Bengaluru 23°C
Ad

ವೈದ್ಯರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು: ಡಾ. ಸಂತೋಷ್ ನೇತಾ

ನಗರದ ಪ್ರತಿಷ್ಠಿತ ೨ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಇಂದು ಭೇಟಿನೀಡಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವಕುರಿತು ಪರಿಶೀಲನೆ ನಡೆಸಲಾಗಿದೆಎಂದುಜಿಲ್ಲಾ ಸಲಹಾ ಸಮಿತಿಅಧ್ಯಕ್ಷಡಾ. ಸಂತೋಷ್ ನೇತಾ ಹೇಳಿದರು.

ಚಿಕ್ಕಮಗಳೂರು: ನಗರದ ಪ್ರತಿಷ್ಠಿತ ೨ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಇಂದು ಭೇಟಿನೀಡಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿರುವಕುರಿತು ಪರಿಶೀಲನೆ ನಡೆಸಲಾಗಿದೆಎಂದುಜಿಲ್ಲಾ ಸಲಹಾ ಸಮಿತಿಅಧ್ಯಕ್ಷಡಾ. ಸಂತೋಷ್ ನೇತಾ ಹೇಳಿದರು.

ಅವರುಇಂದು ಸಲಹಾ ಸಮಿತಿಯ ಪದಾಧಿಕಾರಿಗಳೊಂದಿಗೆ ನಗರದಶ್ರೀ ಲಕ್ಷ್ಮಿ ಮೆಡಿಕೇರ್ ಹಾಗೂ ಶ್ರೀನಿವಾಸ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಕ್ಯಾನಿಂಗ್ ಸೆಂಟರ್‌ಗಳು ದಾಖಲಾತಿ, ಸ್ಕ್ಯಾನಿಂಗ್ ಹೇಗೆ ನಡೆಯುತ್ತಿದೆ, ಡಾಟಾಎಂಟ್ರಿ, ಹೆಣ್ಣು ಭ್ರೂಣ ಲಿಂಗಪತ್ತೆ ಮಾಡುತ್ತಿರುವ ಬಗ್ಗೆಯೂ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದ್ದು, ಈ ಸಂಬಂಧ ಸಲಹಾ ಸಮಿತಿ ಪದಾಧಿಕಾರಿಗಳು ಸಭೆ ನಡೆಸಿ ರಾಜ್ಯ ಸಲಹಾ ಸಮಿತಿಗೆ ವರದಿ ಸಲ್ಲಿಸುತ್ತೇವೆ ಎಂದರು.

ಕಾನೂನು ರೀತಿಇರಬೇಕಾದಎಲ್ಲಾ ವಿವರಗಳನ್ನು ಪರಿಶೀಲಿಸಿದ್ದು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿದೆ. ಸಾರ್ವಜನಿಕರಲ್ಲಿ ಹೆಣ್ಣು ಭ್ರೂಣ ಲಿಂಗಪತ್ತೆ ಬಗ್ಗೆ ಈಗಾಗಲೇ ಸಲಹಾ ಸಮಿತಿ ಬಿಡುಗಡೆ ಮಾಡಿರುವದೂರವಾಣಿ ಸಂಖ್ಯೆ ೦೮೨೬೨ ೨೯೫೭೫೦ ಇರುವ ನಾಮಫಲಕವನ್ನು ಅಳವಡಿಸುವಂತೆ ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಹೇಳಿದರು.

ದಿನನಿತ್ಯ ಸ್ಕ್ಯಾನಿಂಗ್ ಮಾಡುವಾಗ ಸರ್ಕಾರದ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿಅನುಸರಿಸುವುದುಕಷ್ಟವಾಗುತ್ತಿದೆ ಎಂಬ ಬಗ್ಗೆ ಸ್ಕ್ಯಾನಿಂಗ್ ಸೆಂಟರ್ ವೈದ್ಯರಿಂದ ಅಭಿಪ್ರಾಯ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಬದಲಾವಣೆ ಮಾಡಲುಅವಕಾಶವಿದೆಯೇ ಎಂಬ ಬಗ್ಗೆ ನಿರ್ಧರಿಸುತ್ತೇವೆಎಂದು ತಿಳಿಸಿದರು.

ರೋಗಿಗಳಿಗೆತೊಂದರೆಯಾಗದಂತೆ ಕಾನೂನು ಸಹಿತ ಪಾಲನೆಯಾಗಬೇಕು. ಡಾಕ್ಟರ್‌ಗಳಿಗೂ ದಿನನಿತ್ಯದ ಕೆಲಸಕಾರ್ಯಗಳಿಗೆ ತೊಂದರೆಕಡಿಮೆಯಾಗಬೇಕೆಂಬ ದೃಷ್ಟಿಯಿಂದ ಏನೇನು ಸಲಹೆಗಳು ಬೇಕು ಅದನ್ನು ತಿಳಿದುಕೊಂಡು ರಾಜ್ಯ ಸಲಹಾ ಸಮಿತಿಗೆ ವರದಿ ಸಲ್ಲಿಸುತ್ತೇವೆಎಂದರು.

ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣ ಸಮಿತಿ ಅಧ್ಯಕ್ಷರು ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ  ಡಾ.ಎಂ.ಶಶಿಕಲಾಮಾತನಾಡಿ, ಸರ್ಕಾರದ ನಿಯಮಗಳನ್ನು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸರಿಯಾಗಿ ಪಾಲನೆ  ಮಾಡುತ್ತಿದ್ದಾರೆಂಬುದರ ಕುರಿತು ಇಂದು ಲಕ್ಷ್ಮಿ ಮೆಡಿಕೇರ್ ಮತ್ತು ಶ್ರೀನಿವಾಸ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿ, ಸಲಹಾ ಸಮಿತಿ ಮತ್ತು ಮೇಲ್ವಿಚಾರಣ ಸಮಿತಿ ಒಟ್ಟುಗೂಡಿ ಕಾರ್ಯಾಚರಣೆ ಕೈಗೊಂಡಿದ್ದೇವೆಂದು ಹೇಳಿದರು.

ಭೇಟಿನೀಡಿದ ಸಂದರ್ಭದಲ್ಲಿ ಸಣ್ಣಪುಟ್ಟ ನ್ಯೂನತೆಗಳು ಕಂಡುಬಂದಿದ್ದು, ಸರ್ಕಾರದ ನಿಯಮದ ಪ್ರಕಾರ ಫಲಕಗಳನ್ನು ಅಳವಡಿಸಬೇಕು. ಅದರಂತೆ ಫಲಕಗಳನ್ನು ಹಾಕಿರಲಿಲ್ಲ. ಬಿ ಫಾರಂ ಅಪ್ಡೇಟ್ ಮಾಡಿಸಿರಲಿಲ್ಲ. ಈ ಎಲ್ಲದರ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದರು.

ಹೆಣ್ಣು ಭ್ರೂಣ ಲಿಂಗಪತ್ತೆ ಹಾಗೂ ಹತ್ಯೆ ಮಾಡಿರುವ ಬಗ್ಗೆ ಇದುವರೆಗೆಯಾವುದೇದೂರು ಬಂದಿಲ್ಲ. ಆದರೂ ಸಮಿತಿಯ ಪದಾಧಿಕಾರಿಗಳು ದೂರವಾಣಿ ಸಂಖ್ಯೆಯ ಪೋಸ್ಟರ್‌ನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದ್ದು, ವೈದ್ಯರು ಮತ್ತು ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ ದೂರು ನೀಡಿದರೆ ಅಂತಹ ಸ್ಕ್ಯಾನಿಂಗ್ ಸೆಂಟರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಇದೆ ತಿಂಗಳಲ್ಲಿ ೩ ಕ್ಲಿನಿಕ್‌ಗಳಿಗೆ ಭೇಟಿನೀಡಿ ಪರಿಶೀಲಿಸಿದ್ದು, ಹೆಣ್ಣು ಭ್ರೂಣ ಹತ್ಯೆಎಂಬುದು ವ್ಯಾಪಕವಾಗಿ ನಡೆಯುತ್ತಿದೆಆದರೆ ಬೆಳಕಿಗೆ ಬರುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಲಹಾ ಸಮಿತಿಯ ಮೂಲಕ ಹೆಣ್ಣುಮಕ್ಕಳು ಮತ್ತು ಸಾರ್ವಜನಿಕರಲ್ಲಿಅರಿವು ಮೂಡಿಸಿರುವುದರಿಂದ ಇಂತಹ ಪ್ರಕರಣಗಳು ಇಳಿಮುಖಗೊಂಡಿವೆ. ಜೊತೆಗೆಇದನ್ನುತಡೆಗಟ್ಟುವಲ್ಲಿ ವೈದ್ಯರು ಮತ್ತು ನಾಗರಿಕರು ಸಲಹಾ ಸಮಿತಿಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿಜಿಲ್ಲಾ ಸಲಹಾ ಸಮಿತಿಉಪಾಧ್ಯಕ್ಷರಾದರಘುನಂದನ್‌ಎಂ.ಎಲ್, ಸದಸ್ಯರಾಗಿ ವಿನಯ್, ಕಾವ್ಯಸಂತೋಷ್, ಪ್ರವೀಣ್ ಬಿ.ಎಲ್, ಜಿಲ್ಲಾತಪಾಸಣಾ ಮತ್ತು ಮೇಲ್ವಿಚಾರಣ ಸಮಿತಿಯ ಸದಸ್ಯರುಗಳಾದ ಡಾ.ಪಾಂಡುರಂಗಯ್ಯ.ಡಾ. ವಿನಯ್, ಡಾ.ಸಚಿನ್, ರೋಟರಿ ಸಂಸ್ಥೆಯರಘುನಂದನ್, ಸುದೀರ್, ಹರ್ಷ ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad