Bengaluru 23°C
Ad

ಹುಲಿಯನ್ನ ಬೆನ್ನಟ್ಟಿದ ಗಜರಾಜ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಘಟನೆ.

ಕಾಡಿನ ನಡುವೆ ಕೆರೆಯಲ್ಲಿ ಮಿಂದೆದ್ದು ವಿಶ್ರಮಿಸುತ್ತಿದ್ದ ಹುಲಿಯನ್ನ ಕಂಡು ಕೋಪೋದ್ರಿಕಗೊಂಡ ಗಜರಾಜ ಅಟ್ಟಿಸಿಕೊಂಡು ಹೋದ ಅತ್ಯದ್ಭುತ ದೃಶ್ಯ ಬಂಡೀಪುರದಲ್ಲಿ ಕಾಣಸಿಕ್ಕಿದೆ, ಆನೆಯ ಆರ್ಭಟದ ದೃಶ್ಯವನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿರುವ ದ್ರಶ್ಯ ಈಗ ಸಖತ್ ವೈರಲ್ ಆಗಿದೆ.

ಚಾಮರಾಜನಗರ:   ಕಾಡಿನ ನಡುವೆ ಕೆರೆಯಲ್ಲಿ ಮಿಂದೆದ್ದು ವಿಶ್ರಮಿಸುತ್ತಿದ್ದ ಹುಲಿಯನ್ನ ಕಂಡು ಕೋಪೋದ್ರಿಕಗೊಂಡ ಗಜರಾಜ ಅಟ್ಟಿಸಿಕೊಂಡು ಹೋದ ಅತ್ಯದ್ಭುತ ದೃಶ್ಯ ಬಂಡೀಪುರದಲ್ಲಿ ಕಾಣಸಿಕ್ಕಿದೆ, ಆನೆಯ ಆರ್ಭಟದ ದೃಶ್ಯವನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿರುವ ದ್ರಶ್ಯ ಈಗ ಸಖತ್ ವೈರಲ್ ಆಗಿದೆ.

ಇತ್ತೀಚಿಗೆ ಸುರಿದ ವರ್ಷಧಾರೆಗೆ ಪ್ರತಿಷ್ಠಿತ ವನ್ಯಜೀವಿ ತಾಣ ಬಂಡೀಪುರ ತನ್ನ ಪ್ರಕೃತಿ ಸೌಂದರ್ಯ ವನ್ನ ಹೆಚ್ಚಿಸಿಕೊಳ್ಳುವ ಜೊತೆಯಲ್ಲೇ ಸಪಾರಿ ಪ್ರಿಯರನ್ನ ತನ್ನತ್ತ ಕೈಬೀಸಿ ಸೆಳೆಯುತ್ತಿದೆ. ದಿನದಿಂದ ದಿನಕ್ಕೆ ಸಪಾರಿ ಪ್ರಿಯರ ಸಂಖ್ಯೆಯನ್ನ ಹೆಚ್ಚಿಸಿಕೊಂಡಿರುವ ಬಂಡೀಪುರದಲ್ಲಿ ವನ್ಯಜೀವಿಗಳ ಅದ್ಬುತ ದೃಶ್ಯಾವಳಿಗಳನ್ನ ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಸಪಾರಿಗೆ ತೆರಳಿದ್ದ ವೇಳೆ ಕೆರೆಯಲ್ಲಿ ವಿಶ್ರಮಿಸುತ್ತಿದ್ದ ಹುಲಿಯನ್ನ ಬೆನ್ನಟ್ಟಿ ಬಂದ ಆನೆ ತುಸು ದೂರದವರೆಗೆ ಹಿಮ್ಮೆಟ್ಟಿಸಿದ ದೃಶ್ಯವನ್ನ ಪ್ರವಾಸಿಗರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಸದ್ಯ ಹುಲಿ ಆನೆ ನಡುವಿನ ರೋಚಕ ದೃಶ್ಯ ಸಖತ್ ವೈರಲ್ ಆಗಿದೆ.

Ad
Ad
Nk Channel Final 21 09 2023
Ad