Bengaluru 21°C
Ad

ಕ್ವಾರಿಗಳಲ್ಲಿ ಚಿರತೆಗಳ ಓಡಾಟ : ತೀವ್ರ ನಿಗಾ ವಹಿಸಿದ ಅರಣ್ಯ ಇಲಾಖೆ

ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ಹೊಸೂರು ಗ್ರಾಮದಲ್ಲಿ ಕ್ವಾರಿಗಳಲ್ಲಿ ಚಿರತೆಗಳ ಓಡಾಟದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಚಿರತೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ತೀವ್ರ ನಿಗಾ ಇರಿಸಿದೆ.

ಚಾಮರಾಜನಗರ: ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ತಾಳವಾಡಿ ಸಮೀಪದ ಹೊಸೂರು ಗ್ರಾಮದಲ್ಲಿ ಕ್ವಾರಿಗಳಲ್ಲಿ ಚಿರತೆಗಳ ಓಡಾಟದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಚಿರತೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ತೀವ್ರ ನಿಗಾ ಇರಿಸಿದೆ.

ತಮಿಳುನಾಡಿನ ಸತ್ಯಮಂಗಲದ ಹುಲಿ ಸಂರಕ್ಷಿತ ಪ್ರದೇಶದ ತಾಳವಾಡಿ ಅರಣ್ಯದಲ್ಲಿ ವಾಸಿಸುವ ಚಿರತೆಗಳು ತಾಳವಾಡಿ ಪ್ರದೇಶದಲ್ಲಿನ ಕ್ವಾರಿಗಳಿಂದ ನುಸುಳುತ್ತವೆ ಮತ್ತು ಜಾನುವಾರುಗಳನ್ನು ಬೇಟೆಯಾಡುತ್ತವೆ. ಈ ಪರಿಸ್ಥಿತಿಯಲ್ಲಿ ತಾಳವಾಡಿ ಸಮೀಪದ ಹೊಸೂರು ಗ್ರಾಮದ ಕರಿಕಲ್ಲು ಗಣಿಯಲ್ಲಿ ಚಿರತೆಯೊಂದು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ.

ಾ

ಈ ದೃಶ್ಯ ಕಂಡು ರಸ್ತೆಗೆ ಆಗಮಿಸಿದ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸದ್ಯ ಅಲ್ಲಿಗೆ ತೆರಳಿದ ಅರಣ್ಯ ಇಲಾಖೆ ಚಿರತೆಯ ಹೆಜ್ಜೆ ಗುರುತುಗಳ ಜಾಡು ಹಿಡಿದು ಚಿರತೆ ಚಲನವಲನದ ಮೇಲೆ ತೀವ್ರ ನಿಗಾ ವಹಿಸಿದ್ದು, ಚಿರತೆ ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ.

Ad
Ad
Nk Channel Final 21 09 2023
Ad