳ್ಳುವ ಮೊದಲು ಸೆಲ್ಫಿ ವೀಡಿಯೊ ಮಾಡಿದ್ದಾರೆ. ಈ ಸೆಲ್ಫಿ ವಿಡಿಯೋದಲ್ಲಿ ನನ್ನ ಸಾವಿಗೆ ಅಳಿಯಂದಿರು‌ ಕಾರಣ.ನನ್ನ ಹೆಂಡತಿಯ ಸಹೋದರರಾದ ಅನಿಲ್ ಪವಾರ ಮತ್ತು ಮಂಜುನಾಥ ಪವಾರ. ಸಾಧ್ಯವಾದರೆ ಅವರಿಗೆ ಶಿಕ್ಷೆಯನ್ನು ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ, ಭಗವದ್ಗೀತೆ ಪುಸ್ತಕದ ಮುಖಪುಟದ ಒಳಭಾಗದಲ್ಲಿ ತನ್ನ ಸಾವಿಗೆ ಅಳಿಯಂದಿರೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟಿದ್ದಾರೆ.

ಇನ್ನು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತಂತೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ‌ ದಾಖಲು ಆಗಿದೆ.

Ad
Ad
Nk Channel Final 21 09 2023
Ad