Bengaluru 22°C
Ad

ಬೀದರ್‌: ಕಿಡಿಗೇಡಿಗಳಿಂದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಕಿಟಕಿ ಪುಡಿ, ಸಿಸಿ ಟಿವಿ ಕಳವು

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಪುಡಿಗೊಳಿಸಿ ಸಿಸಿ ಟಿವಿ ಕಳವು ಮಾಡಿರುವ ಘಟನೆ ಸೋಮವಾರ ನಡೆದಿದೆ.

ಹುಮನಾಬಾದ್‌ : ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಿಟಕಿ ಗಾಜುಗಳನ್ನು ಕಿಡಿಗೇಡಿಗಳು ಪುಡಿಗೊಳಿಸಿ ಸಿಸಿ ಟಿವಿ ಕಳವು ಮಾಡಿರುವ ಘಟನೆ ಸೋಮವಾರ ನಡೆದಿದೆ.

ಈ ಕುರಿತು ಕಾಲೇಜು ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಅಮಾನೆ ಅವರು ಹುಮನಾಬಾದ್‌ ಪೊಲೀಸ್‌ ಠಾಣೆಗೆ ಮನವಿ ಸಲ್ಲಿಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಕೆಲ ದಿನಗಳಿಂದ ಕಿಡಿಗೇಡಿಗಳು ಪಟ್ಟಣದ ಕಾಲೇಜಿನ ಕಿಟಿಕಿ, ಬಾಗಿಲು ಒಡೆದು ಆಸ್ತಿ ಹಾಳು ಮಾಡುತ್ತಿದ್ದಾರೆ. ಸೋಮವಾರ ಬಕ್ರೀದ್‌ ನಿಮಿತ್ತ ಕಾಲೇಜಿಗೆ ರಜೆಯಿದ್ದ ಹಿನ್ನಲೆ ಕಾಲೇಜಿನ ಕಿಟಿಕಿ ಪುಡಿಗೊಳಿಸಿ, ಸಿಸಿ ಟಿವಿ ಕಳವು ಮಾಡಿದ್ದಾರೆ.

ಬಾಲಕಿಯರ ಕಾಲೇಜಿನಲ್ಲಿ ನಿರಂತರವಾಗಿ ಕಿಡಿಗೇಡಿಗಳ ಕಾಟ ಹೆಚ್ಚಾಗಿದ್ದು, ಇಂತ ದುಷ್ಕೃತ್ಯ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಲೇಜು ಪ್ರಾಚಾರ್ಯರು ಒತ್ತಾಯಿಸಿದರು.

Ad
Ad
Nk Channel Final 21 09 2023
Ad